
ಪಣಜಿ(ಮಾ. 03) ಇದೊಂದು ವಿಚಿತ್ರ ಪ್ರಕರಣ. ಮಹಿಳೆಯಿಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ. ಇಲ್ಲಿ ಸಲಿಂಗಕಾಮದ ಸ್ವರವು ಕೇಳಿಬಂದಿದೆ.
ಪ್ರೆಂಚ್ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ನಡೆದಿದ್ದು ವರದಿಯಾಗಿದೆ. ಆಕೆಗೆ ಬಲವಂತವಾಗಿ ಡ್ರಗ್ಸ್ ನೀಡಿ ಹಿಂಸಿಸಲಾಗಿದೆ. ಗೋವಾದಲ್ಲಿ ಕಳೆದ ವಾರ ಪ್ರಕರಣ ನಡೆದಿದ್ದು ದೌರ್ಜನ್ಯ ಎಸಗಿದವಳು ಎಲ್‌ಜಿಬಿಟಿ ಹೋರಾಟಗಾರ್ತಿ, ಖ್ಯಾತ ಬರಹಗಾರ್ತಿ!
ಫೆಬ್ರವರಿ 23 ರಂದು, ಫ್ರೆಂಚ್ ಮಹಿಳೆಗೆ ಬಲವಂತವಾಗಿ ಡ್ರಗ್ಸ್ ನೀಡಲಾಗಿದೆ.ಮಹಿಳೆ ಪದ್ಯಾರೀಸ್ ನಲ್ಲಿ ಯೋಗ ತರಬೇತಿ ನೀಡುವ ಕೆಲಸ ಮಾಡುತ್ತಿದ್ದು ಭಾರತಕ್ಕೆ ಬಂದಿದ್ದರು. ಇಸ್ಟಾ ಮೂಲಕ ಆರೋಪಿ ಈ ಮಹಿಳೆಯನ್ನು ಸಂಪರ್ಕ ಮಾಡಿದ್ದರು.
ರೋಡಲ್ಲೆ ಪ್ಯಾಂಟ್ ಬಿಚ್ಚಿ ಅಸಹ್ಯ.. ಮೈಸೂರು ಗೋಳು
ಒಂದು ದಿನ ಲಂಚ್ ಗೆ ಬರಲು ಆಹ್ವಾನ ನೀಡಿದ್ದು ಪ್ರೆಂಚ್ ಮಹಿಳೆ ಹೋಗಿದ್ದಾರೆ. ಇದಾದ ಮೇಲೆ ಹೋಟೆಲ್ ಕೋಣೆಗೆ ಒಟ್ಟಿಗೆ ಬರಲು ಹೇಳಿದ್ದಾರೆ. ಪ್ರೆಂಚ್ ಮಹಿಳೆ ಕೆಲವು ತಂತ್ರ ವಿದ್ಯೆ ಪ್ರಯೋಗ ಮಾಡಿದ್ದಾರೆ.
ಮಹಿಳೆ ಜತೆ ಆಪ್ತ ಸಮಾಲೋಚನೆಗೆ ಇಳಿದಿದ್ದಾರೆ. ನಾನು ಬೆನ್ನು ನೋವಿನಿಂದ ತೊಂದರೆ ಪಡುತ್ತಿದ್ದೇನೆ ಎಂದು ಆತಂಕ ಹೇಳಿಕೊಂಡಿದ್ದಾರೆ. ಇದನ್ನೆ ಬಳಸಿಕೊಂಡ ಹೋರಾಟಗಾರ್ತಿ ಕೆಲವು ಆಸನ ಮಾಡಲು ಹೇಳಿದ್ದು ಪರಿಣಾಮ ಫ್ರೆಂಚ್ ಮಹಿಳೆ ತಲೆಸುತ್ತಿ ಬಿದ್ದಿದ್ದಾರೆ. ಮಧ್ಯಾಹ್ನ 1.30 ರಿಂದ ಸಂಜೆ 6 ರವರೆಗೆ ಪ್ರಜ್ಞೆ ಕಳೆದುಕೊಂಡಿದ್ದು ಈ ವೇಳೆ ತನ್ನ ಮೇಲೆ ದೌರ್ಜನ್ಯವಾಗಿದೆ. ನನ್ನ ಖಾಸಗಿ ಅಂಗಗಳನ್ನು ಆಕೆ ತನಗೆ ಹೇಗೆ ಬೇಕೋ ಹಾಗೆ ಬಳಸಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣದ ಬೆನ್ನು ಹತ್ತಿದ್ದದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