ಪಾಕಿಸ್ತಾನ ಹೆಸರಲ್ಲಿ ಅಂಕೋಲಾದಲ್ಲಿ ಪೋಸ್ಟರ್ ಪತ್ತೆ: ಜನತೆಗೆ ಬಾಂಬ್‌ನ ಆತಂಕ

By Sathish Kumar KHFirst Published Jun 4, 2023, 11:37 PM IST
Highlights

ಪಾಕಿಸ್ತಾನದ ಹೆಸರಿನಲ್ಲಿ ಅಂಗಡಿಯೊಂದರ ಗೋಡೆಗೆ ಪೋಸ್ಟರ್ ಅಂಟಿಸುವ ಮೂಲಕ ಕಿಡಿಗೇಡಿಗಳು ಜನರಲ್ಲಿ ಭೀತಿ ಸೃಷ್ಠಿಸುವ ಕೃತ್ಯ ಎಸಗಿದ ಘಟನೆ ಉತ್ತರಕನ್ನಡ ಅಂಕೋಲಾ ಪಟ್ಟಣದ ಬಂಡಿಬಜಾರ್ ನಲ್ಲಿ ನಡೆದಿದೆ‌.

ಉತ್ತರ ಕನ್ನಡ (ಜೂ.04): ಪಾಕಿಸ್ತಾನದ ಹೆಸರಿನಲ್ಲಿ ಅಂಗಡಿಯೊಂದರ ಗೋಡೆಗೆ ಪೋಸ್ಟರ್ ಅಂಟಿಸುವ ಮೂಲಕ ಕಿಡಿಗೇಡಿಗಳು ಜನರಲ್ಲಿ ಭೀತಿ ಸೃಷ್ಠಿಸುವ ಕೃತ್ಯ ಎಸಗಿದ ಘಟನೆ ಉತ್ತರಕನ್ನಡ ಅಂಕೋಲಾ ಪಟ್ಟಣದ ಬಂಡಿಬಜಾರ್ ನಲ್ಲಿ ನಡೆದಿದೆ‌.

ಅಂಕೋಲಾದ ಸ್ಪೋರ್ಟ್ಸ್ ಮಳಿಗೆಯ ಗೋಡೆಗೆ ಮೂರು ಪೋಸ್ಟರ್ ಅಂಟಿಸಲಾಗಿದ್ದು, ಬಿಳಿ ಹಾಳೆಯ ಮೇಲೆ ಕೆಂಪು ಬಣ್ಣದ ಮಾರ್ಕರ್ ನಿಂದ ಕನ್ನಡ ಮತ್ತು ಇಂಗ್ಲೀಷ್ ಅಕ್ಷರದಲ್ಲಿ ಬರೆಯಲಾಗಿದೆ. ಪೋಸ್ಟರ್ ನಲ್ಲಿ ಸಾಂಗ್ಲಾನಿ ವೆಲ್ ಫೇರ್ ಟ್ರಸ್ಟ್ ಎಂದು ಬರೆದು ಬ್ರಾಕೇಟ್‌ನಲ್ಲಿ ಪಾಕಿಸ್ತಾನ ಕಾಂಟ್ರ್ಯಾಕ್ಟ್ ಎಂದು ಬರೆಯಲಾಗಿದೆ. ಬರಹದಲ್ಲಿ ಪಿ.ಎಂ ಹೈಸ್ಕೂಲ್ , ಜೈಹಿಂದ್ ಹೈಸ್ಕೂಲ್  ಎಂದು ಸ್ಥಳೀಯ ಶಾಲೆಯ ಉಲ್ಲೇಖ ಮಾಡಲಾಗಿದ್ದು ಇದರಿಂದ ಇಡೀ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. 

