ಯುವತಿ ಹೆಸರಲ್ಲಿ ನಕಲಿ ಎಫ್‌ಬಿ ತೆರೆದು ಅಶ್ಲೀಲ ಸಂದೇಶ ರವಾನೆ

Kannadaprabha News   | Asianet News
Published : May 17, 2021, 10:10 AM ISTUpdated : May 17, 2021, 10:28 AM IST
ಯುವತಿ ಹೆಸರಲ್ಲಿ ನಕಲಿ ಎಫ್‌ಬಿ ತೆರೆದು ಅಶ್ಲೀಲ ಸಂದೇಶ ರವಾನೆ

ಸಾರಾಂಶ

* ಅಶ್ಲೀಲ ಸಂದೇಶ ಕಳಿಸಿ ಯುವತಿ ಬಗ್ಗೆ ತಪ್ಪು ಕಲ್ಪನೆ ಬರುವಂತೆ ಮಾಡಿದ ಖದೀಮ * ಯುವತಿಯ ಎಫ್‌ಬಿ ಹ್ಯಾಕ್‌ ಮಾಡಿ ಅಶ್ಲೀಲ ಸಂದೇಶ ಕಳುಹಿಸಿದ ಪರಿಚಿತ ಯುವಕ  * ಈ ಸಂಬಂಧ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು  

ಹುಬ್ಬಳ್ಳಿ(ಮೇ.17): ಇಲ್ಲಿನ ಹಳೆ ಬಾದಾಮಿ ನಗರದ ಯುವತಿ ಹೆಸರಿನಲ್ಲಿ ಎರಡು ನಕಲಿ ಫೇಸ್‌ಬುಕ್‌ ಖಾತೆ ತೆರೆದು ಇತರರಿಗೆ ಅಶ್ಲೀಲ ಸಂದೇಶ ಕಳಿಸಿ ಯುವತಿ ಬಗ್ಗೆ ತಪ್ಪು ಕಲ್ಪನೆ ಬರುವಂತೆ ಮಾಡಿದ ಬಗ್ಗೆ ಇಲ್ಲಿನ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಯುವತಿಗೆ ಈ ಮೊದಲು ಪರಿಚಿತ ಯುವಕನ ಖಾತೆಯಿಂದ ಟ್ಯಾಗ್‌ ಮಾಡಿ ಪ್ರೀತಿಸುವುದಾಗಿ ಸಂದೇಶ ಕಳಿಸಿದ್ದರು. ಈ ಬಗ್ಗೆ ಪರಿಚಿತ ಯುವಕ ಹ್ಯಾಕ್‌ ಮಾಡಿ ಈ ರೀತಿ ಮಾಡಿದ್ದಾರೆ.

ಹುಬ್ಬಳ್ಳಿ: ಹಣಕಾಸಿನ ವಿಷಯಕ್ಕೆ ಗಲಾಟೆ, ಚಾಕು ಇರಿದು ಯುವಕನ ಕೊಲೆ

ತನಗೇನೂ ಗೊತ್ತಿಲ್ಲ ಎಂದು ಹೇಳಿದ್ದ. ಬಳಿಕ ಯುವತಿ ತನ್ನ ಎಫ್‌ಬಿ ಖಾತೆಯನ್ನು ಡಿಲಿಟ್‌ ಮಾಡಿಸಿದ್ದಳು. ಇದಾದ ಬಳಿಕ ಅಪರಿಚಿತರು ಯುವತಿ ಹೆಸರಲ್ಲಿ ಎರಡು ನಕಲಿ ಖಾತೆ ತೆರೆದು ಆಕೆಯ ಸಂಬಂಧಿಕರಿಗೆ, ಸಹೋದರನಿಗೆ ಕೂಡ ಅಶ್ಲೀಲ ಸಂದೇಶ ಕಳಿಸಿದ್ದಾರೆ ಎಂದು ದೂರಲ್ಲಿ ದಾಖಲಾಗಿದೆ. ಸೈಬರ್‌ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
ಕಾರವಾರ: ಉಂಡ‌ ಮನೆಗೆ ದ್ರೋಹ; ಮನೆ ಕೆಲಸದವನಿಂದಲೇ ಲಕ್ಷಾಂತರ ರೂಪಾಯಿ ಕದ್ದವನ ಬಂಧನ