ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಪೊಲೀಸ್ ಫೈರಿಂಗ್: ರೌಡಿಶೀಟರ್ ಒಲಂಗ ಬಂಧನ

By Girish Goudar  |  First Published Dec 28, 2023, 9:38 AM IST

ಪೊಲೀಸರು ನಡೆಸಿದ ಫೈರಿಂಗ್‌ನಲ್ಲಿ ರೌಡಿಶೀಟರ್ ಒಲಂಗ ಅಲಿಯಾಸ್ ಮಂಜುನಾಥ ಕಾಲಿಗೆ ಗುಂಡು ತಗುಲಿದೆ. ಮೊನ್ನೆ ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಶಶಿಕುಮಾರ್ ಎಂಬಾತನ ಮೇಲೆ ರೌಡಿಶೀಟರ್ ಒಲಂಗ ಮತ್ತು ಗ್ಯಾಂಗ್ ಮಾರಣಾಂತಿಕ ಹಲ್ಲೆ ಮಾಡಿತ್ತು. 

ಶಿವಮೊಗ್ಗ(ಡಿ.28): ನಗರದಲ್ಲಿ ಇಂದು(ಗುರುವಾರ) ಬೆಳ್ಳಂಬೆಳಗ್ಗೆ ರೌಡಿಶೀಟರ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ರೌಡಿಶೀಟರ್ ಒಲಂಗ ಮೇಲೆ ಶಿವಮೊಗ್ಗದ ಜಯನಗರ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಶಿವಮೊಗ್ಗ ತಾಲೂಕಿನ ತ್ಯಾಜ್ಯವಳ್ಳಿ ಬಳಿ ಫೈರಿಂಗ್ ನಡೆದಿದೆ. 

ಪೊಲೀಸರು ನಡೆಸಿದ ಫೈರಿಂಗ್‌ನಲ್ಲಿ ರೌಡಿಶೀಟರ್ ಒಲಂಗ ಅಲಿಯಾಸ್ ಮಂಜುನಾಥ ಕಾಲಿಗೆ ಗುಂಡು ತಗುಲಿದೆ. ಮೊನ್ನೆ ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಶಶಿಕುಮಾರ್ ಎಂಬಾತನ ಮೇಲೆ ರೌಡಿಶೀಟರ್ ಒಲಂಗ ಮತ್ತು ಗ್ಯಾಂಗ್ ಮಾರಣಾಂತಿಕ ಹಲ್ಲೆ ಮಾಡಿತ್ತು. 

Tap to resize

Latest Videos

Chikkamagaluru: ಕೋರ್ಟಿಗೆ ಹಾಜರಾಗದ ರೌಡಿ ಶೀಟರ್‌ ಪೂರ್ಣೇಶ್‌ಗೆ ಪೊಲೀಸ್ ಗುಂಡೇಟು!

ಆರೋಪಿ ಒಲಂಗನನ್ನು ವಶಕ್ಕೆ ಪಡೆದು ತ್ಯಾಜ್ಯವಳ್ಳಿ ಗ್ರಾಮದ ಬಳಿ ಬಿಸಾಕಿದ್ದ ಆಯುಧ ಮಹಜರು ಮಾಡಲು ಹೋದ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಓಡಿದ ಒಲಂಗನನ್ನು ಹಿಡಿಯಲು ಮುಂದಾದಾಗ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದನು. ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರೂ ಜಗ್ಗದಿದ್ದರಿಂದ ಜಯನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಿದ್ದೇಗೌಡ ಅವರು ಕೊನೆಗೆ ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಆರೋಪಿಗೆ ಚಿಕಿತ್ಸೆ ನೀಡಲಾಗುತ್ತಿದೆ. 

click me!