ಪುನೀತ ಪರ್ವ ಕಾರ್ಯಕ್ರಮ ನೋಡುವಾಗಲೇ ಹೃದಯಾಘಾತದಿಂದ ಯುವಕ ಸಾವು

Published : Oct 22, 2022, 12:24 PM IST
ಪುನೀತ ಪರ್ವ ಕಾರ್ಯಕ್ರಮ ನೋಡುವಾಗಲೇ ಹೃದಯಾಘಾತದಿಂದ ಯುವಕ ಸಾವು

ಸಾರಾಂಶ

ಪುನೀತ ಪರ್ವ ಕಾರ್ಯಕ್ರಮ ನೋಡುವ ವೇಳೆ ನಟ ದಿ.ಪುನೀತ್ ರಾಜ್ ಕುಮಾರ್ ಅಭಿಮಾನಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಂಗಳೂರಿನ ಮಲ್ಲೇಶ್ವರಂ ಪೈಪ್‌ಲೈನ್ ಬಳಿ ನಡೆದಿದೆ. ನಿನ್ನೆ (ಶುಕ್ರವಾರ) ರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಿದೆ.

ಬೆಂಗಳೂರು (ಅ.22): ಪುನೀತ ಪರ್ವ ಕಾರ್ಯಕ್ರಮ ನೋಡುವ ವೇಳೆ ನಟ ದಿ.ಪುನೀತ್ ರಾಜ್ ಕುಮಾರ್ ಅಭಿಮಾನಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಂಗಳೂರಿನ ಮಲ್ಲೇಶ್ವರಂ ಪೈಪ್‌ಲೈನ್ ಬಳಿ ನಡೆದಿದೆ. ನಿನ್ನೆ (ಶುಕ್ರವಾರ) ರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಗಿರಿರಾಜ್ (29) ಮೃತ ಯುವಕ. ಕಾರ್ಯಕ್ರಮ ನೋಡುವಾಗಲೇ ಗಿರಿರಾಜ್ ಭಾವುಕನಾಗಿದ್ದ. ಈ ವೇಳೆ ಗಿರಿರಾಜ್ ತಂದೆ ವೆಂಕಟೇಶ್ ಸಮಾಧಾನ ಮಾಡಿದ್ದರು. ಜೊತೆಗೆ ತಾಯಿಯ ಕೈತುತ್ತು ತಿನ್ನುತ್ತಲೆ ಅಪ್ಪು ಬಗ್ಗೆ ಗಿರಿರಾಜ್ ಮಾತನಾಡಿದ್ದ. ಇನ್ನು ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಗಿರಿರಾಜ್‌ನನ್ನು ಕೂಡಲೆ‌ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾನೆ. ಸದ್ಯ ಒಬ್ಬನೆ ಮಗನನ್ನ ಕಳೆದುಕೊಂಡು ವಯೋವೃದ್ದ ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ.

ಅರಣ್ಯ ಶಿಬಿರ ಕಟ್ಟಡದಲ್ಲಿ ವ್ಯಕ್ತಿ ನಿಗೂಢ ಸಾವು: ಶ್ರೀಗಂಧ ಕಳವು ಮಾಡಲು ಐವರ ಗ್ಯಾಂಗ್‌ ಶಿವಮೊಗ್ಗದಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಅರಣ್ಯ ಪ್ರದೇಶಕ್ಕೆ ಬಂದಿತ್ತು. ರಾತ್ರಿವೇಳೆಯಲ್ಲಿ ಅರಣ್ಯ ಇಲಾಖೆಯವರು ಬೆನ್ನಟಿದಾಗ ಮೂವರು ಎಸ್ಕೇಪ್‌ ಆಗಿದ್ದು, ಇಬ್ಬರು ಕೈಗೆ ಸಿಕ್ಕಿದ್ದಾರೆ, ಇವರಲ್ಲಿ ಓರ್ವರು ಮೃತಪಟ್ಟಿದ್ದಾರೆ. ಈ ಘಟನೆ ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದ್ದು, ಗುರುವಾರ ಇಡೀ ದಿನ ಪೊಲೀಸ್‌ ಮತ್ತು ಅರಣ್ಯ ಇಲಾಖೆಗಳ ನಿದ್ದೆಗೆಡಿಸಿದೆ.

