Sex Racket : ಹೆಸರಿಗೆ ಸ್ಪಾ.. ಒಳಗೆ ಅದೇ ದಂಧೆ.. ಆನ್‌ಲೈನ್‌ನಲ್ಲೇ ವ್ಯವಹಾರ!

By Contributor Asianet  |  First Published Mar 17, 2022, 8:33 PM IST


* ಚೆನ್ನೈನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲ
* ಸಿನಿಮಾದಲ್ಲಿ ಪಾತ್ರ ನೀಡುವುದಾಗಿ ನಂಬಿಸಿ ಕರೆದು ತಂದಿದ್ದರು
* ಎರಡು ಕಡೆ ದಾಳಿ ನಡೆಸಿದ ಪೊಲೀಸರು 


ಚೆನ್ನೈ(ಮಾ. 17):  ಹೊರಗೆ ಸ್ಪಾ ಒಳಗೆ ವೇಶ್ಯಾವಾಟಿಕೆ (Prostitution)ಅಡ್ಡೆ.. ಇದು ಹೊಸದೇನೂ ಅಲ್ಲ. ಮಹಾನಗರಗಳಲ್ಲೆಂತೂ ಆಗಾಗ ದಾಳಿ ಆಗುತ್ತಲೇ ಇರುತ್ತದೆ.  ಅಂಥದ್ದೇ ಒಂದು ಪ್ರಕರಣ ಚೆನ್ನೈ ನಿಂದ ವರದಿಯಾಗಿದೆ. ಚೆನ್ನೈ (Chennai) ನಗರದ ವೆಲಾಚೇರಿ ಪ್ರದೇಶದಲ್ಲಿ ಸ್ಪಾ ಸೆಂಟರ್‌ನ ಸೋಗಿನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಅಪರಾಧದ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸರು ಕೇಂದ್ರದ ಮೇಲೆ ದಾಳಿ ನಡೆಸಿ ಮೂವರು  ಮಹಿಳೆಯರ(Woman) ರಕ್ಷಣೆ ಮಾಡಿದ್ದಾರೆ.

ಮಹಿಳೆಯರು ಉದ್ಯೋಗ ಅರಸಿ ಚೆನ್ನೈ ಗೆ ಬಂದಿದ್ದರು.  ಅವರನ್ನು ವಂಚಿಸಿ  ವೇಶ್ಯಾವಾಟಿಕೆ ದಂಧೆಗೆ ದೂಡಲಾಗಿತ್ತು.  ದಂಧೆ ನಡೆಸುತ್ತಿದ್ದ ಇಬ್ಬರು ಕಿಂಗ್ ಪಿನ್ ಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಸ್ಪಾ ಮ್ಯಾನೇಜರ್ ಎಂ ಮೊಹಮ್ಮದ್ ಅಸಿಮ್ (30) ಜಿ ನಿತ್ಯನ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಮಹಿಳೆಯರನ್ನು ಸರ್ಕಾರಿ ರಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ.

Tap to resize

Latest Videos

ಮತ್ತೊಂದು ಪ್ರಕರಣ: ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ, ಚೆನ್ನೈ ಪೊಲೀಸರು ತೆನಾಂಪೇಟೆಯ ಪಂಚತಾರಾ ಹೋಟೆಲ್‌ನಲ್ಲಿ ದಾಳಿ ನಡೆಸಿ ವೇಶ್ಯಾವಾಟಿಕೆ ಜಾಲ ಪತ್ತೆ ಮಾಡಿದ್ದಾರೆ.ಸಿನಿಮಾದಲ್ಲಿ ಅವಕಾಶ ನೀಡುತ್ತೇನೆ ಎಂದು ಮಹಿಳೆಯರನ್ನು ಕರೆದುತಂದು ಅವರನ್ನು ದಂಧೆಗೆ ದೂಡಲಾಗುತ್ತಿತ್ತು.  ತಮಿಳು ಸಿನಿಮಾದಲ್ಲಿ ಪ್ರಮುಖ ಪಾತ್ರಗಳ ಭರವಸೆ ನೀಡಿ ನಗರಕ್ಕೆ ಕರೆತಂದ ಮಹಿಳೆಯರನ್ನು ರಕ್ಷಿಸಿದರು. ರಕ್ಷಿಸಲ್ಪಟ್ಟ ಮಹಿಳೆಯರು ಮಾಡೆಲಿಂಗ್ ವೃತ್ತಿಯಲ್ಲಿದ್ದರು

