ಕೂಡ್ಲಿಗಿ: ಮದುವೆಯ ಆಸೆ ತೋರಿಸಿ ಅಪ್ರಾಪ್ತೆ ಮೇಲೆ ಕಾಮುಕನ ಅಟ್ಟಹಾಸ

By Kannadaprabha News  |  First Published Nov 16, 2020, 2:41 PM IST

ಬಾಲಕಿಗೆ ಅರಿಶಿಣದಾರದ ತಾಳಿ ಕಟ್ಟಿ ನಂಬಿಸಿ ಅತ್ಯಾಚಾರವೆಸಗಿದ ಯುವಕ| ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ನಡೆದ ಘಟನೆ| ಕೂಡ್ಲಿಗಿ ಪೊಲೀಸ್‌ ಠಾಣೆಯಲ್ಲಿ ಯುವಕನ ವಿರುದ್ಧ ದೂರು ದಾಖ​ಲಿ​ಸಿ​ದ ಸಂತ್ರಸ್ತ ಬಾಲಕಿ| ಪ್ರಕರಣ ದಾಖಲಿಸಿ​ಕೊಂಡು ವಿಚಾರಣೆ ಆರಂಭಿ​ಸಿ​ದ ಪೊಲೀ​ಸರು| 


ಕೂಡ್ಲಿಗಿ(ನ.16): ಹದಿನಾರು ವರ್ಷದ ಬಾಲಕಿಯನ್ನು ಇಪ್ಪತ್ತು ವರ್ಷದ ಯುವಕನೊಬ್ಬ ಅರಿಶಿಣದಾರದ ತಾಳಿ ಕಟ್ಟಿ ನಂಬಿಸಿ ತಮ್ಮ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿರುವ ಘಟನೆ ಪಟ್ಟಣದ ರಾಜೀವ್‌ ನಗರದಲ್ಲಿ ಸಂಭ​ವಿ​ಸಿ​ದೆ. 

ಈ ಬಗ್ಗೆ ಅತ್ಯಾಚಾರಕ್ಕೊಳಗಾಗಿರುವ ಅಪ್ರಾಪ್ತೆ ಶನಿವಾರ ರಾತ್ರಿ ಕೂಡ್ಲಿಗಿ ಪೊಲೀಸ್‌ ಠಾಣೆಯಲ್ಲಿ ಯುವಕನ ಮೇಲೆ ದೂರು ದಾಖ​ಲಿ​ಸಿ​ದ್ದಾಳೆ. ಶುಕ್ರವಾರ ಸಂಜೆ ಪಟ್ಟಣದ ಚೌಡಪ್ಪ ಎನ್ನುವ 20 ವರ್ಷದ ಯುವಕ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ, ನಿನ್ನೇ ಪ್ರೀತಿಸುತ್ತೇನೆ ಎಂದು ನಂಬಿ​ಸಿ​ದ್ದಾನೆ. ಆನಂತ​ರ ಆಕೆಯನ್ನು ಪಟ್ಟಣದಿಂದ ಹೊಸಪೇಟೆ ತಾಲೂಕಿನ ಹನುಮನಹಳ್ಳಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ದೇವಸ್ಥಾನವೊಂದರಲ್ಲಿ ಅರಿಶಿಣ ದಾರ ಕಟ್ಟಿಮದು​ವೆಯ ನಾಟ​ಕ​ವಾ​ಡಿ​ದ್ದಾನೆ.

Tap to resize

Latest Videos

undefined

ಅನೈತಿಕ ಸಂಬಂಧ: ಹೆತ್ತವಳ ಮೇಲೆಯೇ ಅತ್ಯಾಚಾರ ಎಸಗಿ ಕೊಲೆಗೈದ ಮಗ

ಆನಂತರ ನಾಗೇನಹಳ್ಳಿಯ ಅವರ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿ ರಾತ್ರಿ ಪ್ರತ್ಯೇಕ ಕೋಣೆಯಲ್ಲಿ ಇಬ್ಬರು ಮಲಗಿಕೊಂಡಿದ್ದಾಗ ಬಲವಂತವಾಗಿ ಅತ್ಯಾಚಾರ ಮಾಡಿರುತ್ತಾನೆ ಎಂದು ನೊಂದ ಬಾಲಕಿ ಕೂಡ್ಲಿಗಿ ಪೊಲೀಸ್‌ ಠಾಣೆಗೆ ತೆರಳಿ ಶನಿವಾರ ರಾತ್ರಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿ​ಕೊಂಡ ಪೊಲೀ​ಸರು ವಿಚಾರಣೆ ಆರಂಭಿ​ಸಿ​ದ್ದಾನೆ.
 

click me!