ಡ್ರೀಮ್ 11ನಲ್ಲಿ 1.5 ಕೋಟಿ ರೂ ಗೆದ್ದ ಸಬ್ ಇನ್ಸ್‌ಪೆಕ್ಟರ್‌ಗೆ ಶಾಕ್, ಮರುದಿನವೇ ಅಮಾನತು!

Published : Oct 19, 2023, 02:41 PM IST
ಡ್ರೀಮ್ 11ನಲ್ಲಿ 1.5 ಕೋಟಿ ರೂ ಗೆದ್ದ ಸಬ್ ಇನ್ಸ್‌ಪೆಕ್ಟರ್‌ಗೆ ಶಾಕ್, ಮರುದಿನವೇ ಅಮಾನತು!

ಸಾರಾಂಶ

ವಿಶ್ವಕಪ್ ಟೂರ್ನಿ ನಡುವೆ ಹಲವರು ಡ್ರೀಮ್ 11 ಆನ್‌ಲೈನ್ ಗೇಮ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಕೆಲವರು ಕೋಟ್ಯಾಧೀಶರಾಗಿದ್ದಾರೆ. ಹಲವರು ಹಣ ಕಳೆದುಕೊಂಡಿದ್ದಾರೆ. ಇದರ ನಡುವೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಇದೇ ಡ್ರೀಮ್ 11 ಗೇಮ್ ಆಡಿ ಬರೋಬ್ಬರಿ 1.5 ಕೋಟಿ ರೂಪಾಯಿ ಗೆದ್ದುಕೊಂಡಿದ್ದಾರೆ. ಕೋಟ್ಯಾಧೀಶನಾಗಿರುವ ಪೊಲೀಸ್ ಇದೀಗ ಅಮಾನತ್ತಾಗಿದ್ದಾರೆ.

ಪುಣೆ(ಅ.19) ಐಸಿಸಿ ವಿಶ್ವಕಪ್ ಟೂರ್ನಿ ಭಾರತದಲ್ಲಿ ಹಬ್ಬದ ಸಂಭ್ರಮ ಸೃಷಿಸಿದೆ. ಪ್ರತಿ ಕ್ರಿಕೆಟ್ ಟೂರ್ನಿ ಭಾರತೀಯರಿಗೆ ಹಬ್ಬ. ಇದರ ನಡುವೆ ಡ್ರೀಮ್ 11 ಆನ್‌ಲೈನ್ ಗೇಮ್ ಸೇರಿಕೊಂಡಿದೆ. ಇದೀಗ ಕ್ರಿಕೆಟ್ ಆನಂದಿಸುವುದರ ಜೊತೆಗೆ ತಲೆಯೊಳಗೆ ಹಲವು ಲೆಕ್ಕಾಚಾರಗಳು ನಡೆಯುತ್ತಿರುತ್ತದೆ. ಹೀಗೆ ಪೊಲೀಸ್ ಕೂಡ ಇದೇ ಡ್ರೀಮ್ ಇಲೆವೆನ್‌ನನಲ್ಲಿ ಆಡಿ ಬರೋಬ್ಬರಿ 1.5 ಕೋಟಿ ರೂಪಾಯಿ ಗೆದ್ದುಕೊಂಡಿದ್ದಾರೆ. ಕೋಟಿ ಗೆದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಂಭ್ರಮ ಮರುಕ್ಷಣದಲ್ಲೇ ಇಲ್ಲವಾಗಿದೆ. ಕಾರಣ ಕೋಟಿ ಗೆದ್ದ ಪೊಲೀಸ್ ಅಧಿಕಾರಿಯನ್ನು ಇಲಾಖೆ ಅಮಾನತು ಮಾಡಿದೆ.

