
ಚಾಮರಾಜನಗರ(ಅ.19): ಬ್ಯಾಂಕ್‌ಗೆ ಸಿಬ್ಬಂದಿ ರೀತಿ ಬಂದು ರಾಜಾರೋಷವಾಗಿಯೇ 5 ಲಕ್ಷ ರು. ಹಣ ಕದ್ದೊಯ್ದಿರುವ ಘಟನೆ ಚಾಮರಾಜನಗರದ ಕೆನೆರಾ ಬ್ಯಾಂಕಿನಲ್ಲಿ ಬುಧವಾರ ಬೆಳಗ್ಗೆ 12ರ ಹೊತ್ತಿಗೆ ನಡೆದಿದೆ. ಚಾಮರಾಜನಗರ ಜೋಡಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಈ ಕಳವು ಪ್ರಕರಣ ನಡೆದಿದೆ.
ಚಾಲಾಕಿ ಕಳ್ಳ ಟಿಪ್ ಟಾಪ್ ಆಗಿ, ಸ್ಟೈಲಿಷ್ ಆಗಿ ಬ್ಯಾಂಕ್ ಕ್ಯಾಷ್ ಕೌಂಟರ್‌ಗೆ ಬಂದು ಯಾವುದೇ ಆತಂಕವಿಲ್ಲದೆ ಐದು ಲಕ್ಷ ರುಪಾಯಿ ಎಗರಿಸಿ ಬಂದ ದಾರಿಯಲ್ಲಿ ವಾಪಸ್ ತೆರಳಿದ್ದಾನೆ. ಬ್ಯಾಂಕ್ ಸಿಬ್ಬಂದಿ ರೀತಿಯಲ್ಲೇ ವರ್ತಿಸಿದ್ದರಿಂದ ಇತರರಿಗೆ ಯಾವುದೇ ಅನುಮಾನ ಬಂದಿಲ್ಲ. ಜನರ ನಡುವೆಯೇ ಕಳ್ಳ ಕರಾಮತ್ತು ತೋರಿದ್ದು ಕಳ್ಳನ ಮೋಸದಾಟಕ್ಕೆ ಬ್ಯಾಂಕ್ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದಾರೆ.
ಉತ್ತರ ಕನ್ನಡ: ಮದುವೆಯಾಗಿ ಮಕ್ಕಳಿದ್ರೂ ಬಿಡದ ಆ ಒಂದು ಚಟ, ಹೆಂಡತಿಯ ಕತ್ತು ಸೀಳಿ ಕೊಲೆ ಮಾಡಿದ ಗಂಡ
5 ಲಕ್ಷ ರುಪಾಯಿ ಬಂಡಲ್ ಹಿಡಿದು ಆರಾಮಾಗಿ ಹೊರಬಂದಿರುವ ಭೂಪನಿಗೆ ಇತರ ಮೂವರು ಸಹಕಾರ ನೀಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ, ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