Ballari Accident: ಪೊಲೀಸರ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿ ಬೇಕು?

By Ravi Nayak  |  First Published Aug 26, 2022, 1:55 PM IST
  • ಪೊಲೀಸರ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿ ಬೇಕು?
  • ನಗರದಲ್ಲಿ ಲಾರಿಗಳ ಓಡಾಟಕ್ಕೆ ಬ್ರೇಕ್ ಹಾಕೋರು ಯಾರು?
  • ನಿಷೇಧವಿದ್ರೂ ಎಗ್ಗಿಲ್ಲದೇ ಓಡಾಡ್ತಿವೆ ಲಾರಿಗಳು.
  • ಟ್ರಾಫಿಕ್ ಪೊಲೀಸರು ದಂಡ ವಸೂಲಿ ಮಾಡೋದ್ರಲ್ಲಿ ಬ್ಯುಸಿ!

ವರದಿ ; ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ (ಆ.26) : ಹಗಲು ಹೊತ್ತಿನಲ್ಲಿ ನಗರ ಪ್ರದೇಶದಲ್ಲಿ ಲಾರಿ ಸೇರಿದಂತೆ ಭಾರಿ ಗಾತ್ರದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಆದರೂ ಎಗ್ಗಿಲ್ಲದೇ ಲಾರಿಗಳು ಓಡಾಡ್ತಿರೋ ಹಿನ್ನಲೆ ಕಳೆದ ಎಂಟು ತಿಂಗಳಲ್ಲಿ ಬಳ್ಳಾರಿ(Ballari) ನಗರ ಪ್ರದೇಶಗಳಲ್ಲಿ ನಡೆದ ಅಪಘಾತ(Accident)ಗಳಲ್ಲಿ ಮೂವತ್ತು ಜನರು ಸಾವನ್ನಪ್ಪಿದ್ದಾರೆ. ಇದು ವ್ಯವಸ್ಥೆಯ ಲೋಪದೋಷವೋ ಅಥವಾ ಪೊಲೀಸರ‌ ನಿರ್ಲಕ್ಷ್ಯವೊ ಗೊತ್ತಿಲ್ಲ ಅಮಾಯಕ ಪ್ರಾಣಗಳು ಮಾತ್ರ ಹಾರಿ ಹೋಗಿವೆ. ಇನ್ನೂ ಅಪಘಾತಗಳ ಸಂಖ್ಯೆ ಗಣನೀಯ ಏರುತ್ತಿದ್ದು, ಸಾರ್ವಜನಿಕರು ಅಂಗೈ ಯಲ್ಲಿ ಜೀವಹಿಡಿದು ಸಂಚರಿಸುವಂತಾಗಿದೆ.

Tap to resize

Latest Videos

undefined

ಅಂತ್ಯಕ್ರಿಯೆಗೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ: ಒಂದೇ ಕುಟುಂಬದ ಮೂವರ ದುರ್ಮರಣ

ಟ್ರಾಫಿಕ್ ನಿಯಂತ್ರಣ ಮಾಡೋರೆ ಇಲ್ಲ:

ಹೌದು,  ನಗರದ ಪ್ರಮುಖ ವೃತ್ತ, ರಸ್ತೆಗಳಲ್ಲಿ ಸದಾ ಜನಜಂಗುಳಿ. ನೂರಾರು ವಾಹನಗಳ ಸಂಚಾರ ದಿಂದ ಟ್ರಾಫಿಕ್‌ ಜಾಮ್‌(Traffic Jam) ಸೇರಿದಂತೆ ‌ವಿವಿಧ ತೊಂದರೆಗಳನ್ನು‌ ಜನ ಸಾಮಾನ್ಯರು ಎದುರಿಸುತ್ತಿದ್ದಾರೆ. ಆದ್ರೇ ಸಂಚಾರ ಹಾಗೂ ವಾಹನ ದಟ್ಟಣೆ ನಿಯಂತ್ರಣ ಮಾಡಬೇಕಾದ ಪೊಲೀಸರು ಮಾತ್ರ ಕೇವಲ ಫೈನ್ ಕಲೆಕ್ಟ್ ಮಾಡೋದ್ರಲ್ಲಿ ಬಿಜಿಯಾಗಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಹೆಸರಿಗೆ ಮಾತ್ರ ಸಂಚಾರ ಪೊಲೀಸರು ದಿನದ 24 ಗಂಟೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದ್ರೇ ಟ್ರಾಫಿಕ್ ‌ಜಾಮ್ ನಿಯಂತ್ರಣ ಮಾಡುವಲ್ಲಿ, ಭಾರಿ ವಾಹನಗಳು ನಗರ ಪ್ರವೇಶ ಮಾಡೋದನ್ನು ಅಥವಾ ಅಪಘಾತ ತಡೆಯುವಲ್ಲಿ ವಿಫಲರಾಗಿದ್ದಾರೆ.

