
ಉಳ್ಳಾಲ (ಮಾ.9) : ಉಳ್ಳಾಲ ತಾಲೂಕಿನ ಪಂಡಿತ್ ಹೌಸ್(Pandit house) ಸಮೀಪದ ವಿಜೇತ ನಗರದಲ್ಲಿರುವ ಯನ್ವಿ ಎಂಬ ಹೆಸರಿನ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಎಸಿಪಿ ಧನ್ಯಾ ನಾಯಕ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ದಂಧೆಯ ಕಿಂಗ್‌ಪಿನ್ ಮಹಿಳೆಯನ್ನು ಬಂಧಿಸಿದ್ದು, ಮತ್ತೊಬ್ಬ ಪಿಂಪ್ ತಲೆ ಮರೆಸಿಕೊಂಡಿದ್ದಾನೆ.
ಬಂಟ್ವಾಳ(Ullala) ತಾಲೂಕಿನ ಬೊಳಂತೂರು ಗ್ರಾಮದ ವಿಟ್ಲಕೋಡಿ(Vitlakodi) ನಿವಾಸಿ ರುಕಿಯಾ (50) ಬಂಧಿತ ಆರೋಪಿ. ರುಕಿಯಾ(Rukiya) ವಿಜೇತ ನಗರದ ಬಾಡಿಗೆ ಮನೆಯೊಂದರಲ್ಲಿ ಯುವತಿಯರನ್ನಿಟ್ಟು ವೇಶ್ಯಾವಾಟಿಕೆ(Prostitution) ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯಾ ಎನ್. ನಾಯ್‌್ಕ ಉಳ್ಳಾಲ ಪೊಲೀಸ್ ಠಾಣಾ(Ullala police statiion) ನಿರೀಕ್ಷಕರಾದ ಸಂದೀಪ್ ಜಿ.ಎಸ್., ಉಪನಿರೀಕ್ಷಕರಾದ ಮಂಜುಳಾ ಎಲ್. ನೇತೃತ್ವದಲ್ಲಿ ಮಂಗಳವಾರ ರಾತ್ರಿ ದಾಳಿ ನಡೆಸಿದರು. ಈ ವೇಳೆ ಮನೆಯಲ್ಲಿದ್ದ ಮೂವರು ಗಿರಾಕಿಗಳನ್ನ ವಶಕ್ಕೆ ಪಡೆದ ಪೊಲೀಸರು ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ. ಪ್ರಮುಖ ಪಿಂಪ್ ಲತೀಫ್ ಎಂಬಾತ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಯಿಂದ 3 ದ್ವಿಚಕ್ರ ವಾಹನಗಳು, 9 ಮೊಬೈಲ್ ಫೋನ್ ಗಳು, 5,000 ನಗದು ಸೇರಿದಂತೆ ಒಟ್ಟು 1,76,580 ರುಪಾಯಿ ಮೌಲ್ಯದ ಸೊತ್ತನ್ನ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಮಂಜುನಾಥ್ ಎನ್., ದಾಕ್ಷಾಯಿಣಿ, ಲಕ್ಷ್ಮೇ, ಎಸಿಪಿ ರೌಡಿ ನಿಗ್ರಹದಳ ಸಿಬ್ಬಂದಿ ರೆಜಿ ಪಾಲ್ಗೊಂಡಿದ್ದರು.
ಮಂಗಳೂರು: ಸಿಎಸ್‌ಐ ಬಿಷಪ್ ಕಾರ್ಯದರ್ಶಿಗೆ ಲೈಂಗಿಕ ಕಿರುಕುಳ ಆರೋಪ
ಚಾಲನೆ ವೇಳೆ ಚಾಲಕಗೆ ಅಸೌಖ್ಯ: ಪೆಟ್ರೋಲ್ ಬಂಕ್‌ಗೆ ನುಗ್ಗಿದ ಲಾರಿ
ಬಂಟ್ವಾಳ: ಲಾರಿ ಚಾಲನೆಯಲ್ಲಿರುವಾಗಲೇ ಚಾಲಕನಿಗೆ ಮೂರ್ಛೆ ರೋಗ ಬಾಧಿಸಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಬಳಿಕ ಪೆಟ್ರೋಲ್ ಬಂಕ್‌ಗೆ ನುಗ್ಗಿದ ಘಟನೆ ಬಿಸಿರೋಡಿನಲ್ಲಿ ನಡೆದಿದೆ. ಘಟನೆಯಿಂದ ಯಾವುದೇ ಪ್ರಾಣ ಅಪಾಯ ಆಗಿಲ್ಲ. ಮಂಗಳೂರು ಕಡೆಯಿಂದ ಹಾಸನಕ್ಕೆ ಖಾಲಿ ವಾಹನ ಹೋಗುತ್ತಿದ್ದ ವೇಳೆ ಬಿಸಿರೋಡಿನ ಪೆಟ್ರೋಲ್ ಪಂಪ್ ಬಳಿ ಘಟನೆ ನಡೆದಿದೆ.
ಚಾಲಕನಿಗೆ ಮೂರ್ಛೆ ರೋಗ ಬಾಧಿಸಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಚಾಲಕ ಲಕ್ಷ್ಮಣ್ ಎಂದು ಗುರುತಿಸಲಾಗಿದ್ದು, ಈತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕುತ್ತಿದ್ದ ರಿಟ್ಸ್ ಕಾರಿಗೆ ಡಿಕ್ಕಿ ಹೊಡೆದ ಲಾರಿ ಬಳಿಕ ಬೈಕ್ ಹೀಗೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ಬಳಿಕ ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಲಾಗಿದ್ದ ನ್ಯಾನೋ ಕಾರಿಗೆ ಡಿಕ್ಕಿ ಹೊಡೆದು ನಿಂತಿದೆ.
3 ದಿನಗಳ ಕಾಲ ಅರಣ್ಯದಲ್ಲಿಎಲೆಗಳನ್ನೇ ತಿಂದು ಬದುಕಿದ ಐಸಮ್ಮ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