* ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ
* ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅಂಜನ್
* ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೆಂಗಳೂರು(ಮಾ.15): ಪ್ರಥಮ ಪಿಯುಸಿ ವಿದ್ಯಾರ್ಥಿಯೊಬ್ಬ(PUC Student) ಅಪಾರ್ಟ್‌ಮೆಂಟ್‌ನ 23ನೇ ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೋಣನಕುಂಟೆಯ ನಿವಾಸಿ ಆರ್.ಅಂಜನ್ (17) ಮೃತ ವಿದ್ಯಾರ್ಥಿ. ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಕೋಣನಕುಂಟೆ ಕ್ರಾಸ್‌ನ ಪ್ರೆಸ್ಟೀಜ್ ಫಾಲ್ಕನ್ ಅಪಾರ್ಟ್‌ಮೆಂಟ್‌ನ(Apartment) 23ನೇ ಮಹಡಿಯಲ್ಲಿ ಅಂಜನ್ ದೊಡ್ಡಪ್ಪ ಅವರು ಫ್ಲ್ಯಾಟ್ ಹೊಂದಿದ್ದಾರೆ. ಇಲ್ಲಿ ದೊಡ್ಡಪ್ಪನ ಮಗ ಅಚಲ್ ನೆಲೆಸಿದ್ದ. ಭಾನುವಾರ ಬೆಳಗ್ಗೆ ಫ್ಲ್ಯಾಟ್‌ಗೆ ಬಂದಿರುವ ಅಂಜನ್, ಅಚಲ್ ಜತೆಗೆ ಟಿವಿಯಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸಿದ್ದಾನೆ. ಬಳಿಕ ರಾತ್ರಿ ಇಬ್ಬರೂ ಊಟ ಮಾಡಿ ನಿದ್ರೆಗೆ ಜಾರಿದ್ದಾರೆ.
Man Commits Suicide ರಾಯಚೂರಿನಲ್ಲಿ ವಿಲಕ್ಷಣ ಘಟನೆ, ಮರ್ಮಾಂಗ ಕತ್ತರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ
ಸೋಮವಾರ ಮುಂಜಾನೆ 3.30ಕ್ಕೆ ಎದ್ದಿರುವ ಅಂಜನ್, ಫ್ಲ್ಯಾಟ್‌ನ ಬಾಲ್ಕನಿಗೆ ಬಂದು ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ಜೋರಾಗಿ ಶಬ್ದವಾದ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ನೋಡಿದಾಗ ಅಂಜನ್ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಬಳಿಕ ಸುದ್ದಿ ತಿಳಿದು ಪೊಲೀಸರು(Police) ಸ್ಥಳಕ್ಕೆ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿ, ಮೃತದೇಹವನ್ನು(Deadbody) ಮರಣೋತ್ತರ ಪರೀಕ್ಷೆ ಕಳುಹಿಸಿದ್ದಾರೆ. ಅಂಜನ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದೆ.
ತಾಯಿ ಬೈದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಮಗ
ಬೆಂಗಳೂರು: ತಾಯಿ ಬೈದಿದ್ದಕ್ಕೆ ಮಗ ಆತ್ಮಹತ್ಯೆಗೆ ಶರಣಾದ ಘಟನೆ ಸುಂಕದಕಟ್ಟೆ ಬಳಿಯ ಶ್ರೀನಿವಾಸ್ ನಗರದ ಪೈಪ್ ಲೈನ್ ರಸ್ತೆಯ ಮನೆಯಲ್ಲಿ ಮಾ.13 ರಂದು ನಡೆದಿತ್ತು. ಸಂಜಯ್(22) ಎಂಬಾತನೇ ಆತ್ಮಹತ್ಯೆಗೆ ಮಾಡಿಕೊಂಡವನಾಗಿದ್ದಾನೆ.
