ಪೋರ್ನ್ ವೆಬ್‌ಸೈಟ್‌‌ಗಳಲ್ಲಿ Satish Jarkiholi ಹೆಸರಲ್ಲಿ ವಿಡಿಯೋ ಅಪ್‌ಲೋಡ್!

Published : Apr 20, 2022, 01:27 PM ISTUpdated : Apr 20, 2022, 01:28 PM IST
ಪೋರ್ನ್ ವೆಬ್‌ಸೈಟ್‌‌ಗಳಲ್ಲಿ Satish Jarkiholi ಹೆಸರಲ್ಲಿ ವಿಡಿಯೋ ಅಪ್‌ಲೋಡ್!

ಸಾರಾಂಶ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೆಸರಿಗೆ ಕಳಂಕ ತರಲು ಯತ್ನ ಆರೋಪ ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಗೆ ಸತೀಶ್ ಅಭಿಮಾನಿ ವಿಜಯ್ ತಳವಾರ್ ದೂರು ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಸತೀಶ್ ಜಾರಕಿಹೊಳಿ ಅಭಿಮಾನಿಗಳ ಆಗ್ರಹ

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ (ಏ.20): ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೆಸರಿಗೆ ಕಳಂಕ ತರಲು ಕೆಲ ಕಿಡಿಗೇಡಿಗಳು 'ಸತೀಶ್ ಜಾರಕಿಹೊಳಿ ಸೆಕ್ಸ್ ವಿಡಿಯೋಸ್' ಎಂದು ಅಶ್ಲೀಲ ವೆಬ್‌ಸೈಟ್‌ನಲ್ಲಿ ಬೇರೆ ಅಶ್ಲೀಲ ವಿಡಿಯೋಗಳ ಪೋಸ್ಟ್ ಮಾಡಿದ್ದು ಈ ಕುರಿತು ಕ್ರಮ ಕೈಗೊಳ್ಳುವಂತೆ ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಗೆ ಸತೀಶ್ ಜಾರಕಿಹೊಳಿ ಅಭಿಮಾನಿ ವಿಜಯ್ ತಳವಾರ್ ದೂರು ನೀಡಿದ್ದಾರೆ.

ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಸತೀಶ್ ಜಾರಕಿಹೊಳಿ ಹೆಸರು ಬಳಸಿ ಪೋಸ್ಟ್ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸತೀಶ್ ಜಾರಕಿಹೊಳಿ ಹೆಸರು ದುರ್ಬಳಕೆ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸತೀಶ್ ಜಾರಕಿಹೊಳಿ ಅಭಿಮಾನಿಗಳು ಆಗ್ರಹಿಸಿದ್ದಾರೆ.

Chikkamagaluru ಭಕ್ತಿಯಲ್ಲಿ ಭಾವಪರವಶರಾದ ಸಿಎಂ ಬೊಮ್ಮಾಯಿ

 ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿರುವ ಸತೀಶ್ ಜಾರಕಿಹೊಳಿ ಅಭಿಮಾನಿ ವಿಜಯ್ ತಳವಾರ್, 'ತಾವು ಕರ್ನಾಟಕ ವಾಲ್ಮೀಕಿ ಯುವ ವೇದಿಕೆಯ ರಾಜ್ಯಾಧ್ಯಕ್ಷರಾಗಿದ್ದು  ಕಳೆದ ಹತ್ತು ವರ್ಷಗಳಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಜೊತೆ ಒಡನಾಟ ಹೊಂದಿದ್ದು, ಕೆಲವು ಸತೀಶ್ ಜಾರಕಿಹೊಳಿ ಅಭಿಮಾನಿಗಳು ತಮ್ಮನ್ನು ಸಂಪರ್ಕಿಸಿ ಸತೀಶ್ ಜಾರಕಿಹೊಳಿಯವರ ಹೆಚ್ ಡಿ ಕ್ವಾಲಿಟಿ (HD Quality) ಫೋಟೋಗಳನ್ನು ಬ್ಯಾನರ್‌ಗಳಲ್ಲಿ ಹಾಕಲು ಕೇಳಿದ್ದರು. ತಮ್ಮ ಮೊ‌ಬೈಲ್‌ನಲ್ಲಿದ್ದ ಫೋಟೋಗಳು ಡಿಲೀಟ್ ಆಗಿದ್ದು ಗೂಗಲ್‌ನಲ್ಲಿ ಸರ್ಚ್ ಮಾಡಲು ತಿಳಿಸಿದ್ದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ನೈತಿಕ ಶಿಕ್ಷಣ ಪಠ್ಯಕ್ರಮದಲ್ಲಿ ಕುರಾನ್ ಸೇರ್ಪಡೆ BC NAGESH

ಹೀಗಾಗಿ ಗೂಗಲ್ ವೆಬ್‌ಸೈಟ್‌ನಲ್ಲಿ Satish Jarkiholi ಹೆಸರಿನಲ್ಲಿ ಫೋಟೋಗಳನ್ನು ಸರ್ಚ್ ಮಾಡುತ್ತಿದ್ದಾಗ 2011 ರಿಂದ 2022ರ ಅವಧಿಯಲ್ಲಿನ ಬೇರೆ ಬೇರೆ ಪೋರ್ನ್ ವೆಬ್‌ಸೈಟ್‌ಗಳಲ್ಲಿ ವಿವಿಧ ಅಶ್ಲೀಲ ವಿಡಿಯೋಗಳು ಬಂದಿದ್ದವು. ಅದನ್ನು ಪರಿಶೀಲಿಸಿದಾಗ ಯಾರೋ ಆರೋಪಿತರು ಚುನಾಯಿತ ಪ್ರತಿನಿಧಿ ಸತೀಶ್ ಜಾರಕಿಹೊಳಿ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಗೂಗಲ್‌ನಲ್ಲಿ Satish Jarkiholi Sex Videos ಅಂತಾ ಸರ್ಚ್ ಮಾಡಿದಾಗ ಬೇರೆ ಬೇರೆ ಪೋರ್ನ್ ವೆಬ್‌ಸೈಟ್‌‌ಗಳಿಗೆ ಲಿಂಕ್ ಆಗುವಂತೆ ಲಿಂಕ್ ತಯಾರಿಸಿ ಪೋರ್ನ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದು ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಇನ್ನು Information Technology Act 2000(U/s. 67, 67(A))ರಡಿ ಪ್ರಕರಣ ದಾಖಲಿಸಿಕೊಂಡಿರುವ ಬೆಳಗಾವಿ ಸಿಇಎನ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ‌.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?