ಪತಿ ಸಾವಿನಿಂದ ಮನನೊಂದು ಒಂದೂವರೆ ವರ್ಷದ ಮಗಳ ಹತ್ಯೆಗೈದು ಪತ್ನಿ ನೇಣಿಗೆ ಶರಣು

ವಶಕ್ಕೆ ಪಡೆದುಕೊಂಡ ವ್ಯಕ್ತಿ ಬೇರೆಲ್ಲೋ ಮೃತಪಟ್ಟಿದ್ದರೆ, ಈ ವಿಷಯ ಅಷ್ಟು ಗಂಭೀರತೆ ಪಡೆಯುತ್ತಿರಲಿಲ್ಲ. ಅರಣ್ಯ ಇಲಾಖೆಗೆ ಸೇರಿರುವ ಆನೆ ಹಿಮ್ಮೆಟ್ಟಿಸುವ ಶಿಬಿರದ ಕಟ್ಟಡದಲ್ಲಿರುವ ಶೌಚಾಲಯದಲ್ಲಿ ಮೃತದೇಹ ಪತ್ತೆ ಆಗಿದ್ದರಿಂದ ಈಗ ಗಂಭೀರತೆ ಪಡೆದುಕೊಂಡಿದೆ. ಅರಣ್ಯ ಇಲಾಖೆಯವರು ವಶದಲ್ಲಿರುವ ವ್ಯಕ್ತಿಯನ್ನು ಹೊಡೆದು ಸಾಯಿಸಿದ್ದಾರೆಂದು ಸ್ಥಳೀಯರ ಆರೋಪ. ಆದರೆ, ಅರಣ್ಯ ಇಲಾಖೆ ಇದನ್ನು ತಳ್ಳಿಹಾಕಿದೆ. ವಶದಲ್ಲಿರುವ ವ್ಯಕ್ತಿ ಶೌಚಾಲಯಕ್ಕೆ ಹೋಗಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಇಲಾಖೆಯವರು ಹೇಳುತ್ತಿದ್ದಾರೆ.

ಆಗಿದ್ದೇನು?: ಶಿವಮೊಗ್ಗದಿಂದ ಐವರು ತಾಲೂಕಿನ ಹೊಸಪೇಟೆ ಅರಣ್ಯ ಪ್ರದೇಶಕ್ಕೆ ಶ್ರೀಗಂಧ ಕಳುವು ಮಾಡಲು ಬಂದಿದ್ದು, ಬುಧವಾರ ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಬೆನ್ನಟ್ಟಿದಾಗ ಮೂವರು ತಪ್ಪಿಸಿಕೊಂಡು ಹೋಗಿದ್ದಾರೆ. ಶಿವಮೊಗ್ಗದ ವೆಂಕಟೇಶ ನಗರದ ನಿವಾಸಿ ರವಿ ಸೇರಿದಂತೆ ಇಬ್ಬರನ್ನು ಅರಣ್ಯ ಇಲಾಖೆಯವರು ವಶಕ್ಕೆ ತೆಗೆದುಕೊಂಡಿದ್ದಾರೆ. ವಶಕ್ಕೆ ಪಡೆದ ಇಬ್ಬರಲ್ಲಿ ಕಲ್ಲೇಹೊಳೆ ಕೋಟೆಯ ಆನೆ ಹಿಮ್ಮೆಟ್ಟಿಸುವ ಶಿಬಿರದಲ್ಲಿರುವ ಶೌಚಾಲಯದಲ್ಲಿ ಓರ್ವರ ಮೃತದೇಹ ಪತ್ತೆಯಾಗಿದೆ. ರವಿ ಮೃತಪಟ್ಟಿರುವುದು ಗುರುವಾರ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಆಂಬ್ಯುಲೆನ್ಸ್‌ ವಾಹನ ಬರುತ್ತಿದ್ದಂತೆ ಸ್ಥಳೀಯರ ಗಮನಕ್ಕೆ ಈ ವಿಷಯ ಬಂದಿದೆ. 

ಪತ್ನಿಯ ಕತ್ತು ಕೊಯ್ದು ಹತ್ಯೆ ಮಾಡಿ ಪೊಲೀಸ್ ಠಾಣೆಗೆ ಹೋಗಿ ಶರಣಾದ ವೃದ್ಧ ಪತಿ

ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ಧ ಕೋಟೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಆ ವ್ಯಕ್ತಿ ಹೇಗೆ ಮೃತಪಟ್ಟ, ವಶಕ್ಕೆ ಪಡೆದ ಇನ್ನೋರ್ವ ವ್ಯಕ್ತಿ ಎಲ್ಲಿದ್ದಾನೆ ಹೀಗೆ ಪ್ರಶ್ನೆಗಳ ಸುರಿ ಮಳೆ ಸುರಿಸಿದರು. ಪರಿಸ್ಥಿತಿಯನ್ನು ತಿಳಿಗೊಳಿಸಲು ಕೂಡಲೇ ಡಿವೈಎಸ್ಪಿ, ವೃತ್ತ ನಿರೀಕ್ಷಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಯಿತು. ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್‌, ಚಿಕ್ಕಮಗಳೂರು ಡಿಎಫ್‌ಓ ಕ್ರಾಂತಿ ಭೇಟಿ ನೀಡಿದ್ದರು. ಸಖರಾಯಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!