ಕಳೆದ ಮೂರು ದಿನಗಳಿಂದ ಸಂಜಯ್ ಮನೆಗೆ ಬಂದಿರಲಿಲ್ಲ. ಯಾವುದೇ ಕೆಲಸಕ್ಕೆ ಹೋಗದೇ ಸಂಜಯ್ ಅಲೆದಾಡುತ್ತಿದ್ದ, ಹೀಗಾಗಿ ತಂದೆ ತಾಯಿ(Mother) ಮಗನಿಗೆ ಬೈದು ಬುದ್ದಿವಾದ ಹೇಳಿದ್ದರು ಎಂದು ಹೇಳಲಾಗುತ್ತಿದೆ. ಬುದ್ದಿವಾದ ಹೇಳಿದಕ್ಕೆ ಸಂಜಯ್ ತನ್ನ ತಾಯಿಯನ್ನೇ ಬೈದು ಕತ್ತು ಹಿಸುಕೋದಕ್ಕೆ ಹೋಗಿದ್ದನಂತೆ. ಈ ವೇಳೆ ತಂದೆ(Father) ತಡೆದು ಮಗನಿಗೆ ಹೊಡೆದಿದ್ದರು. ಹೀಗಾಗಿ ಎಲ್ಲರೂ ನನಗೆ ಬೈದಿದ್ದಾರೆ ಎಂದು ಬೇಜರಾಗಿದ್ದನಂತೆ. ಬಳಿಕ ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೇಲ್‌ನಿಂದ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸೂಸೈಡ್ ಮಾಡಿಕೊಂಡಿದ್ದನು
ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು(Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಯುಡಿಆರ್‌ಅಡಿ ಪ್ರಕರಣ ದಾಖಲಾಗಿದತ್ತು.
ಪರಿಕ್ಷೆಯಲ್ಲಿ ಕಾಪಿ ಮಾಡಿ ಡಿಬಾರ್: 5 ಅಂತಸ್ತಿನ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ
ಬೆಂಗಳೂರು: ಪರೀಕ್ಷೆಯಲ್ಲಿ(Exam) ನಕಲು ಮಾಡುವಾಗ ಸಿಕ್ಕಿ ಬಿದ್ದು ಕಾಲೇಜಿನಿಂದ ಡಿಬಾರ್ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬರು(Student) ಐದು ಅಂತಸ್ತಿನ ಪಿ.ಜಿ. ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಜೀವನ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾ.05 ರಂದು ನಡೆದಿತ್ತು.
ಫೇಸ್‌ಬುಕ್ ಸ್ನೇಹಿತನ ಮೇಲೆ ಪ್ರೀತಿ, ಮದುವೆಯಾದ ನಾಲ್ಕೇ ವರ್ಷಕ್ಕೆ ಶವವಾದ ಮಹಿಳೆ!
ಮುರುಗೇಶ್‌ಪಾಳ್ಯದ ಭವ್ಯಾ(19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಕೋರಮಂಗಲದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಭವ್ಯಾ ಶುಕ್ರವಾರ ಪ್ರಥಮ ಸೆಮಿಸ್ಟರ್ ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗಿದ್ದರು. ಕಾಲೇಜಿನಿಂದ ವಾಪಸು ಬಂದ ಆಕೆ ಸಂಜೆ 4.30ರ ಸುಮಾರಿಗೆ ಅಮರಜ್ಯೋತಿ ಬಡಾವಣೆಯಲ್ಲಿ ಐದು ಅಂತಸ್ತಿನ ಪಿ.ಜಿ. ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್(Police) ಅಧಿಕಾರಿಗಳು ತಿಳಿಸಿದ್ದರು.
ಭವ್ಯಾ ಆತ್ಮಹತ್ಯೆಗೂ ಮುನ್ನ ಸಹೋದರಿ ದಿವ್ಯಾ ಹಾಗೂ ತಂದೆ ಮೊಬೈಲ್‌ಗೆ ಕರೆ ಮಾಡಿ, ಪರೀಕ್ಷೆ ಬರೆಯುವಾಗ ನಕಲು ಮಾಡಿ ಸಿಕ್ಕಿಬಿದ್ದಿದ್ದು ಕಾಲೇಜಿನಿಂದ ಡಿಬಾರ್(Dibar) ಆಗಿದ್ದಾನೆ. ಇದರಿಂದ ಮನಸಿಗೆ ನೋವಾಗಿದೆ. ನಾನು ಬದುಕುವುದಿಲ್ಲ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾಳೆ. ಬಳಿಕ ತಂದೆ ಹಾಗೂ ಸಹೋದರಿ ಹತ್ತಾರು ಬಾರಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ನಂತರ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದರು.