ಅಕ್ಕ-ತಂಗಿಯರ ಮದುವೆಯಾಗಿದ್ದ ವರನಿಗೆ ಇದೀಗ ಪೊಲೀಸ್ ಆತಿಥ್ಯ!

By Suvarna News  |  First Published May 16, 2021, 8:48 PM IST

* ಒಂದೇ ದಿನದಲ್ಲಿ ಹೀರೊ ಆಗಿದ್ದ ಮದುಮಗ ಇಂದು ಪೋಲೀಸರ ಅತಿಥಿ
* ಚೈಲ್ಡ್ ಮ್ಯಾರೇಜ್ ಆ್ಯಕ್ಟ್ ಪ್ರಕರಣದಲ್ಲಿ ಪೋಲಿಸರ ಅತಿಥಿಯಾದ ಇಬ್ಬರ ಹೆಂಡಿರ  ಗಂಡ
* ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಮದುವೆ ಆಮಂತ್ರಣ ಪತ್ರಿಕೆ ಮತ್ತು ಪೋಟೋ
* ತಂಗಿಗೆ ಇನ್ನು ಹದಿನೆಂಟು ವರ್ಷ ತುಂಬಿಲ್ಲ ಎನ್ನುವುದು ಮೇಲ್ನೋಟಕ್ಕೆ ಸಾಬೀತು


ಕೋಲಾರ(ಮೆ  16)  ಒಂದೇ ದಿನದಲ್ಲಿ ಹೀರೊ ಆಗಿದ್ದ ಮದುಮಗ ಇಂದು ಪೋಲೀಸರ ಅತಿಥಿಯಾಗಬೇಕಾಗಿದೆ.  ಚೈಲ್ಡ್ ಮ್ಯಾರೇಜ್ ಆ್ಯಕ್ಟ್ ಪ್ರಕರಣದಲ್ಲಿ ಅಕ್ಕ-ತಂಗಿಯರನ್ನು ಮದುವೆಯಾಗಿದ್ದ ಯುವಕನ ಬಂಧನವಾಗಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ವೇಗಮಡುಗು ಗ್ರಾಮದ ಮದುವೆ ದೊಡ್ಡ ಸುದ್ದಿಯಾಗಿತ್ತು. ಇಬ್ಬರನ್ನ ಮದುವೆಯಾಗಿರುವ ಪೋಟೋ ಹಾಗೂ ಲಗ್ನ ಪತ್ರಿಕೆ ಸಾಮಾಜಿಕ ಜಾಲಾತಾಣದಲ್ಲಿ ಸಖತ್ ವೈರಲ್ ಆಗಿತ್ತು. ಸುಪ್ರಿಯಾ ಹಾಗೂ ಲಲಿತಾ ಇಬ್ಬರನ್ನೂ ಮಾವ ಉಮಾಪತಿ ಮದುವೆಯಾಗಿದ್ದರು.

Tap to resize

Latest Videos

undefined

ಅಕ್ಕ-ತಂಗಿಯರನ್ನು ಮದುವೆಯಾಗಲು ಇದೆ ಕಾರಣ

ಪೊಟೊ ವೈರಲ್ ಹಾಗ್ತಿದ್ದಂತೆ ಅನುಮಾನಗೊಂಡ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ  ವಧುಗಳ ವಯಸ್ಸನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ. ತಂಗಿ ಲಲಿತಾ 2005 ರಲ್ಲಿ ಹುಟ್ಟಿರುವ ಮಾಹಿತಿ ಸಿಕ್ಕಿದೆ.

ಮುಳಬಾಗಿಲು ತಾಹಸೀಲ್ದಾರ್, ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣಾ ಇಲಖೆ,  ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಗ್ರಾಮಕ್ಕೆ ತೆರಳಿ ಪರಿಶೀಲಸುವಂತೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಸೂಚನೆ ನೀಡಿದ್ದರು. ಪರಿಶೀಲನೆ ವೇಳೆ ಒಂದು ಹುಡುಗಿಗೆ 16 ವರ್ಷ ಎಂಬುದು ದೃಢವಾಗಿದೆ. 

ಉಮಾಪತಿ ಮತ್ತು ಅವರ ತಾಯಿ ತಂದೆ  ಹಾಗೂ ಹುಡುಗಿಯರ ತಾಯಿ ತಂದೆ ಸೇರಿದಂತೆ ,ಮದುವೆ ಮಾಡಿಸಿದ್ದ ಪೂಜಾರಿ ಹಾಗು ಲಗ್ನ ಪತ್ರಿಕೆ ಮುದ್ರಿಸಿದ್ದವರ ಮೇಲೆ ಕ್ರಮಕ್ಕೆ ತೀರ್ಮಾನ ಮಾಡಲಾಗಿದೆ. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 

click me!