ಬಾಗಲಕೋಟೆ: ಪೊಲೀಸ್‌ ಪರೀಕ್ಷೆಯಲ್ಲಿ ಹೈಟೆಕ್‌ ನಕಲು, ಯುವಕನ ಬಂಧನ

By Suvarna NewsFirst Published Nov 23, 2020, 11:07 AM IST
Highlights

ರಾಜ್ಯ ಪೋಲಿಸ್‌ ಇಲಾಖೆಯ ಸಶಸ್ತ್ರ & ಮೀಸಲು‌ ಪಡೆ ಪರೀಕ್ಷೆ‌ಯಲ್ಲಿ ನಕಲು ಮಾಡಲು ಯತ್ನಿಸಿದ ಯುವಕನ ಬಂಧನ| ಬಾಗಲಕೋಟೆ ನಗರದಲ್ಲಿ ನಡೆದ ಘಟನೆ| ಮಾಸ್ಕ್ ಒಳಗೊಂದು, ಕಿವಿಯಲ್ಲೊಂದು ಎಲೆಕ್ಟ್ರಾನಿಕ್ ವಸ್ತುಗಳನ್ನ ಹಾಕಿಕೊಂಡು ಮೋಸದಿಂದ ಉತ್ತರ ಪತ್ರಿಕೆ ಬರೆಯುತ್ತಿದ್ದ ಯುವಕ| 

ಬಾಗಲಕೋಟೆ(ನ.23): ಪೊಲೀಸ್‌ ಪರೀಕ್ಷೆಯಲ್ಲಿ ಮೊಬೈಲ್ ಡಿವೈಸ್ ಬಳಸಿ ಉತ್ತರ ಪತ್ರಿಕೆ ಬರೆಯುತ್ತಿದ್ದ ಯುವಕನೊಬ್ಬನ್ನ ಪೊಲೀಸರು ಬಂಧಿಸಿದ ಘಟನೆ ನಿನ್ನೆ(ಭಾನುವಾರ) ನಡೆದಿದೆ. 

ಈ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಎಸ್.ಪಿ.ಲೋಕೇಶ್ ಜಗಲಾಸರ್ ಅವರು, ನಗರದಲ್ಲಿ ಭಾನುವಾರ ನಡೆದಿದ್ದ ರಾಜ್ಯ ಪೊಲೀಸ್‌ ಇಲಾಖೆಯ ಸಶಸ್ತ್ರ & ಮೀಸಲು‌ ಪಡೆ ಪರೀಕ್ಷೆ‌ಯಲ್ಲಿ ನಕಲು ಮಾಡಲು ಯತ್ನಿಸಿದ ಶ್ರೀಮಂತ ಸದಲಗಿ ಎಂಬ ಯುವಕನನ್ನ ಬಂಧಿಸಲಾಗಿದೆ ಎಂದು ತಿಳಿದ್ದಾರೆ. 

ಗಂಡನ ಲವ್ವಿಡವ್ವಿ ಪತ್ತೆ ಹಚ್ಚಲು ಹೋದ ಹೆಂಡ್ತಿ: ಮಾನಕ್ಕೆ ಅಂಜಿ ಮಹಿಳೆ ಆತ್ಮಹತ್ಯೆ

ಬಂಧಿತ ಶ್ರೀಮಂತ ಸದಲಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಮೈಗೂರ ಗ್ರಾಮದವನಾಗಿದ್ದಾನೆ ಎಂದು ತಿಳಿದು ಬಂದಿದೆ. ನಗರದ ವಿದ್ಯಾಗಿರಿಯ ಪಬ್ಲಿಕ್ ಶಾಲೆಯ 464ನೇ ಬ್ಲಾಕ್ ನಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಶ್ರೀಮಂತ ಮಾಸ್ಕ್ ಒಳಗೊಂದು, ಕಿವಿಯಲ್ಲೊಂದು ಎಲೆಕ್ಟ್ರಾನಿಕ್ ವಸ್ತುಗಳನ್ನ ಹಾಕಿಕೊಂಡು ಮೋಸದಿಂದ ಉತ್ತರ ಪತ್ರಿಕೆ ಬರೆಯುವ ಮೂಲಕ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಲು ಮುಂದಾಗಿದ್ದ ಎಂದು ತಿಳಿಸಿದ್ದಾರೆ.

ಯುವಕನ ಕೃತ್ಯಕ್ಕೆ ಸಹಕಾರ ನೀಡಿದವರನ್ನು ಸಹ ಬಂಧಿಸಲಾಗುವುದು. ನಿನ್ನೆ ಜಿಲ್ಲೆಯಾದ್ಯಂತ ಸುಮಾರು ಅಂದಾಜು 10 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಎಸ್.ಪಿ ಜಗಲಾಸರ್ ಮಾಹಿತಿ ನೀಡಿದ್ದಾರೆ. 
 

click me!