ಕ್ಷುಲ್ಲಕ ಕಾರಣಕ್ಕೆ ಅಕ್ಕ-ತಂಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಘಟಗಿ ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಧಾರವಾಡ (ಜೂ.04): ಕ್ಷುಲ್ಲಕ ಕಾರಣಕ್ಕೆ ಅಕ್ಕ-ತಂಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಘಟಗಿ ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಪಟ್ಟಣದ ಬೆಂಡಿಗೇರಿ ಓಣಿಯಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಸಹೋದರಿಯರು ಮನೆಯಲ್ಲಿ ತಾಯಿ ಇಲ್ಲದ ಸಮಯ ನೋಡಿಕೊಂಡು ಒಂದೇ ಸೀರೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾವೇರಿ ಹಡಪದ (19), ಭೂಮಿಕಾ ಹಡಪದ(17) ಆತ್ಮಹತ್ಯೆಗೆ ಶರಣಾದ ಸಹೋದರಿಯರು ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಕಲಘಟಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸಿಪಿಐ ಶ್ರೀಶೈಲ ಕೌಜಲಗಿ ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರಿನ ಪೀಪಲ್ಸ್ ಮ್ಯಾನ್ ಖ್ಯಾತಿಯ ಇನ್ಸ್‌ಪೆಕ್ಟರ್ ಮಂಜುನಾಥ್ ಲಿವರ್ ಕ್ಯಾನ್ಸರ್‌ಗೆ ಬಲಿ
ಕಾರಿಗೆ ಡಿಕ್ಕಿ ಹೊಡೆದು ಜಿಂಕೆ ಸಾವು: ಶಿವಮೊಗ್ಗ(ಜೂ.04): ತಾಲೂಕಿನ ಚೋರಡಿ ಸಮೀಪದ ಭಾನುವಾರ ಸಂಜೆ ವಾಹನಕ್ಕೆ ಡಿಕ್ಕಿಯಾಗಿ ಜಿಂಕೆಯೊಂದು ಸಾವಿಗೀಡಾದ ಘಟನೆ ನಡೆದಿದೆ. ಬಿ.ಹೆಚ್.ರಸ್ತೆಯ ಕುಮದ್ವತಿ ಸೇತುವೆಗೆ ಅನತಿದೂರದಲ್ಲಿಯೇ ಈ ಘಟನೆ ನಡೆದಿದೆ. ಸಾಗರದಿಂದ ಶಿವಮೊಗ್ಗ ಕಡೆ ಬರುತಿದ್ದ ಇನ್ನಾವ ಕಾರಿಗೆ ವೇಗವಾಗಿ ರಸ್ತೆ ದಾಟುತಿದ್ದ ಗಂಡು ಜಿಂಕೆಯೊಂದು ಡಿಕ್ಕಿ ಹೊಡೆದಿದೆ. ಚಾಲಕನ ಗಮನಕ್ಕೆ ಬಾರದೆ ಏಕಾಏಕಿ ರಸ್ತೆ ದಾಟಿದ ಜಿಂಕೆ ಡಿಕ್ಕಿ ಹೊಡೆದ ರಬಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ತಲೆಗೆ ತೀವ್ರ ಪೆಟ್ಟು ಬಿದ್ದ ಜಿಂಕೆ ಸ್ಥಳದಲ್ಲಿಯೇ ಸಾವಿಗೀಡಾಗಿದೆ. ಸ್ಥಳಕ್ಕೆ ಬಂದು ಮಹಜರು ನಡೆಸಿರುವ ಅರಣ್ಯ ಇಲಾಖೆ ಸಿಬ್ಬಂದಿ ದೂರು ದಾಖಲಿಸಿಕೊಂಡಿದ್ದಾರೆ.
ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್‌ನಿಂದ ಬಿದ್ದ ಸವಾರ:
ತುಮಕೂರು (ಜೂ.04): ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್ ಸವಾರ ಹಳ್ಳಕ್ಕೆ ಬಿದ್ದಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಹನುಮಂತಪುರದಲ್ಲಿ ನಡೆದಿದೆ. ಹನುಮಂತಪುರದ ವಾಸಿ ಕೃಷ್ಣ (34) ಗಾಯಗೊಂಡ ಬೈಕ್ ಸವಾರ. ಮಿಡಿಗೇಶಿಯಿಂದ ಹನುಮಂತಪುರಕ್ಕೆ ತೆರಳುವಾಗ ಘಟನೆ ನಡೆದಿದೆ. ಬೈಕ್ ನಲ್ಲಿ ಹೋಗುವಾಗ ದಿಡೀರನೆ ಕರಡಿ ಅಡ್ಡಬಂದಿದೆ. ಈ ವೇಳೆ ಕರಡಿ ಕಂಡು ಗಾಬರಿಯಾದ ಕೃಷ್ಣ, ತಪ್ಪಿಸಿಕೊಳ್ಳಲು ಹೋಗಿ ಆಯತಪ್ಪಿ ಬಿದ್ದಿದ್ದಾರೆ. ಸ್ಥಳೀಯರ ಸಹಾಯದಿಂದ ಕೃಷ್ಣ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಧುಗಿರಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿ ತಿಳಿದ ಅರಣ್ಯಾಧಿಕಾರಿ ಮುತ್ತುರಾಜ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಕರೆಂಟ್ ಹೊಡೆದು ಕಂಬದಲ್ಲೇ ಒದ್ದಾಡಿ ಪ್ರಾಣಬಿಟ್ಟ ಜೆಸ್ಕಾಂ ಲೈನ್‌ಮ್ಯಾನ್!
ರಾಯಚೂರು (ಜೂ.04): ವಿದ್ಯುತ್ ಕಂಬವನ್ನು ಹತ್ತಿ ದುರಸ್ತಿ ಕಾರ್ಯವನ್ನು ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಉಂಟಾಗಿ ಜೆಸ್ಕಾಂ ಲೈನ್‌ಮನ್ ಕಂಬದ ಮೇಲೆಯೇ ಸಾವನ್ನಪ್ಪಿದ ದುರ್ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಆಲದಮರ ತಾಂಡದಲ್ಲಿ ಭಾನುವಾರ ನಡೆದಿದೆ. ಇನ್ನು ವಿದ್ಯುತ್ ಲೈನ್ ದುರಸ್ತಿಗಾಗಿ ಏಣಿಯನ್ನು ಇಟ್ಟುಕೊಂಡು ಕಂಬವನ್ನು ಹತ್ತಿ, ಲೈನ್ ಮ್ಯಾನ್ ಉರಸ್ತಿ ಕಾರ್ಯವನ್ನು ಮಾಡುತ್ತಿದ್ದರು. ಕಂಬವನ್ನು ಹತ್ತುವ ವೇಳೆ ವಿದ್ಯುತ್ ಸರಬರಾಜು ಸ್ಥಗಿತ ಮಾಡಲಾಗಿತ್ತು. ಆದರೆ, ದುರಸ್ತಿ ಮಾಡುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಸರಬರಾಜು ಮಾಡಲಾಗಿದ್ದು, ಕಂಬದ ಮೇಲೆಯೇ ಶಾಕ್ ಹೊಡೆದು ಲೈನ್‌ಮ್ಯಾನ್ ದುರಂತವಾಗಿ ಸಾವನ್ನಪ್ಪಿದ್ದಾರೆ. ಲೈನ್ ಮ್ಯಾನ್ ಸಾವು (Line Man death) ನೋಡಿದ ಸ್ಥಳೀಯರು ಜೆಸ್ಕಾಂ ಇಂಜಿನಿಯರ್ ಗೆ (GESCOM Engineer) ಫೋನ್ ಮಾಡಿದ್ದಾರೆ. ಸುಮಾರು ಗಂಟೆಗಳಾದರೂ ಜೆಸ್ಕಾಂ ಸಿಬ್ಬಂದಿ ಬಂದು ಲೈನ್‌ಮ್ಯಾನ್ ಮೃತದೇಹವನ್ನೂ ಕೆಳಗಿಳಸದೇ ನಿರ್ಲಕ್ಷ್ಯ ತೋರಿದ್ದಾರೆ.