PUB-G ಪ್ರಕರಣ: ಅಮ್ಮನನ್ನು ಬದುಕಿಸಬಹುದಿತ್ತು ಆದರೆ ಅಣ್ಣ ಕನಿಕರ ತೋರಲಿಲ್ಲ: ತಂಗಿಯ ಹೇಳಿಕೆ

By Sharath SharmaFirst Published Jun 10, 2022, 6:05 PM IST
Highlights

PUBG Murder Row: ಅಮ್ಮನಿಗೆ ಇನ್ನೂ ಜೀವವಿತ್ತು, ಬದುಕಿಸಬಹುದಿತ್ತು ಆದರೆ ಅಣ್ಣ ರೂಮಿನಲ್ಲಿ ಕೂಡಿಹಾಕಿದ ಎಂದು ಮನಕಲಕುವ ಘಟನೆಯನ್ನು ತಂಗಿ ಬಿಚ್ಚಿಟ್ಟಿದ್ದಾಳೆ. ಮೊಬೈಲ್‌ ಮಕ್ಕಳ ಮನಸ್ಸಿನ ಮೇಲೆ ಯಾವ ಪ್ರಮಾಣದ ಪ್ರಭಾವ ಬೀರಿದೆ ಎಂಬುದಕ್ಕೆ ಈ ಘಟನೆ ಜ್ವಲಂತ ಸಾಕ್ಷಿ. 

ಲಖನೌ: ಉತ್ತರ ಪ್ರದೇಶದ ಲಖನೌ ತಾಯಿಯ ಕೊಲೆ ಪ್ರಕರಣ ಸಂಬಂಧ ಬೆಚ್ಚಿ ಬೀಳಿಸುವ ಇನ್ನೊಂದು ಸತ್ಯ ಬೆಳಕಿಗೆ ಬಂದಿದೆ. ಹದಿನಾರು ವರ್ಷದ ಮಗ ತಾಯಿ ಪಬ್‌ಜಿ ಗೇಮ್‌ ಆಡಲು ಬಿಡಲಿಲ್ಲವೆಂಬ ಕಾರಣಕ್ಕೆ ಗುಂಡಿಕ್ಕಿ ಕೊಲೆ ಮಾಡಿದ್ದ. ತಂಗಿಯನ್ನು ಯಾರಿಗಾದರು ಹೇಳಿದರೆ ಸಾಯಿಸುವ ಬೆದರಿಕೆ ಹಾಕಿದ್ದ. ಇದೀಗ ಹತ್ತು ವರ್ಷದ ತಂಗಿ ಶಾಕಿಂಗ್‌ ಸತ್ಯವನ್ನು ಪೊಲೀಸರಿಗೆ ತಿಳಿಸಿದ್ದಾಳೆ. ಗುಂಡು ಹೊಡೆದ ಬಳಿಕವೂ ತಾಯಿ ಬದುಕಿದ್ದರು, ಆದರೆ ಅಣ್ಣ ಆಸ್ಪತ್ರೆಗೆ ಕರೆ ಮಾಡಲಿಲ್ಲ, ಬದಲು ತಾಯಿಯನ್ನು ರೂಮಿನಲ್ಲಿ ಕೂಡಿ ಹಾಕಿದ್ದಾನೆ ಎಂದು ಮಗಳು ಹೇಳಿದ್ದಾಳೆ. ಜತೆಗೆ ಅಮ್ಮ ಸಾವಿನಿಂದ ನರಳುತ್ತಿದ್ದಾಗ ಸ್ನೇಹಿತರನ್ನು ಮನೆಗೆ ಕರೆಸಿ ಟಿವಿ ನೋಡುತ್ತಿದ್ದ ಎಂದು ತಂಗಿ ಹೇಳಿದ್ದಾಳೆ. 

ತಂತ್ರಜ್ಞಾನದ ಈ ಯುಗದಲ್ಲಿ ಮೊಬೈಲ್‌ ಅಡಿಕ್ಷನ್‌ ಮತ್ತು ಗೇಮಿಂಗ್‌ ಹುಚ್ಚು ಮಕ್ಕಳ ಮನಸ್ಸನ್ನು ಎಷ್ಟು ಹಾಳು ಮಾಡಿದೆ ಎನ್ನುವುದಕ್ಕೆ ಜ್ವಲಂತ ನಿದರ್ಶನವಾಗಿ ಲಖನೌ ಪ್ರಕರಣ ನಿಂತಿದೆ. ತಾಯಿ ಪಬ್‌ಜಿ ಆಡಲು ಬಿಡಲಿಲ್ಲ ಎಂಬ ಒಂದೇ ಕಾರಣಕ್ಕೆ ತಂದೆಯ ಸರ್ವಿಸ್‌ ರಿವಾಲ್ವರ್‌ನಿಂದ ಗುಂಡು ಹಾರಿಸಿ ಕೊಲೆ ಮಾಡುವುದು ಬಾಲಕನ ಮನಸ್ಥಿತಿಯ ಮೇಲೆ ಗೇಮಿಂಗ್‌ ಎಷ್ಟು ಪ್ರಭಾವ ಬೀರಿದೆ ಎಂಬುದನ್ನು ತೋರಿಸುತ್ತದೆ. ಬಾಲಕ ತಾಯಿ ಮತ್ತು ತಂಗಿ ಜತೆ ವಾಸವಾಗಿದ್ದ. ತಂದೆ ಭಾರತ ಸೇನೆಯಲ್ಲಿ ಕೆಲಸ ಮಾಡುತ್ತಿದ್ದು, ಪಶ್ಚಿಮ ಬಂಗಾಳದಲ್ಲಿರುತ್ತಾರೆ. ಕಳೆದ ಬಾರಿ ಬಂದಾಗ ರಿವಾಲ್ವರ್‌ ಮರೆತು ಹೋಗಿದ್ದರು. ಅದನ್ನು ಬಳಸಿ ಮಗ ಅಮ್ಮನನ್ನು ಸಾಯಿಸಿದ್ದಾನೆ. 

