Bengaluru: ಪೊಲೀಸರ ಕಿರುಕುಳ ಆರೋಪ: ಲೈವ್ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ ಯತ್ನ

By Govindaraj S  |  First Published Feb 11, 2023, 12:41 AM IST

ಯುವಕನೊಬ್ಬನಿಗೆ ಅಪ್ರಾಪ್ತ ಹುಡುಗಿಯ ಜೊತೆ ಪ್ರೇಮಾಂಕುರವಾಗಿತ್ತು. ಈ ವಿಷಯ ಯುವತಿಯ ಪೋಷಕರಿಗೆ ತಿಳಿದು ಪೊಲೀಸರಿಗೆ ವಿಚಾರ ಮುಟ್ಟಿಸಿದ್ರು. ಪೊಲೀಸರು ಯುವಕನಿಗೆ ಪೋನ್ ಮಾಡಿ ಠಾಣೆಗೆ ಬರುವಂತೆ ತಿಳಿಸುತ್ತಿದ್ದಂತೆ ಆತ್ಮಹತ್ಯೆಗೆ ಯತ್ನಿಸಿದ ಯುವಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. 


ವರದಿ: ಟಿ.ಮಂಜುನಾಥ, ಹೆಬ್ಬಗೋಡಿ

ಆನೇಕಲ್ (ಫೆ.11): ಯುವಕನೊಬ್ಬನಿಗೆ ಅಪ್ರಾಪ್ತ ಹುಡುಗಿಯ ಜೊತೆ ಪ್ರೇಮಾಂಕುರವಾಗಿತ್ತು. ಈ ವಿಷಯ ಯುವತಿಯ ಪೋಷಕರಿಗೆ ತಿಳಿದು ಪೊಲೀಸರಿಗೆ ವಿಚಾರ ಮುಟ್ಟಿಸಿದ್ರು. ಪೊಲೀಸರು ಯುವಕನಿಗೆ ಪೋನ್ ಮಾಡಿ ಠಾಣೆಗೆ ಬರುವಂತೆ ತಿಳಿಸುತ್ತಿದ್ದಂತೆ ಆತ್ಮಹತ್ಯೆಗೆ ಯತ್ನಿಸಿದ ಯುವಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಕೈಯಲ್ಲಿ ವಿಷ ಹಿಡಿದು ನನಗೆ ಪೊಲೀಸರಿಂದ ಹಾಗೂ ಪ್ರೀತಿಸಿದ ಯುವತಿಯ ಪೋಷಕರಿಂದ ಕಿರುಕುಳ ಕಾರಣ ಎಂದು ಹೇಳಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಈತನ ಹೆಸರು ಸುರೇಶ್.

Tap to resize

Latest Videos

ಆನೇಕಲ್ ತಾಲ್ಲೂಕಿನ ಸರ್ಜಾಪುರ ಸಮೀಪದ ಮುಗಳೂರಿನ ಭೋವಿಪಾಳ್ಯ ನಿವಾಸಿಯಾಗಿರುವ ಸುರೇಶ್ ಪೊಲೀಸರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ವಿಡಿಯೋವನ್ನ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ವೃತ್ತಿಯಲ್ಲಿ ಡ್ರೈವರ್ ಹಾಗೂ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುವ ಸುರೇಶ್ ಇತ್ತೀಚೆಗಷ್ಟೇ ಸರ್ಜಾಪುರದಲ್ಲಿ ಬಾಡಿಗೆ ಮನೆ ಪಡೆದು ಕುಟುಂಬ ಸಮೇತ ವಾಸವಿದ್ದ. ಈಗಿರುವಾಗ ಕಾಡುಗೋಡಿ ಸಮೀಪದ ಸೀಗೆಹಳ್ಳಿಯ ಜೋಗಿ ಕಾಲೋನಿಯ ಯುವತಿಯನ್ನ ಪ್ರೀತಿಸುತ್ತಿದ್ದ ಈ ಪ್ರೀತಿಯ ವಿಚಾರ ಯುವತಿಯ ತಂದೆ ತಾಯಿಗೆ ತಿಳಿದು ಕಾಡುಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ. 

