
ಕೊಡಗು (ಮಾ.7): ಕೆಸರು ಗದ್ದೆಯಲ್ಲಿ ನವಜಾತ ಶಿಶುವನ್ನು ಹೂತು ಹೋಗಿರುವ ಘಟನೆ ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಗದ್ದೆಹಳ್ಳದ ಜಮೀನೊಂದರಲ್ಲಿ ನಡೆದಿದೆ.
ಯಾರೋ ದುಷ್ಕರ್ಮಿಗಳು ಕೊಂದು ಶಿಶುವನ್ನು ಗದ್ದೆಯಲ್ಲಿ ಹೂತುಹೋಗಿದ್ದಾರೆ. ಸಂಜೆ ಸ್ಥಳೀಯ ರೈತರಿಗೆ ಗದ್ದೆಯಿಂದ ದುರ್ವಾಸನೆ ಬಂದಿದೆ. ಈ ಹಿನ್ನೆಲೆ ಇಂದು ಮುಂಜಾನೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಹೂತಿದ್ದ ಮಣ್ಣು ತೆಗೆದಾಗ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ನವಜಾತ ಶಿಶು ಹೆಣ್ಣು ಎಂದು ಹೂಳಲಾಗಿದೆಯೇ, ಹತ್ಯೆ ಮಾಡಿದ್ದಾರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಘಟನೆ ಬಳಿಕ ಸುಂಟಿಕೊಪ್ಪ ಪೊಲೀಸರು, ಕುಶಾಲನಗರ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.
ಹಣಕ್ಕಾಗಿ ಹೆತ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ಪ್ರಕರಣ! ತಾಯಿ ಸೇರಿ ನಾಲ್ವರು ದೋಷಿ ಎಂದು ಕೋರ್ಟ್ ತೀರ್ಪು
ಸ್ಥಾನಕ್ಕೆ ತೆರಳಿದ್ದ ಮೂವರು ಸ್ನೇಹಿತರು ನೀರುಪಾಲು:
ಕೊಡಗು: ಸ್ನಾನಕ್ಕೆ ತೆರಳಿದ್ದ ಮೂವರು ಯುವಕರು ನೀರುಪಾಲಾದ ಘಟನೆ ಕೊಡಗಿನ ಕೂಡಿಗೆ ಕಾವೇರಿ ನದಿಯಲ್ಲಿ ನಡೆದಿದೆ.ಚಿಕ್ಕತ್ತೂರಿನ ಶ್ರೀನಿವಾಸ್ (23), ಕಣಿವೆಯ ಸಚಿನ್ (25) ಮತ್ತು ಮುಳ್ಳುಸೋಗೆ ವಿನೋದ್ ಮೃತ ದುರ್ದೈವಿಗಳು.
ಹುಟ್ಟಿದ 5ನೇ ದಿನಕ್ಕೆ ಮಗುವಿಗೆ ಋತುಸ್ರಾವ…. ಏನಿದು ಸಮಸ್ಯೆ ತಿಳಿಯಿರಿ
ಬಿರುಬೇಸಗೆ ಹಿನ್ನೆಲೆ ಕಾರಿನಲ್ಲಿ ನದಿ ಸ್ನಾನಕ್ಕೆ ಹೋಗಿದ್ದ ಐವರು ಸ್ನೇಹಿತರು. ನದಿಯಲ್ಲಿ ಮುಳುಗುತ್ತಿದ್ದ ಒಬ್ಬನನ್ನು ರಕ್ಷಿಸಲು ಹೋಗಿ ಮತ್ತಿಬ್ಬರು ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು. ಒಬ್ಬನ ಮೃತದೇಹ ಮೇಲೆತ್ತಲಾಗಿದೆ. ಮತ್ತಿಬ್ಬರ ಶವಕ್ಕಾಗಿ ತೀವ್ರ ಶೋಧ ನಡೆಸಿರುವ ಪೊಲೀಸರು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