ಕ್ಷುಲ್ಲಕ ಕಾರಣಕ್ಕೆ ತಾಯಿ ಸೀರೆಯಿಂದಲೇ ನೇಣು ಬಿಗಿದುಕೊಂಡ ಅಕ್ಕ- ತಂಗಿಯರು

ಉರ್ದು ವೆಲ್ ಫೇರ್ ಟ್ರಸ್ಟ್ ನಿಂದ ಹಣ ಕಮಾಯಿ:  ಕೆ.ಎಲ್.ಇ ಕಾಲೇಜ್ , ಉರ್ದು ವೆಲ್ ಫೇರ್ ಟ್ರಸ್ಟ್ ನಿಂದ ಹಣ ಕಮಾಯಿಸಿ, ಇಂಡಿಯನ್ಸ್ ಫಾರೆಸ್ಸ್ ಮಾರಿದ್ದಾರೆ. 20 ವರ್ಷದಲ್ಲಿ ಎಲ್ಲವೂ ನೆಲಸಮ ಆಗುತ್ತದೆ. ಪಿ.ಎಂ. ಹೈಸ್ಕೂಲ್ ಗೆ ಹೋಗಿ, ವೇಸ್ಟೇಜ್ ಫೈನಾನ್ಸ್ ಸಿಗುತ್ತದೆ ಎಂದು ಅರ್ಥವಿಲ್ಲದ ಪದಗಳನ್ನು ಬರೆದು ಅಂಟಿಸಲಾಗಿದೆ. ಇನ್ನು ಸ್ಥಳಕ್ಕೆ ಆಗಮಿಸಿದ ಅಂಕೋಲಾ ಪೊಲೀಸರು ಪೋಸ್ಟರ್ ತೆರವು ಗೊಳಿಸಿದ್ದಾರೆ. ಪೋಸ್ಟರ್ ನೋಡಿ ಸ್ಥಳೀಯರಂತೂ ಭೀತಿಗೊಳಗಾಗಿದ್ದು, ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಲು ಒತ್ತಾಯಿಸಿದ್ದಾರೆ.

ಪೀಪಲ್ಸ್‌ ಮ್ಯಾನ್‌ ಖ್ಯಾತಿಯ ಇನ್ಸ್‌ಪೆಕ್ಟರ್‌ ಮಂಜುನಾಥ್‌ ಲಿವರ್‌ ಕ್ಯಾನ್ಸರ್‌ಗೆ ಬಲಿ: 
ಬೆಂಗಳೂರು (ಜೂ.04): ಸಿಲಿಕಾನ್‌ ಸಿಟಿ, ಟ್ರಾಫಿಕ್‌ ಸಿಟಿ ಎಂದು ಖ್ಯಾತವಾದ ಬೆಂಗಳೂರಿನಲ್ಲಿ ಕುಟುಂಬ, ಸಂಸಾರಕ್ಕಿಂತಲೂ ಹೆಚ್ಚಾಗಿ ವೃತ್ತಿಯನ್ನೇ ಪ್ರೀತಿಸುತ್ತಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್‌ ಮಂಜುನಾಥ್‌ ಲಿವರ್‌ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. ಇನ್ಸ್‌ಪೆಕ್ಟರ್‌ ಮಂಜುನಾಥ್‌ ಇತ್ತೀಚೆಗೆ ಬೆಂಗಳೂರಿನ ಜಯನಗರ ಪೊಲೀಸ್‌ ಠಾಣೆಯಲ್ಲಿ ವೃತ್ತಿ ಮಾಡುತ್ತಿದ್ದರು. ಆದರೆ, ಕಾರ್ಯದಕ್ಷತೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಮಂಜುನಾಥ್‌ ಆರೋಗ್ಯದ ಕಡೆಗೆ ಹೆಚ್ಚಾಗಿ ಗಮನ ಹರಿಸಿರಲಿಲ್ಲ. ಹೀಗಾಗಿ, ಆಹಾರ ಮತ್ತು ದಿನನಿತ್ಯದ ದೈಹಿಕ ಚಟುವಟಿಕೆಗಳಿಂದ ಲಿವರ್‌ ಕ್ಯಾನ್ಸರ್‌ ಉಂಟಾಗಿದೆ. ಇನ್ನು ಅದು ಕೊನೆಯ ಹಂತದಲ್ಲಿರುವಾಗ ಕಳೆದ ಜನವರಿಯಿಂದ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿರುವುದು ತಿಳಿದಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ, ಭಾನುವಾರ ಮಧ್ಯಾಹ್ನ ಚಿಕಿತ್ಸೆ ಫಲಿಸದೇ ಮಂಜುನಾಥ್‌ ಸಾವನ್ನಪ್ಪಿದ್ದಾರೆ. ಹುಟ್ಟೂರು ಹಾಸನಕ್ಕೆ ಇನ್ಸ್ಪೆಕ್ಟರ್ ಮಂಜುನಾಥ್ ಮೃತದೇಹ ರವಾನೆ ಮಾಡಲು ಕುಟುಂಬಸ್ಥರ ಸಿದ್ಧತೆ ನಡೆಸಿದ್ದು, ಹಾಸನದಲ್ಲಿ ಅಂತಿಮ ಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