ಇದನ್ನೂ ಓದಿ: ಚಿಕ್ಕಮಗಳೂರು: ಮಗನ ಪಬ್‌ಜಿ ಹುಚ್ಚಿಗೆ ಅಮ್ಮ ಬಲಿ

ತಾಯಿಯನ್ನು ಬದುಕಿಸಬಹುದಿತ್ತು:
ಪೊಲೀಸರ ಮಾಹಿತಿ ಪ್ರಕಾರ, ಘಟನೆ ನಡೆದ ನಂತರವಾದರೂ ಯಾರಿಗಾದರೂ ಹೇಳಿದ್ದರೆ ತಾಯಿಯನ್ನು ಬದುಕಿಸಬಹುದಿತ್ತು. ಆದರೆ ಮಗ ಸಾವು ಬದುಕಿನ ನಡುವೆ ಅಮ್ಮ ನರಳುತ್ತಿದ್ದರೂ ಕನಿಕರ ತೋರದೆ ಕೋಣೆಯಲ್ಲಿ ಕೂಡಿ ಹಾಕಿದ್ದ. ತಂಗಿಯನ್ನು ಇನ್ನೊಂದು ಕೋಣೆಯಲ್ಲಿ ಕೂಡಿಹಾಕಿದ್ದ. ಸ್ನೇಹಿತರಿಗೆ ಅಮ್ಮ ಮಾವನ ಮನೆಗೆ ಹೋಗಿದ್ದಾರೆ ಎಂದು ಸುಳ್ಳು ಹೇಳಿದ್ದ. ಕನಿಷ್ಟ ಮನೆಗೆ ಬಂದ ಸ್ನೇಹಿತರಿಗೆ ಹೇಳಿದ್ದರೂ ಆಕೆ ಬದುಕುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ತಾನು ಮಾಡಿದ ಕೆಲಸವನ್ನು ಹುಡುಗ ಒಪ್ಪಿಕೊಂಡಿದ್ದಾನೆ. ಗೇಮ್‌ ಆಡಲು ಬಿಡಲಿಲ್ಲ ಎಂದಾಗ ಸಿಟ್ಟು ಬಂತು, ಅಪ್ಪನ ರಿವಾಲ್ವರ್‌ ಬಳಸಿ ಶೂಟ್‌ ಮಾಡಿದೆ ಎಂದು ವಿಚಾರಣೆ ವೇಳೆ ಹೇಳಿದ್ದಾನೆ.

ಇದನ್ನೂ ಓದಿ: PUBGಗಾಗಿ ಅಮ್ಮನ ಕೊಲೆ, ಶವದ ಬಳಿ 3 ದಿನ, ಭಯಾನಕ ಕ್ಷಣಗಳನ್ನು ಬಿಚ್ಚಿಟ್ಟ ಮಗಳು!

ಹೆದರಿ ಸುಮ್ಮನಿದ್ದ ಮಗಳು:

 

ಹೆದರಿದ ಮಗಳು ಇಡೀ ಕಥೆಯನ್ನು ಹೇಳಿದಾಗ ಪೊಲೀಸರೂ ಬೆಚ್ಚಿಬಿದ್ದಿದ್ದಾರೆ. 10 ವರ್ಷದ ಮಗಳು ತನ್ನ ತಾಯಿಯೊಂದಿಗೆ ಮಲಗಿದ್ದಳು. ಗುಂಡಿನ ಸದ್ದು ಕೇಳಿ ಆಕೆ ಎಚ್ಚರಗೊಂಡಾಗ ಆಕೆಯ ಸಹೋದರನ ಕೈಯಲ್ಲಿ ರಿವಾಲ್ವರ್ ಇತ್ತು ಮತ್ತು ತಾಯಿಯ ಮೃತದೇಹವು ರಕ್ತದಲ್ಲಿ ಮುಳುಗಿತ್ತು. ಸಹೋದರ ಬೇರೆ ಕೋಣೆಗೆ ಕರೆದೊಯ್ದು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಸಹೋದರನ ಭಯದಿಂದಾಗಿ ಅಮಾಯಕ ಬಾಲಕಿಯನ್ನು ಮತ್ತೊಂದು ಕೋಣೆಯಲ್ಲಿ ಬಂಧಿಸಲಾಯಿತು. ಅವಳು ಹಸಿವಿನಿಂದ ಅಳಲು ಪ್ರಾರಂಭಿಸಿದಾಗ, ಅಣ್ಣಗೆ ಅಡುಗೆ ಮಾಡಿ ತಿನ್ನಿಸಿದನು ಎಂದು ಅವಳು ಹೇಳಿದ್ದಾಳೆ. ಮೃತದೇಹದಿಂದ ದುರ್ವಾಸನೆ ಬರಲಾರಂಭಿಸಿದಾಗ ವಾಂತಿ ಕೂಡ ಮಾಡಿಕೊಂಡಿದ್ದಾಳೆ.

