ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಗುಂಡಿನ ದಾಳಿ| ಕಲಬುರಗಿ ನಗರದ ಹೊರವಲಯದ ತಾಜ ಸುಲ್ತಾನಪೂರ ಬಳಿ ನಡೆದ ಘಟನೆ| ಯುಪಿ ಮೂಲದ ಯುವಕನ ಕೊಲೆ ಮಾಡಿ ದರೋಡೆ ಮಾಡಿದ್ದ ಪ್ರಕರಣದ ಆರೋಪಿ ಮೋದಿನ್ ಮೇಲೆ ಫೈರಿಂಗ್|
ಬೆಂಗಳೂರು(ಅ.07): ಇಂದು(ಬುಧವಾರ) ಬೆಳಂಬೆಳಗ್ಗೆ ನಗರದಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಹೌದು, ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ನಡೆಸಿದ ಘಟನೆ ನಗರದ ಹೊರವಲಯದ ತಾಜ ಸುಲ್ತಾನಪೂರ ಬಳಿ ನಡೆದ ನಡೆದಿದೆ.
ಕಳೆದ ಆಗಸ್ಟ್ 25ರಂದು ಕಲಬುರಗಿಯಲ್ಲಿ ಯುಪಿ ಮೂಲದ ಯುವಕನ ಕೊಲೆ ಪ್ರಕರಣದ ಆರೋಪಿಯಾಗಿದ್ದ ಮೋದಿನ್‌ನನ್ನ ಬಂಧಿಸುವ ವೇಳೆ ಫೈರಿಂಗ್ ನಡೆದಿದೆ. ಮೋದಿನ್‌ನನ್ನ ಬಂಧಿಸಿ ಚಾಕು ಜಪ್ತಿಗೆ ತೆರಳಿದ್ದ ವೇಳೆ ಪೋಲಿಸರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಓಡಿ ಹೋಗಲು ಯತ್ನಿಸಿದ್ದಾನೆ. ಹೀಗಾಗಿ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಮೋದಿನ್ ಕಾಲಿಗೆ ಗುಂಡು ಹೊಡೆದಿದ್ದಾರೆ. ಮೋದಿನ್ ಕಾಲಿಗೆ ತಗುಲಿದ ಎರಡು ಗುಂಡು ತಗುಲಿವೆ.
ಕಲಬುರಗಿ ತಾಂಡಾ ಕಾಮುಕರು... ಗಂಡ-ಹೆಂಡತಿ ಕೊಲೆ ನೋಡಿದ ಮಗು ಮಾಡಿದ್ದೇನು?
ಘಟನೆಯಲ್ಲಿ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯ ಇಬ್ಬರು ಪೇದೆಗಳು ಗಾಯಗೊಂಡಿದ್ದಾರೆ.ಗಾಯಾಳು ಪೊಲೀಸರು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪೋಲಿಸರ ಗುಂಡೇಟಿನಿಂದ ಗಾಯಗೊಂಡ ಆರೋಪಿ ಮೋದಿನ್‌ನ್ನ ಸರ್ಕಾರಿ ಆಸ್ಪತ್ರೆಲ್ಲಿ ದಾಖಲಿಸಲಾಗಿದೆ.