
ಗಾಜಿಯಾಬಾದ್(ನ. 23) ಕನಸು ಕಟ್ಟಿಕೊಂಡು ಮಹಾನಗರಕ್ಕೆ ಬಂದ ಆತ ಗೆಳತಿಯೊಂದಿಗೆ ವಾಸವಿರಲು ಯೋಚನೆ ಮಾಡಿದ್ದ. ಆದರೆ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡ. ಗೆಳತಿ ಈಗ ನಾಪತ್ತೆಯಾಗಿದ್ದಾಳೆ. ಪ್ರಕರಣ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.
ಡೆಹ್ರಾಡೂನ್‌ನ ಅಜಯ್ ದಾಂಡಿಯಾಲ್ (24) ದೆಹಲಿ ಬಳಿಯ ಗಾಜಿಯಾಬಾದ್‌ನ ಇಂದಿರಾಪುರಂನಲ್ಲಿರುವ ತನ್ನ ಸಹೋದರಿಯ ಫ್ಲ್ಯಾಟ್‌ಗೆ ತೆರಳಿದ್ದ. ಕಳೆದ ಎರಡೂವರೆ ತಿಂಗಳಿನಿಂದ ಖಾಲಿಯಾಗಿದ್ದ ಫ್ಲಾಟ್ ನಲ್ಲಿ ವಿದ್ಯುತ್ ಸಂಪರ್ಕ ಕಟ್ ಆಗಿತ್ತು. ಈ ಕಾರಣಕ್ಕೆ ಅಜಯ್ ಮತ್ತು ಗೆಳತಿ ಅಲ್ಲಿಂದ ಗುರುಗ್ರಾಮಕ್ಕೆ ವಾಪಸ್ ಬರುವ ತೀರ್ಮಾನ ಮಾಡಿದ್ದರು.
ವೋಟರ್ ಐಡಿ ಹೇಳಿದ ಮಂಡ್ಯದ ಮರ್ಡರ್ ಸ್ಟೋರಿ
ಕರೆಂಟ್ ಬಿಲ್ ಕಟ್ಟದ ಕಾರಣಕ್ಕೆ ಅಣ್ಣ-ತಂಗಿಯ ನಡುವೆ ವಾಗ್ವಾದ ಆಗಿತ್ತು. ಇತ್ತ ಗುರುಗ್ರಾಮಕ್ಕೆ ಬಂದ ಅಜಯ್ ನೇಣು ಹಾಕಿಕೊಂಡಿದ್ದಾನೆ. ಬೆಳಗ್ಗೆ ಅಜಯ್ ನೇತಾಡುತ್ತಿದ್ದುದ್ದನ್ನು ಆತನ ಗೆಳತಿ ನೋಡಿದ್ದಾಳೆ.
ಅವನನ್ನು ಕೆಳಕ್ಕೆ ಇಳಿಸಿ ನೋಡಿದಾಗ ಅವನು ಇನ್ನೂ ಉಸಿರಾಡುತ್ತಿದ್ದ. ಗೆಳತಿ ಅಜಯ್ ನನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದಾಳೆ. ಕ್ಯಾಬ್ ನಲ್ಲಿ ಕರೆದುಕೊಂಡು ಹೋಗುವ ವೇಳೆ ಅಜಯ್ ಸಹೋದರಿ ಅರ್ಚನಾಗೂ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಅವಳು ನಾನು ಕೂಡ ಬರುತ್ತಿದ್ದೇನೆ ಎಂದಿದ್ದಾಳೆ. ಆದರೆ ಅಜಯ್ ದಾರಿಯಲ್ಲಿಯೇ ಸಾವನ್ನಪ್ಪಿದ್ದಾನೆ.
ಏನೂ ಮಾಡಲು ತೋಚದ ಗೆಳತಿ ವಾಪಸ್ ಫ್ಲಾಟ್ ಗೆ ಬಂದಿದ್ದಾಳೆ. ಅಜಯ್ ಕುಡಿದಿದ್ದಾನೆ ಸಹಾಯ ಮಾಡಿ ಎಂದು ಸೆಕ್ಯೂರಿಟಿ ಗಾರ್ಡ್ ಬಳಿ ನೆರವು ಪಡೆದುಕೊಂಡು ಶವವನ್ನು ಫ್ಲಾಟ್ ಗೆ ತಂದು ಹಾಕಿ ಅಲ್ಲಿಂದ ಎಸ್ಕೇಪ್ ಆಗಿದ್ದಾಳೆ.
ಅನುಮಾನಗೊಂಡ ಸೆಕ್ಯೂರಿಟಿಯವರು ಇವರು ವಾಸವಿದ್ದ ಫ್ಲಾಟ್ ಬಾಗಿಲು ತೆರೆದು ನೋಡಿದಾಗ ಅಜಯ್ ಶವ ಪತ್ತೆಯಾಗಿದೆ. ಯಾವ ಕಾರಣಕ್ಕೆ ಗರ್ಲ್ ಫ್ರೆಂಡ್ ಹೀಗೆ ಮಾಡಿದಳು? ನಿಜಕ್ಕೂ ಅಂದು ಏನು ನಡೆಯಿತು ಎಂದು ಪೊಲೀಸರು ತಲೆ ಕೆಡಿಸಿಕೊಂಡು ಕೂತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