Bengaluru Crime: ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ಮೇಲೆ ಸಿಸಿಬಿ ದಾಳಿ

ಪೊಲೀಸರು ಇಬ್ಬರು ಆರೋಪಿತ ಪಿಂಪ್‌ಗಳನ್ನು ಬಂಧಿಸಿದ್ದಾರೆ - ತಿರುಮುಲ್ಲೈವೋಯಲ್ ನಿವಾಸಿ ಸೆಂಥಿಲ್ ಮತ್ತು ಕೊಟ್ಟಿವಕ್ಕಂ ನಿವಾಸಿ ಸರವಣನ್ ಎಂದು ಗುರುತಿಸಲಾಗಿದೆ. ದೆಹಲಿಯ ಸ್ಥಳೀಯರಾದ ಸೂರಜ್ ಮಲ್ಹೋತ್ರಾ ಮತ್ತು ರಾಹುಲ್ ಎಂದು ಗುರುತಿಸಲಾದ ಇತರ ಇಬ್ಬರು ಆರೋಪಿಗಳು ಪೊಲೀಸರು ಸ್ಥಳಕ್ಕೆ ತಲುಪುವ  ಮೊದಲೆ ಪರಾರಿಯಾಗಿದ್ದಾರೆ.

ಬಂಧಿತ ಪಿಂಪ್‌ಗಳು, ವಿಚಾರಣೆಯ ಸಮಯದಲ್ಲಿ, ತಮಿಳು ಚಲನಚಿತ್ರದಲ್ಲಿ ಪಾತ್ರಗಳನ್ನು ನೀಡುವುದಾಗಿ ಹೇಳಿ ಕಳೆದ ವಾರ ದೆಹಲಿಯಿಂದ ಚೆನ್ನೈಗೆ ಮಾಡೆಲ್‌ಗಳನ್ನು ಕರೆತಂದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ರಕ್ಷಿಸಲಾದ ಮಹಿಳೆಯರನ್ನು ಸರ್ಕಾರಿ ಮನೆಗೆ ಕಳುಹಿಸಲಾಗಿದೆ ಮತ್ತು ಪರಾರಿಯಾದ ಇಬ್ಬರು ಪಿಂಪ್‌ಗಳನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುಬ್ಬಳ್ಳಿ ಮತ್ತು ಮಂಗಳೂರಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲ: ಹುಬ್ಬಳ್ಳಿ ಹಾಗೂ ಮಂಗಳೂರಿನಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ (Prostitution) ದಂಧೆ ಮೇಲೆ ದಾಳಿ ಮಾಡಲಾಗಿತ್ತು. ಹುಬ್ಬಳ್ಳಿಯ ಎಸ್.ಜಿ.ಟವರ್ಸ್, ಅಮೃತ ಡಿಲಕ್ಸ್ ಹೋಟೆಲ್‌ನಲ್ಲಿ ಹೈಟೆಕ್‌ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಲಾಡ್ಜ್ ಮಾಲೀಕ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದರು.

ಲಾಡ್ಜ್ ಮಾಲೀಕ ವೆಂಕಟೇಶ ನಾಯ್ಕ, ಮ್ಯಾನೇಜರ್ ವಿರೇಶ್​ ಮುರುಡೇಶ್ವರ, ಕೆ.ಎಮ್.ಪ್ರದೀಪ್ ಗೌಡ, ಮಂಜುನಾಥ್ ಗೌಡ  ಎಂಬುವರನ್ನು ಬಂಧಿಸಲಾಗಿತ್ತು. ಆರೋಪಿಗಳು ಬೇರೆ ರಾಜ್ಯದಿಂದ ಯುವತಿಯರನ್ನು ಕರೆತಂದು ಈ ದಂಧೆ ನಡೆಸುತ್ತಿದ್ದು, ಆನ್‌ಲೈನ್‌ ಮೂಲಕ ವ್ಯವಹಾರ ಮಾಡುತ್ತಿದ್ದರು.

click me!