ಒಂದು ಲೀಟರ್ ಕೆಮಿಕಲ್ನಿಂದ 500 ಲೀಟರ್ ಹಾಲು ಮಾಡಿ 20 ವರ್ಷಗಳಿಂದ ಅದನ್ನು ಮಾರುತ್ತಿರುವ ಜಾಲವೊಂದು ಪೊಲೀಸರ ಕೈಗೆ ಸಿಕ್ಕಿದೆ. ಅದರ ವಿಡಿಯೋ ವೈರಲ್ ಆಗಿದೆ ನೋಡಿ!
ನಾವು ತಿನ್ನುವ ಪದಾರ್ಥ, ತರಕಾರಿ, ಹಣ್ಣು-ಹಂಪಲು ಕುಡಿಯುವ ಪಾನೀಯಗಳು ಎಲ್ಲವೂ ಇಂದು ವಿಷಮಯವಾಗಿಯೇ ಇರುವುದು ಹೊಸ ವಿಷಯವೇನಲ್ಲ. ದೇಹದ ಸದೃಢತೆಗೆ ದಿನನಿತ್ಯವೂ ಒಂದು ಲೋಟ ಹಾಲನ್ನು ಕುಡಿಯಿರಿ, ಮಕ್ಕಳಿಗೂ ಹಾಲನ್ನು ಕುಡಿಸಿ ಎನ್ನುವ ಮಾತನ್ನು ತಲೆತರಾಂತರಗಳಿಂದಲೂ ಕೇಳುತ್ತಲೇ ಬಂದಿದ್ದೇವೆ. ಆದರೆ ಇಂದು ಸಿಗುತ್ತಿರುವ ಬಹುತೇಕ ಹಾಲುಗಳನ್ನು ಕುಡಿದರೆ ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೆ ಭಯಾನಕ ಸಮಸ್ಯೆಗಳು ಉಂಟಾಗುವುದಾಗಿ ಇದಾಗಲೇ ಹಲವಾರು ವರದಿಗಳು ಹೇಳುತ್ತಿವೆ. ಹೆಣ್ಣುಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಮುಟ್ಟಾಗುವುದಕ್ಕೂ ಇಂದು ಸಿಗುತ್ತಿರುವ ಹಾಲೇ ಕಾರಣ ಎಂದು ಇದಾಗಲೇ ಹಲವು ವೈದ್ಯರು ತಿಳಿಸಿದ್ದಾರೆ. ಕಲಬೆರೆಕೆಯ ಹಾಲುಗಳಿಂದ ಮಾರಣಾಂತಿಕ ಕಾಯಿಲೆಗಳೂ ಬರುತ್ತಿವೆ.
ಇವೆಲ್ಲವುಗಳ ನಡುವೆಯೇ ಶಾಕಿಂಗ್ ಎನ್ನುವ ವಿಡಿಯೋ ಒಂದು ವೈರಲ್ ಆಗಿದೆ. ಇದರಲ್ಲಿ ಉದ್ಯಮಿಯೊಬ್ಬ ಒಂದು ಲೀಟರ್ ರಾಸಾಯನಿಕರಿಂದ 500 ಲೀಟರ್ ಹಾಲನ್ನು ತಯಾರಿಸುತ್ತಿದ್ದಾನೆ. ಕಳೆದ 20 ವರ್ಷಗಳಿಂದ ಇದೇ ವಿಷವನ್ನು ಅವನು ಸರಬರಾಜು ಮಾಡುತ್ತಿರುವುದಾಗಿ ಇದೀಗ ಬಯಲುಗೊಂಡಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಕೆಲವು ಜನರು ಈ ಬಗ್ಗೆ ಡಿಸ್ಕಸ್ ಮಾಡುವುದನ್ನು ಕೂಡ ನೋಡಬಹುದಾಗಿದೆ. ಉತ್ತರ ಪ್ರದೇಶದ ಬುಲಂದರ್ಶೆಹರ್ನ ಉದ್ಯಮಿ ಈತ ಎಂದು ಕ್ಯಾಪ್ಷನ್ನಲ್ಲಿ ಹೇಳಲಾಗಿದೆ. ಸದ್ಯ ಈ ಗ್ಯಾಂಗ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಕಳೆದ ಇಪ್ಪತ್ತು ವರ್ಷಗಳಿಂದ ಈತನ ಈ ವಿಷಪೂರಿತ ದ್ರವ್ಯ ಕುಡಿದವರ ಗತಿಯೇನು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
