ಪಿಎಸ್‌ಐ ಅಕ್ರಮ: ಕಾಂಗ್ರೆಸ್‌ ಶಾಸಕನ ಪುತ್ರ, ಸೋದರನೂ ಭಾಗಿ!

Published : Jul 12, 2022, 06:32 AM IST
ಪಿಎಸ್‌ಐ ಅಕ್ರಮ: ಕಾಂಗ್ರೆಸ್‌ ಶಾಸಕನ ಪುತ್ರ, ಸೋದರನೂ ಭಾಗಿ!

ಸಾರಾಂಶ

* ಅಫ್ಜಲ್‌ಪುರ ಶಾಸಕರ ಗನ್‌ಮ್ಯಾನ್‌ ಪರ ಡೀಲ್‌ * ಪಿಎಸ್‌ಐ ಅಕ್ರಮ: ಕಾಂಗ್ರೆಸ್‌ ಶಾಸಕ, ಸೋದರನೂ ಭಾಗಿ * ಸಿಐಡಿ ಆರೋಪ ಪಟ್ಟಿಯಲ್ಲಿ ಇಬ್ಬರ ಹೆಸರೂ ಉಲ್ಲೇಖ  

ಕಲಬುರಗಿ(ಜು.12): 545 ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಲೇ ಇದೆ. ಪರೀಕ್ಷೆ ಬರೆದು ಅಕ್ರಮವಾಗಿ ಪಾಸಾಗಿದ್ದ ಬಂಧಿತ ಗನ್‌ಮ್ಯಾನ್‌ ಹಯ್ಯಾಳಿ ದೇಸಾಯಿ ಪ್ರಕರಣದಲ್ಲಿ ಇದೀಗ ಅಫಜಲ್ಪುರ ಕಾಂಗ್ರೆಸ್‌ ಶಾಸಕ ಎಂ.ವೈ.ಪಾಟೀಲ್‌ ಪುತ್ರ ಅರುಣ ಪಾಟೀಲ್‌ ಹಾಗೂ ಶಾಸಕರ ಸಹೋದರ ಎಸ್‌.ವೈ.ಪಾಟೀಲ್‌ ಹೆಸರು ಸಿಐಡಿ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ ಎನ್ನಲಾಗಿದ್ದು, ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕಲಬುರಗಿಯ ಜ್ಞಾನಜ್ಯೋತಿ ಶಾಲಾ ಪರೀಕ್ಷಾ ಕೇಂದ್ರದಲ್ಲಿ ಪಿಎಸ್‌ಐ ಪರೀಕ್ಷೆ ಬರೆದು ಕಲ್ಯಾಣ ಕರ್ನಾಟಕ ಇನ್‌ ಸರ್ವಿಸ್‌ ಕೇಡರ್‌ನಲ್ಲಿ ರಾರ‍ಯಂಕ್‌ ಪಡೆದಿದ್ದ ಅಫಜಲ್ಪುರ ಕಾಂಗ್ರೆಸ್‌ ಶಾಸಕ ಎಂ.ವೈ.ಪಾಟೀಲ್‌ ಗನ್‌ಮ್ಯಾನ್‌ ಹಯ್ಯಾಳಿ ದೇಸಾಯಿಯನ್ನು ಮೂರು ತಿಂಗಳ ಹಿಂದೆಯೇ ಬಂಧಿಸಿ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಆಗ ಎಸ್‌.ವೈ.ಪಾಟೀಲ ಮತ್ತು ಅರುಣ ಪಾಟೀಲ ಅವರ ಪ್ರಭಾವದ ವಿಚಾರ ಪ್ರಸ್ತಾಪ ಆಗಿತ್ತು. ಇದೀಗ ಪ್ರಕರಣದ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ ನೀಡಿರುವ ಸ್ವಇಚ್ಛೆಯ ಹೇಳಿಕೆಯನ್ನು ಆಧರಿಸಿ ಮೊದಲ ಹಂತದ ಆರೋಪಪಟ್ಟಿದಾಖಲಿಸಿರುವ ಸಿಐಡಿ ತಂಡ ಅರುಣ ಪಾಟೀಲ ಮತ್ತು ಎಸ್‌.ವೈ.ಪಾಟೀಲ ಅವರ ಹೆಸರನ್ನು ಅದರಲ್ಲಿ ಉಲ್ಲೇಖಿಸಿದೆ ಎಂದು ಹೇಳಲಾಗಿದೆ. ಹಯ್ಯಾಳಿ ದೇಸಾಯಿಯನ್ನು ಪಾಸ್‌ ಮಾಡಲು .30 ಲಕ್ಷದ ಡೀಲ್‌ ನಡೆದಿರುವ ಕುರಿತು ದೋಷಾರೋಪ ಪಟ್ಟಿಯಲ್ಲಿ ಪ್ರಸ್ತಾಪವಿದೆ ಎನ್ನಲಾಗಿದೆ.