ನ್ಯಾಯ ಸಮ್ಮತ ಚುನಾವಣೆಗೆ ಅಧಿಕಾರಿಗಳು ಕಾರ್ಯ ತತ್ಪರರಾಗಿ: ಡಿಸಿ ಯಶವಂತ ಗುರುಕರ್

ಕಳೆದ ಒಂದು ವಾರದಿಂದ ಪೊಲೀಸರು ಪೋನ್ ಮಾಡಿ ಠಾಣೆಗೆ ಬರುವಂತೆ ಹೇಳಿದ್ದಾರೆ. ಇದರಿಂದಾಗಿ ಹೆದರಿದ ಸುರೇಶ್ ಸರ್ಜಾಪುರದ ಮನೆಯ ಸಮೀಪ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಸಿದ್ದು ಪೊಲೀಸರು ಪೋನ್ ಮಾಡಿ ಠಾಣೆಗೆ ಬರಬೇಕು ಇಲ್ಲವಾದಲ್ಲಿ ನಿನ್ನ ಮೇಲೆ ರೇಪ್ ಕೇಸ್ ಸೇರಿದಂತೆ ಇನ್ನಿತರ ಕೇಸ್ ಹಾಕೋದಾಗಿ ಬೆದರಿಕೆ ಹಾಕುತ್ತೇನೆ ಎಂದು ಹೇಳುತ್ತಿದ್ದಾರೆ. ನನ್ನ ಸಾವಿಗೆ ಕಾಡುಗೋಡಿ ಪೊಲೀಸರು ಹಾಗೂ ಯುವತಿ ತಂದೆ ತಾಯಿ ಮತ್ತು ಇನ್ನೋರ್ವ ಯುವತಿಯೇ ಕಾರಣ ಎಂದು ವಿಡಿಯೋ ಮಾಡಿ ಇನ್ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. 

ಇಲಿ ಪಾಷಾಣ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಲ್ಲದೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದುಕೊಂಡು, ಕೈಕೊಯ್ದುಕೊಂಡು ಅಸ್ವಸ್ಥಗೊಂಡು ಬಿದ್ದಿದ್ದ ಸುರೇಶ್ ನನ್ನು ಕೂಡಲೇ ಸರ್ಜಾಪುರದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆತ್ಮಹತ್ಯೆಗೆ ಯತ್ನಿಸಿರುವ ಸುರೇಶ್ ಹದಿನಾರು ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದು, ಯುವತಿಯ ತಂದೆಯ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಈತ, ಕೆಲಸ ಮಾಡುತ್ತಿದ್ದ ಮಾಲೀಕರ ಮಗಳನ್ನು ಪರಿಚಯ ಮಾಡಿಕೊಂಡಿದ್ದ ಇತ್ತೀಚಿಗೆ ವಿಚಾರ ತಂದೆಗೆ ಗೊತ್ತಾಗಿದ್ದು ಮಗಳ ಚಿಕ್ಕ ವಯಸ್ಸಿನ ಬಗ್ಗೆ ತಿಳಿಸಿ ಸುರೇಶ್‌ಗೆ ಬೈದು ಬುದ್ದಿವಾದ ಹೇಳಿದ್ದರು. ಆದರು ಸುರೇಶ್ ಮಗಳಿಗೆ ಫೋನ್ ಮಾಡುವುದನ್ನು ಮುಂದುವರಿಸಿದ್ದ. 

4 ವರ್ಷ ಕಳೆದರೂ ಸಿಗದ ನೆರೆ ಪರಿಹಾರ: ತಾಲೂಕು ಕಚೇರಿಯಲ್ಲಿ ವಿಷ ಕುಡಿಯಲು ಮುಂದಾದ ನೆರೆ ನಿರಾಶ್ರಿತರು

ಹೀಗಾಗಿ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಸುರೇಶ್ ವಿರುದ್ಧ ಮಗಳಿಗೆ ತೊಂದರೆ ಕೊಡುತ್ತಿರುವ ಬಗ್ಗೆ ಪೋಷಕರು ದೂರು ನೀಡಿದ್ದರು. ಕಾಡುಗೋಡಿ ಪೊಲೀಸರು ವಿಚಾರಣೆ ನಡೆಸಲು ಠಾಣೆಗೆ ಬರುವಂತೆ ಪೋನ್ ಮಾಡಿ ಕರೆದಿದ್ದರು ಅಷ್ಟರಲ್ಲಿ ಸುರೇಶ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನುವ ಮಾಹಿತಿ ಗೊತ್ತಾಗಿದ್ದು ಸರ್ಜಾಪುರ ಪೊಲೀಸರು ಯಾವ ರೀತಿ ದೂರು ದಾಖಲಿಸಿಕೊಳ್ಳುತ್ತಾರೆ ಎನ್ನುವುದನ್ನು ಆಧರಿಸಿ ಮುಂದಿನ ತನಿಖೆ ಮುಂದುವರೆಸುವುದಾಗಿ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಗಿರೀಶ್ ತಿಳಿಸಿದ್ದಾರೆ. ಒಟ್ಟಿನಲ್ಲಿ 16 ವರ್ಷದ ಯುವತಿಯ ಜೊತೆ ಪ್ರೀತಿಯಲ್ಲಿ ಬಿದ್ದು, ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದು ಮುಂದಿನ ದಿನಗಳಲ್ಲಿ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತೆ ಎಂದು ಕಾದು ನೋಡಬೇಕಿದೆ.

click me!