undefined
ಮುಟ್ಟು ನಿಲ್ಲುವ ಮೊದಲೇ ಗರ್ಭಿಣಿ ಹೌದೋ, ಅಲ್ವೋ ತಿಳಿದುಕೊಳ್ಳೋ 9 ಲಕ್ಷಣಗಳಿವು: ವೈದ್ಯೆಯಿಂದ ಮಾಹಿತಿ
ಇಂಥದ್ದೇ ಹಲವಾರು ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ದಿನನಿತ್ಯ ಅಡುಗೆಗೆ ಅತ್ಯಗತ್ಯವಾಗಿ ಬೇಕಾಗಿರುವ ಎಣ್ಣೆ, ತುಪ್ಪ, ಬೆಣ್ಣೆಗಳಷ್ಟು ಕಲಬೆರಿಕೆ ಇನ್ನಾವುದಕ್ಕೂ ಆಗುವುದಿಲ್ಲ ಎನ್ನಬಹುದೇನೋ. ಇದೇ ಪದಾರ್ಥಗಳನ್ನು ತಿನ್ನುವುದರಿಂದಲೇ ಇಂದು ಕ್ಯಾನ್ಸರ್ ಎನ್ನುವ ಮಹಾಮಾರಿ ಹಲವರ ಬದುಕನ್ನು ಕಸಿದುಕೊಳ್ಳುತ್ತಿದೆ. ದೊಡ್ಡ ದೊಡ್ಡ ಬ್ರ್ಯಾಂಡ್ಗಳಲ್ಲಿ ಮಾರಾಟವಾಗುವ, ದೊಡ್ಡ ದೊಡ್ಡ ಚಿತ್ರತಾರೆಯರನ್ನು ಈ ಬ್ರ್ಯಾಂಡ್ಗಳಿಗೆ ರಾಯಭಾರಿಯನ್ನಾಗಿಸುವ ಕಂಪೆನಿಗಳು ಅಸಲಿ, ಪರಿಶುದ್ಧ ಹಾಗೆ ಹೀಗೆ ಎನ್ನುವ ಡೈಲಾಗ್ಗಳನ್ನು ಅವರ ಬಾಯಲ್ಲಿ ತರಿಸಿ ವಿಷವನ್ನು ಕೊಡುತ್ತಿರುವುದು ಮಾತ್ರ ಬಹುತೇಕರಿಗೆ ತಿಳಿಯುವುದೇ ಇಲ್ಲ. ಆದರೆ ಎಣ್ಣೆ, ತುಪ್ಪ ಇವೆಲ್ಲವೂ ಅನಿವಾರ್ಯ ಆಗಿರುವ ಕಾರಣ ಹಾಗೂ ನಟ-ನಟಿಯರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದರಿಂದ ಅದರ ಮೊರೆ ಹೋಗುವುದು ಮಾಮೂಲಾಗಿದೆ.
ಆದರೆ ಇದೀಗ ಈ ವೈರಲ್ ವಿಡಿಯೋದಲ್ಲಿ ನಕಲಿ ಹಾಲಿನ ಬಗ್ಗೆ ತೋರಿಸಿರುವುದು ಮಾತ್ರ ಆಘಾತಕಾರಿ ಸಂಗತಿಯಾಗಿದೆ. ಕಡಿಮೆ ದರದಲ್ಲಿ ಸುಲಭದಲ್ಲಿ ಸಿಗುತ್ತದೆ ಎಂದು ಇಂಥ ವಿಷಗಳನ್ನು ಸೇವಿಸುವ ಮುನ್ನ ಸ್ವಲ್ಪನಾದರೂ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಅಗತ್ಯವಿದೆ ಎನ್ನುವುದು ತಜ್ಞರ ಮಾತು.