ಬಾಯಿಬಿಟ್ಟರೆ ಗುಂಡು ಹಾರಿಸುವುದಾಗಿ ಸಹೋದರ ಬೆದರಿಕೆ ಹಾಕಿದ್ದ ಎಂದು ಮಗಳು ಹೇಳಿದ್ದಾಳೆ. ಇದೇ ಕಾರಣಕ್ಕೆ ಕೊಲೆಯಾದ ಎರಡನೇ ದಿನ ಸಹೋದರ ತನ್ನ ಸ್ನೇಹಿತರನ್ನು ಪಾರ್ಟಿಗೆಂದು ಮನೆಗೆ ಕರೆದಾಗ ಆಕೆಗೆ ಏನೂ ಹೇಳಲು ಸಾಧ್ಯವಾಗಲಿಲ್ಲ. ಮಗಳ ಪ್ರಕಾರ, ಕೊಲೆಯ ನಂತರ, ಸಹೋದರ ತನ್ನೊಂದಿಗೆ ಮತ್ತೊಂದು ಕೋಣೆಯಲ್ಲಿ ಮಲಗಿದ್ದ. ಅಷ್ಟೇ ಅಲ್ಲ ರೂಮ್ ಫ್ರೆಶ್ನರ್ ನಿಂದ ವಾಸನೆ ತಡೆಯುವ ಪ್ರಯತ್ನ ನಡೆದಿದೆ.

ಇದನ್ನೂ ಓದಿ: PUB-G ಆಡಲು ಬಿಡಲಿಲ್ಲವೆಂದು ಅಮ್ಮನನ್ನೇ ಕೊಂದ ಮಗ: ಮಕ್ಕಳ ಮಾನಸಿಕ ಆರೋಗ್ಯದ ಮೇಲಿರಲಿ ಗಮನ

ಅಜ್ಜಿಯೊಂದಿಗೆ ಹೋಗಿದ್ದ ಮೊಮ್ಮಗಳು:

ಈ ಘಟನೆ ಬಳಿಕ ನವೀನ್‌ನ ತಾಯಿ ಹೆದರಿದ ಮೊಮ್ಮಗಳನ್ನು ಆಕೆಯ ಚಿಕ್ಕಪ್ಪನ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಮೊಮ್ಮಗ ನಗುತ್ತಲೇ ತಮ್ಮ ಸಂಸಾರವನ್ನೇ ಹಾಳು ಮಾಡಿದ್ದಾನೆ ಎಂದು ಅಜ್ಜಿ ಕಣ್ಣೀರಿಟ್ಟಿದ್ದಾರೆ. ಮತ್ತೊಂದೆಡೆ, ತಂದೆ ನವೀನ್ ತನ್ನ ಮಗನೊಂದಿಗೆ ಪಿಜಿಐ ಪೊಲೀಸ್ ಠಾಣೆಯಲ್ಲಿ ಮುಖಾಮುಖಿಯಾಗಿದ್ದಾರೆ. ಈ ವೇಳೆ ಮಗನೇ ನೀನೇನು ಮಾಡಿದಿ? ಎಂದಷ್ಟೇ ಪ್ರಶ್ನಿಸಲು ಅವರಿಂದ ಸಾಧ್ಯವಾಗಿದೆ. ಇದಕ್ಕೆ ಉತ್ತರಿಸಿದ ಆರೋಪಿ ನೀವೂ ಕೂಡಾ ನಮ್ಮ ಬಗ್ಗೆ ಗಮನಹರಿಸುತ್ತಿರಲಿಲ್ಲವಲ್ಲ ಎಂದಷ್ಟೇ ಹೇಳಿದ್ದಾನೆ. ಈ ಸಮಯದಲ್ಲಿ ತಾನು ಮಾಡಿದ ಕೇತ್ಯಕ್ಕೆ ಅವನಲ್ಲಿ ಯಾವುದೇ ಪಶ್ಚಾತಾಪವೂ ಕಂಡು ಬಂದಿಲ್ಲ.

click me!