ಸುಖಾಸುಮ್ಮನೆ ವಾಹನ ತಡೆಯುತ್ತಾರೆ:
 
ಸಂಚಾರ ನಿಯಮ ಪಾಲನೆ ಗಾಗಿ ಪ್ರತಿನಿತ್ಯ ವೃತ್ತ, ರಸ್ತೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರಿ ಠಾಣೆ ಪೊಲೀಸರು ವಾಹನಗಳ ದಾಖಲೆ ಪರಿಶೀಲನೆಗೆಂದು ಸವಾರರನ್ನು ತಡೆದು ದಂಡ ವಸೂಲಿ ಮಾಡುತ್ತಾರೆ. ಇಲಾಖೆಯಿಂದ ನೀಡಿದ ದಂಡ ವಸೂಲಾತಿ ಗುರಿ ಸಾಧಿಸಲು ತೋರುವ ಇಚ್ಛಾಶಕ್ತಿ ಯನ್ನು ಲಾರಿಗಳ ಓಡಾಟಕ್ಕೆ ಕಡಿವಾಣ ಹಾಕುವಲ್ಲಿ ತೋರುತ್ತಿಲ್ಲ ಎಂಬ ಆರೋಪವಿದೆ. ನಿತ್ಯ ಶಾಲಾ, ಕಾಲೇಜಿಗೆಂದು ನಿತ್ಯ ಸಾವಿರಾರು ವಿದ್ಯಾರ್ಥಿಗಳು, ವ್ಯಾಪಾರ ವಹಿವಾಟು ಸೇರಿದಂತೆ ವಿವಿಧ  ಕಾರಣಗಳಿಗಾಗಿ ಗ್ರಾಮೀಣ ಪ್ರದೇಶದಿಂದ ಜನತೆ ಜಿಲ್ಲಾಕೇಂದ್ರಕ್ಕೆ ಆಗಮಿಸುತ್ತಾರೆ. ಆದ್ರೇ ಭಾರಿ ವಾಹನಗಳ ಸಂಚಾರದಿಂದ ಪಾದಚಾರಿಗಳು, ಬೈಕ್‌ ಸೇರಿ ಸಣ್ಣ ಪುಟ್ಟ ವಾಹನಗಳ ಸವಾರರ ಆತಂಕಕ್ಕೂ ಕಾರಣವಾಗಿದೆ. ಮತ್ತೊಂದೆಡೆ ಭಾರಿ ವಾಹನಗಳ ಸಂಚಾರದಿಂದ ನಗರದಲ್ಲಿ ಧೂಳು ಹೆಚ್ಚಿದ್ದು, ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ.

ಬೈಪಾಸ್ ದುರಸ್ತೆ ಯಾವಾಗ?

ಬೆಂಗಳೂರಿನಿಂದ ಮತ್ತು ಆಂಧ್ರ ಕಡೆಯಿಂದ ಬಂದು ಹೊಸಪೇಟೆಗೆ ಹೋಗೋರಿಗೆ ಹೊಸಪೇಟೆ ಬೈಪಾಸ್‌ ಇದೆ.‌ಆದ್ರೆ ಆ ರಸ್ತೆ ದುರಸ್ತಿಯಲ್ಲಿ ಇರುವುದರಿಂದ ಹಾಗೂ ಸಿರುಗುಪ್ಪ ರಸ್ತೆಯ ಬೈಪಾಸ್‌ ಆಗದಿರುವ ಹಿನ್ನೆಲೆ ಬಳ್ಳಾರಿ ನಗರಕ್ಕೆ ಲಾರಿಗಳು ಪ್ರವೇಶಿಸುತ್ತಿವೆ. ಹೀಗಾಗಿ ಇದನ್ನು ತಡೆಯುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಇನ್ನೂ ಈ ಬಗ್ಗೆ  ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ ಅಡಾವತ್  ಮಾತನಾಡಿ  ಪೂರ್ಣ ಪ್ರಮಾಣದಲ್ಲಿ ಹಗಲು ಹೊತ್ತಿನಲ್ಲಿ ನಗರ ಪ್ರದೇಶದ ಭಾಗದಲ್ಲಿ ಲಾರಿಗಳ ಓಡಾಟಕ್ಕೆ ಕಡಿವಾಣ ಹಾಕಲು ಲಾರಿ ಮಾಲೀಕರರೊಂದಿಗೆ ಸಭೆ ನಡೆಸಿ ಸೂಚನೆ ನೀಡಲಾಗುವುದು. ಮತ್ತು ಅಪಘಾತ ತಡೆಗೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ..

ಅಪಘಾತದಲ್ಲಿ ಪಾಲಕರು ಮೃತಪಟ್ಟರೆ ಹೆಣ್ಣು ಮಕ್ಕಳಿಗೂ ವಿಮಾ ಪರಿಹಾರ: ಹೈಕೋರ್ಟ್‌
 
ಕರಾಳ ಘಟನೆಗೆ ಸಾಕ್ಷಿಯಾದ ಮೂವರ ಸಾವು:

ಮೊನ್ನೆ ಮೂರಾರ್ಜಿ ವಸತಿ ಶಾಲೆಯ ವಾರ್ಡನ್ ವೀರೇಶ್ ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕೌಲ ಬಜಾರ ಮೇಲ್ಸೇತುವೆ ಮೇಲೆ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿತ್ತು. ಆಗ ವೀರೇಶ್ ಸೇರಿದಂತೆ ಪತ್ನಿ ಓರ್ವ ಮಗು ಸಾವನ್ನಪ್ಪಿದರು. ಇನ್ನೊಂದು ಮಗು ಸಾವು ಬದುಕಿನ ಮಧ್ಯೆ ಹೋರಾಟ‌ ಮಾಡ್ತಿದೆ. ಈ ಘಟನೆ ಬಳಿಕ‌ ಲಾರಿಗಳ ಸಂಚಾರದಿಂದ ಸಾರ್ವಜನಿಕರು ಪೊಲೀಸರ ನಡೆಯನ್ನು ಪ್ರಶ್ನಿಸುವಂತಾಗಿದೆ.

click me!