ಬೆಂಗಳೂರಿನ ಪೀಪಲ್ಸ್‌ ಮ್ಯಾನ್‌ ಖ್ಯಾತಿಯ ಇನ್ಸ್‌ಪೆಕ್ಟರ್‌ ಮಂಜುನಾಥ್‌ ಲಿವರ್‌ ಕ್ಯಾನ್ಸರ್‌ಗೆ ಬಲಿ

ಪೀಪಲ್ಸ್‌ ಮ್ಯಾನ್‌ ಎಂದು ಖ್ಯಾತಿ: ಹಾಸನ ಮೂಲದವರಾದ ಮಂಜುನಾಥ್ ಯುಆರ್ 2007ನೇ ಬ್ಯಾಚ್ ನ ಪೊಲೀಸ್ ಇನ್ಸ್ಪೆಕ್ಟರ್ ಆಗಿ ವೃತ್ತಿಗೆ ಸೇರಿಕೊಂಡಿದ್ದರು. ಕಳೆದ 2021 ರಲ್ಲಿ ಮುಖ್ಯಮಂತ್ರಿ ಪದಕಕ್ಕೂ ಭಾಜನರಾಗಿದ್ದರು. ರಾಜ್ಯದ ಮೈಸೂರು ಪೊಲೀಸ್ ಅಕಾಡೆಮಿಯಲ್ಲಿ ತಮ್ಮ ಮೊದಲ ಕೆಲಸವನ್ನು ಪ್ರಾರಂಭಿಸಿದರು. ಪೊಲೀಸ್ ಅಕಾಡೆಮಿಯಲ್ಲಿ ಯಶಸ್ವಿಯಾದ ನಂತರ ಬೆಳಗಾವಿ, ಚಾಮರಾಜನಗರ, ಬೇಲೂರು ಮತ್ತು ಕರ್ನಾಟಕದ ಹಲವಾರು ಭಾಗಗಳಲ್ಲಿ ಕೆಲಸ ಮಾಡಿದರು. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ತಮ್ಮ 15 ವರ್ಷಗಳ ಸೇವೆಯಲ್ಲಿ ಹಲವಾರು ಪ್ರಕರಣಗಳನ್ನು ಪರಿಹರಿಸಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ. ಅವರನ್ನು ಕೆಲವೆಡೆ ಪೀಪಲ್ಸ್ ಮ್ಯಾನ್ ಎಂದು ಕರೆಯಲಾಗುತ್ತಿತ್ತು. ಜೊತೆಗೆ, ರಾಜ್ಯದ ಹಲವಾರು ಸಂಸ್ಥೆಗಳಿಂದ ಗುರುತಿಸಿ ಸನ್ಮಾನಿಸಲಾಗಿತ್ತು.

click me!