ಮಾಸ್ಕ್ ಹಾಕಿಲ್ಲ ಎಂದು ಮಹಿಳೆಯ ಹಿಗ್ಗಾಮುಗ್ಗಾ ಥಳಿಸಿದ್ದವರು ಸಸ್ಪೆಂಡ್

By Suvarna NewsFirst Published May 21, 2021, 11:50 PM IST
Highlights

* ತರಕಾರಿ ಖರೀದಿಗೆ ಹೊರಟ ಮಹಿಳೆ ಮಾಸ್ಕ್ ಹಾಕಿರಲಿಲ್ಲ
* ಮಹಿಳೆಯನ್ನು ಮಧ್ಯ ರಸ್ತೆಯಲ್ಲೇ ಥಳಿಸಿದ ಪೊಲೀಸರು
* ಘಟನೆಗೆ ಸಂಬಂಧಿಸಿ ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತು

ಸಾಗರ್ (ಮೇ 21)  ಮಾಸ್ಕ್ ಧರಿಸದೆ  ರಸ್ತೆಗೆ ಬಂದಿದ್ದ ಮಹಿಳೆಯನ್ನು ಹಿಗ್ಗಾ ಮುಗ್ಗಾ ಥಳಿಸಿದ್ದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ..

ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಮಾಸ್ಕ್ ಧರಿಸದೆ ತರಕಾರಿ ಖರೀದಿಸಲು ಹೊರಟಿದ್ದ ಮಹಿಳೆಯೊಬ್ಬರನ್ನು ಪೊಲೀಸರು ರಸ್ತೆಯಲ್ಲಿಯೇ ಎಳೆದಾಡಿ, ಥಳಿಸಿದ್ದರು.  ಒಬ್ಬರು ಮಹಿಳಾ ಸಿಬ್ಬಂದಿ ಸಹ ಥಳಿಸುವ ಕೆಲಸ ಮಾಡಿದ್ದರು.

ಲಸಿಕೆ ಪಡೆದವರಿಗೆ ಮಾಸ್ಕ್ ಬೇಕಿಲ್ಲ

ರಾಹ್ಲಿ ಪಟ್ಟಣದಲ್ಲಿ ಸೋಮವಾರ ನಡೆದ ಈ ಘಟನೆಯ ವಿಡಿಯೋ ಈಗ ವೈರಲ್  ಆಗಿದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಘಟನೆಗೆ ಸಂಬಂಧಿಸಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ ಜತೆಗೆ ತನಿಖೆಗೆ ಆದೇಶ ನೀಡಿದ್ದೇವೆ ಎಂದು ಸಾಗರ್ ಜಿಲ್ಲೆಯ ಎಎಸ್‌ಪಿ ತಿಳಿಸಿದ್ದಾರೆ.

ಮಹಿಳೆಗೆ ಥಳಿಸುತ್ತಿರುವ ವಿಡಿಯೋ ಹಂಚಿಕೊಂಡಿರುವ ಮಹಿಳಾ ಆಯೋಗ ಇದೊಂದು ಅತ್ಯಂತ ಅಮಾನುಚಷ ಘಟನೆ ಎಂದು ಹೇಳಿದೆ. 

 

 

 

 

 

सागर में मास्क न पहनने के नाम पर पुलिस द्वारा महिला की बर्बर पिटाई बेहद अमानवीय और निंदनीय है। यह आश्चर्यजनक है कि कोविड पीड़ित महिलाओं तक को दुष्कर्म से न बचा पाने वाली प्रदेश पुलिस उल्टे महिलाओं पर ही अपनी 'वीरता' का शर्मनाक प्रदर्शन कर रही है। pic.twitter.com/Q4PhXpbiWI

— Shobha Oza (@Shobha_Oza)
click me!