ಪುಣೆಯ ಪಿಂಪ್ರಿ ಚಿಂಚಿವಾಡ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಸೋಮನಾಥ್ ಝೆಂಡೆ ಇದೀಗ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ. ಪಿಂಪ್ರಿ ಚಿಂಚಿವಾಡ್ ಪೊಲೀಸ್ ಠಾಣೆಯ ಸೋಮನಾಥ್ ಇತರ ಕ್ರೀಡಾಆಸಕ್ತರಂತೆ ಡ್ರೀಮ್ 11ನ ಆನ್‌ಲೈನ್ ಗೇಮ್ ಆಡಿದ್ದಾರೆ. ಇದಕ್ಕಿದ್ದಂತೆ 1.5 ಕೋಟಿ ರೂಪಾಯಿ ಬಹುಮಾನ ಗೆದ್ದುಕೊಂಡಿದ್ದಾರೆ. 

 

ಡ್ರೀಮ್‌ 11ನಿಂದ ಬರೋಬ್ಬರಿ 40,000 ಕೋಟಿ ಜಿಎಸ್‌ಟಿ ವಂಚನೆ? ಗೇಮಿಂಗ್‌ ಕಂಪನಿಗೆ ನೋಟಿಸ್‌ ಸಲ್ಲಿಕೆ

ಸಬ್‌ ಇನ್ಸ್‌ಪೆಕ್ಟರ್ ಸೋಮನಾಥ್ ಆನ್‌ಲೈನ್ ಗೇಮ್ ಡ್ರೀಮ್ 11 ಆಡಿ ಕೋಟಿ ರೂಪಾಯಿ ಗೆದ್ದುಕೊಂಡು ಭಾರಿ ಸುದ್ದಿಯಾಗಿದ್ದಾರೆ. ಇನ್ನು ಪೊಲೀಸ್ ಸಮವಸ್ತ್ರದಲ್ಲೇ ಮಾಧ್ಯಮಗಳಿಗೆ ಆನ್‌ಲೈನ್ ಗೇಮ್ ಗೆಲುವಿನ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋಗಳು ಭಾರಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಪೊಲೀಸರ ಕೆಲಸವೇನು? ಮಾಡುತ್ತಿರುವುದೇನು? ಎಂಬು ಪ್ರಶ್ನೆಯೂ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತು.

ಡ್ರೀಮ್ 11 ಸೇರಿದಂತೆ ಇತರ ಆನ್‌ಲೈನ್ ಗ್ಯಾಂಬ್ಲಿಂಗ್ ಗೇಮ್‌ಗಳಿಂದ ಹಣ ಪಡೆದು ಪೊಲೀಸ್ ಸಮವಸ್ತ್ರದಲ್ಲೇ ಪ್ರತಿಕ್ರಿಯೆ ನೀಡಿ ಸಾಮಾಜದ ದಾರಿ ತಪ್ಪಿಸುತ್ತಿದ್ದಾರೆ ಅನ್ನೋ ಆರೋಪವೂ ಕೇಳಿ ಬಂದಿತ್ತು. ತಕ್ಷಣವೇ ಪಿಂಪ್ರಿ ಚಿಂಚಿವಾಡ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಈ ವೇಳೆ ಸೋಮನಾಥ್ ಯಾವುದೇ ಅನುಮತಿ ಇಲ್ಲದೆ ಡ್ರೀಮ್ 11 ಆಡಿರುವುದು ಪತ್ತೆಯಾಗಿದೆ. ಇಷ್ಟೇ ಅಲ್ಲ ಪೊಲೀಸ್ ಸಮವಸ್ತ್ರದಲ್ಲೇ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡು ಮೂಲಕ ಹಲವು ನಿಯಮ ಉಲ್ಲಂಘಿಸಿದ್ದಾರೆ. ಇಷ್ಟೇ ಅಲ್ಲ ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಸಬ್‌ಇನ್ಸ್‌ಪೆಕ್ಟರ್ ಸೋಮಾಥ್ ಝೆಂಡೆಯನ್ನು ಅಮಾನತು ಮಾಡಿದ್ದಾರೆ.

Dream 11 ಗೇಮಿಂಗ್ ಆ್ಯಪ್ ಸಂಸ್ಥಾಪಕರ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!