ಮಂಗಳೂರು ಬ್ಯಾಂಕ್ ದರೋಡೆ ಟೀಂ ಕಿಂಗ್‌ಪಿನ್‌ಗೆ ಪೊಲೀಸ್ ಗುಂಡೇಟು

Published : Jan 22, 2025, 12:19 PM IST
ಮಂಗಳೂರು ಬ್ಯಾಂಕ್ ದರೋಡೆ ಟೀಂ ಕಿಂಗ್‌ಪಿನ್‌ಗೆ ಪೊಲೀಸ್ ಗುಂಡೇಟು

ಸಾರಾಂಶ

ಉಳ್ಳಾಲ ಇನ್‌ಸ್ಪೆಕ್ಟರ್ ಬಾಲಕೃಷ್ಣ ಅವರು ತಂಡದ ಜೊತೆ ಆರೋಪಿ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸುತ್ತಿದ್ದರು. ಪರಾರಿ ಉದ್ದೇಶದಿಂದ ಕಣ್ಣನ್ ಮಣಿ, ಅಲ್ಲಿ ಬಿದ್ದಿದ್ದ ಬಿಯರ್ ಬಾಟಲಿ ಒಡೆದು ಪೊಲೀಸರಾದ ಆಂಜನಪ್ಪ ಮತ್ತು ನಿತಿನ್ ಮೇಲೆ ಹಲ್ಲೆ ನಡೆಸಿದ್ದಾನೆ. ತಡೆಯಲು ಬಂದ ತನಿಖಾ ಧಿಕಾರಿ ಉಳ್ಳಾಲ ಇನ್‌ಸ್ಪೆಕ್ಟ‌ರ್ ಬಾಲಕೃಷ್ಣರಿಗೂ ಇರಿಯಲು ಯತ್ನಿಸಿದ್ದಾನೆ. ಹಲ್ಲೆ ಮುಂದುವರಿಸಿದಾಗ ಸಿಸಿಬಿ ಇನ್‌ಸ್ಪೆಕರ್ ರಫೀಕ್ ಕಾಲಿಗೆ ಗುಂಡು ಹಾರಿಸಿದ್ದಾರೆ. 

ಮಂಗಳೂರು(ಜ.22):  ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಳ್ಳ ನಡೆಸಿ ಪರಾರಿಗೆ ಯತ್ನಿಸಿದ ಮಂಗಳೂರಿನ ಕೋಟೆಕಾರ್‌ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ ಆರೋಪಿ ಕಣ್ಣನ್ ಮಣಿ (36) ಎಂಬಾತನ ಮೇಲೆ ಮಂಗಳೂರು ಸಿಸಿಬಿ ಪೊಲೀಸರು ಮಂಗಳವಾರ ಸಂಜೆ ಗುಂಡಿನ ದಾಳಿ ನಡೆಸಿದ್ದಾರೆ. 

ಈ ವೇಳೆ ಕಣ್ಣನ್ ಮಣಿ ಕಾಲಿಗೆ ಗುಂಡೇಟು ತಗಲಿದೆ. ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಕರ್ನಾಟಕ - ಕೇರಳ ಗಡಿಯ ತಲಪಾಡಿ ಗ್ರಾಮದ ಅಲಂಕಾರು ಗುಡ್ಡೆ ಬಳಿ ಸಂಜೆ 4.20 ಸುಮಾರಿಗೆ ಈ ಘಟನೆ ನಡೆದಿದೆ. 

ಮಂಗಳೂರು ಬ್ಯಾಂಕ್‌ ಲೂಟಿ ಮಾಡಿದ್ದು ಧಾರಾವಿ ಗ್ಯಾಂಗ್‌!

ಏನಾಯ್ತು?: 

