ತಂಗಿಯೊಂದಿಗಿನ ಜಗಳ ಬಿಡಿಸಲು ಬಂದ ತಂದೆಯನ್ನೇ  ಇರಿದು ಕೊಂದ ಮಗ!

Published : May 21, 2021, 11:29 PM IST
ತಂಗಿಯೊಂದಿಗಿನ ಜಗಳ ಬಿಡಿಸಲು ಬಂದ ತಂದೆಯನ್ನೇ  ಇರಿದು ಕೊಂದ ಮಗ!

ಸಾರಾಂಶ

* ಅಣ್ಣ-ತಂಗಿ ನಡುವಿನ ಜಗಳ ಬಿಡಿಸಲು ಹೋದ ತಂದೆಯೇ ಹತ್ಯೆಯಾದ * ಚಾಕುವಿನಿಂದ ಹೆತ್ತ ಅಪ್ಪನನ್ನೇ ಇರಿದ ಬಾಲಕ * ತರಕಾರಿ ಕತ್ತರಿಸುವ ಚಾಕುವಿನಿಂದ ಹಲ್ಲೆ

ಪುಣೆ  (ಮೇ 21)   ಅಣ್ಣ-ತಂಗಿಯ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋದ ಅಪ್ಪ ಮಗನಿಂದಲೇ ಹತ್ಯೆಯಾಗಿದ್ದಾನೆ. ಜಗಳ ಬಿಡಿಸಲು ಬಂದ ತಂದೆಯನ್ನು  13  ವರ್ಷದ ಮಗ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ತಂದೆ ಸ್ಥಳದಲ್ಲೇ ಸಾವು ಕಂಡಿದ್ದಾರೆ.

ಪುಣೆಯ ಭಾರತೀ ವಿದ್ಯಾಪೀಠ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಆರೋಪಿ ಪುತ್ರನನ್ನು ಬಂಧಿಸಿದ್ದಾರೆ.  ಮೃತ ವ್ಯಕ್ತಿಯ ಕುಟುಂಬ ಅಪಾರ್ಟ್ ಮೆಂಟ್ ನ ಪಾರ್ಕಿಂಗ್ ಲಾಟ್ ನಲ್ಲಿ ವಾಸ ಮಾಡುತ್ತಿತ್ತು. ನಾಲ್ವರು ಮಕ್ಕಳು ಮತ್ತು ಪತ್ನಿಯೊಂದಿಗೆ ವ್ಯಕ್ತಿ ವಾಸ ಮಾಡುತ್ತಿದ್ದ. ತರಕಾರಿ ಕತ್ತರಿಸುತ್ತಾ ಕುಳಿತಿದ್ದ  ವೇಳೆ ಮಕ್ಕಳಲ್ಲಿ ಜಗಳ ಆರಂಭವಾಗಿದೆ. ಇದನ್ನು ಬಿಡಿಸಲು ತಂದೆ ಹೋಗಿದ್ದು ಪುತ್ರ ಏಕಾಏಕಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

ಸ್ವಚ್ಛತಾ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಗಾಯಗೊಂಡಿದ್ದ ತಂದೆಯನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ.   ಜೀವನ ನಿರ್ವಹಣೆಗೆ ಆಧಾರವಾಗಿದ್ದ ವ್ಯಕ್ತಿಯನ್ನೇ ಕುಟುಂಬ ಕಳೆದುಕೊಂಡಿದ್ದು ಪುತ್ರ ಜೈಲು ಸೇರಿದ್ದಾನೆ .

ತಾಯಿ ಮತ್ತು ತನಗೆ ಚಿತ್ರಹಿಂಸೆ ನೀಡುತ್ತಿದ್ದ ತಾಯಿಯ ಗೆಳೆಯನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬಾಲಕ ಹತ್ಯೆ ಮಾಡಿದ್ದ ಪ್ರಕರಣ ಗುಜರಾತ್ ನಿಂದ ವರದಿಯಾಗಿತ್ತು .

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