ಇದನ್ನು ಆಧರಿಸಿ ಸಿಐಡಿ ಅಧಿಕಾರಿಗಳ ತಂಡ ಈ ವಾರಾಂತ್ಯದಲ್ಲೇ ಅರುಣ ಪಾಟೀಲ, ಶಾಸಕರ ಸೋದರ ಎಸ್‌.ವೈ.ಪಾಟೀಲರು ಸೇರಿ ಇನ್ನುಳಿದವರ ವಿಚಾರಣೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಏನಿದೆ ಮಾಹಿತಿ?:

ಪಿಎಸ್‌ಐ ಪರೀಕ್ಷೆ ನಡೆಯುವ ಕೆಲ ಸಮಯದ ಪೂರ್ವದಲ್ಲಿ ಗನ್‌ಮ್ಯಾನ್‌ ಹಯ್ಯಾಳಿ ಪರವಾಗಿ ಅರುಣ ಪಾಟೀಲ ಹಗರಣದ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲಗೆ ಕರೆ ಮಾಡುತ್ತಾನೆ. ಆಗ ಆರ್‌.ಡಿ.ಪಾಟೀಲ ಮತ್ತೊಬ್ಬ ಆರೋಪಿ, ಬ್ಲೂಟೂತ್‌ ತಜ್ಞನೂ ಆಗಿದ್ದ ಎಂಜಿನಿಯರ್‌ ಮಂಜುನಾಥ ಮೇಳಕುಂದಿಯನ್ನು ಸಂಪರ್ಕಿಸುವಂತೆ ಸೂಚಿಸುತ್ತಾನೆ. ಅದರಂತೆ ಮೇಳಕುಂದಿ ಜತೆಗೆ ಅರುಣ ಪಾಟೀಲ ಮಾತುಕತೆ ನಡೆಸುತ್ತಾನೆ. ನಂತರ ಆರ್‌.ಡಿ.ಪಾಟೀಲ ಹಾಗೂ ಎಸ್‌.ವೈ.ಪಾಟೀಲ ಸೇರಿ ಮೇಳಕುಂದಿ ಜತೆಗೆ .30 ಲಕ್ಷಕ್ಕೆ ಡೀಲ್‌ ಕುದುರಿಸಿದ ಕುರಿತು ಮಾಹಿತಿ ಇದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖವಿದೆ ಎನ್ನಲಾಗಿದೆ.

 ತನಿಖೆ ಬಿಸಿ

- ಸಿಐಡಿ ಆರೋಪ ಪಟ್ಟಿಯಲ್ಲಿ ಇಬ್ಬರ ಹೆಸರೂ ಉಲ್ಲೇಖ

- ಶಾಸಕ ಎಂ.ವೈ.ಪಾಟೀಲ್‌ ಗನ್‌ಮ್ಯಾನ್‌ ಆಗಿದ್ದ ಹಯ್ಯಾಳಿ ದೇಸಾಯಿ

- ಕಲ್ಯಾಣ ಕರ್ನಾಟಕ ಇನ್‌ ಸವೀರ್‍ಸ್‌ ಕೇಡರ್‌ನಲ್ಲಿ ರಾರ‍ಯಂಕ್‌ ಪಡೆದಿದ್ದ

- 3 ತಿಂಗಳ ಹಿಂದೆಯೇ ಬಂಧಿಸಿದ್ದ ಸಿಐಡಿ, ಈಗ ಚಾಜ್‌ರ್‍ಶೀಟ್‌ ಸಲ್ಲಿಕೆ

- ಹಯ್ಯಾಳಿ ದೇಸಾಯಿ ಅಕ್ರಮಕ್ಕೆ ಶಾಸಕರ ಪುತ್ರ ಅರುಣ ಪಾಟೀಲ ಸಾಥ್‌

- ಪರೀಕ್ಷೆಗೂ ಮುನ್ನ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌ ಕರೆ ಮಾಡಿ ಚರ್ಚೆ

- ಬಳಿಕ 30 ಲಕ್ಷಕ್ಕೆ ಡೀಲ್‌ ಕುದುರಿಸಿದ್ದ ಶಾಸಕರ ಸೋದರ ಎಸ್‌.ವೈ. ಪಾಟೀಲ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!