ಉಳ್ಳಾಲ ಇನ್‌ಸ್ಪೆಕ್ಟರ್ ಬಾಲಕೃಷ್ಣ ಅವರು ತಂಡದ ಜೊತೆ ಆರೋಪಿ ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸುತ್ತಿದ್ದರು. ಪರಾರಿ ಉದ್ದೇಶದಿಂದ ಕಣ್ಣನ್ ಮಣಿ, ಅಲ್ಲಿ ಬಿದ್ದಿದ್ದ ಬಿಯರ್ ಬಾಟಲಿ ಒಡೆದು ಪೊಲೀಸರಾದ ಆಂಜನಪ್ಪ ಮತ್ತು ನಿತಿನ್ ಮೇಲೆ ಹಲ್ಲೆ ನಡೆಸಿದ್ದಾನೆ. ತಡೆಯಲು ಬಂದ ತನಿಖಾ ಧಿಕಾರಿ ಉಳ್ಳಾಲ ಇನ್‌ಸ್ಪೆಕ್ಟ‌ರ್ ಬಾಲಕೃಷ್ಣರಿಗೂ ಇರಿಯಲು ಯತ್ನಿಸಿದ್ದಾನೆ. ಹಲ್ಲೆ ಮುಂದುವರಿಸಿದಾಗ ಸಿಸಿಬಿ ಇನ್‌ಸ್ಪೆಕರ್ ರಫೀಕ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಆತನನ್ನು ಆಸತ್ರೆಗೆ ದಾಖಲಿಸಲಾಗಿದೆ. 

ಉಳ್ಳಾಲ ಇನ್ ಸೆಕ್ಟರ್ ಬಾಲಕೃಷ್ಣ, ಸಿಸಿಬಿ ಕಾನ್‌ಸ್ಟೇಬಲ್ ಆಂಜನಪ್ಪ, ಉಳ್ಳಾಲ ಠಾಣೆ ಕಾನ್‌ಸ್ಟೇಬಲ್ ನಿತಿನ್ ಗಾಯಗೊಂಡಿದ್ದು, ದೇರಳಕಟ್ಟೆಯನ ಪೋಯಾ ಆಸ್ಪತ್ರೆಗೆ ದಾಲಿಸಲಾಗಿದೆ. 

ಧಾರಾವಿ ಗ್ಯಾಂಗ್: 

ಕಣ್ಣನ್ ಮಣಿ ತಮಿಳು ನಾಡಿನವನಾದರೂ ಮುಂಬೈನ ಚೆಂಬೂರು ಪ್ರದೇಶದಲ್ಲಿ ನೆಲೆಸಿದ್ದಾನೆ. ಧಾರಾವಿ ಗ್ಯಾಂಗ್ ನಲ್ಲಿ ಪ್ರಮುಖವಾಗಿಗುರುತಿಸಿಕೊಂಡಿದ್ದಾನೆ.

ಕೃತ್ಯದ ಸುಳಿವು ನೀಡಿದ್ದು ದರೋಡೆಕೋರರ ಆಪ್ತರು

ಮಂಗಳೂರು: ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ ಸಂಬಂಧ ದರೋ ಡೆಕೋರರ ತಂಡದಲ್ಲೇ ಉಂಟಾದ ಒಡಕು ಪೊಲೀಸರಿಗೆವರವಾಗಿ ಪರಿಣಮಿಸಿದೆ. ಇದನ್ನೇ ಬಳಸಿಕೊಂಡು ಅಸಮಾಧಾನಿತರಿಂದ ಮಾಹಿತಿ ಕಲೆ ಹಾಕಿ ನಾಲ್ವೇ ದಿನದಲ್ಲಿ ಪ್ರಕರಣ ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸಿ ಮಂಗಳೂರು ಪೊಲೀಸರು ಚಾಣಾಕ್ಷತನ ಮೆರೆದಿದ್ದಾರೆ. ದರೋಡೆಕೋರರ ತಂಡದಿಂದ ಹೊರ ದಬ್ಬಲ್ಪಟ್ಟ ಅಸಮಾಧಾನಿತರು ನೀಡಿದ ಮಾಹಿತಿ ಯಿಂದಾಗಿಯೇ ಆರೋಪಿಗಳನ್ನು ಬಂಧಿಸಲು ಸಾಧ್ಯವಾಯಿತು ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ.

ತಂಡದ ಕೆಲ ಸದಸ್ಯರಿಗೆ ಮಂಗಳೂರಿನ ಬ್ಯಾಂಕ್ ದರೋಡೆ ಮಾಹಿತಿ ಇರಲಿಲ್ಲ, ಆದರೆ ಎಲ್ಲೋ ದೊಡ್ಡದರೋ ಡೆ ನಡೆಸಲು ಸಂಚು ರೂಪಿಸಿರುವ ಮಾಹಿತಿ ಇತ್ತು. ಸುಳಿವು ಮುಂಬೈ ಗುಪ್ತಚರ ಪೊಲೀ ಸರಿಗೆ ಸಿಕ್ಕಿತ್ತು. ಮುಂಬೈನಲ್ಲೇ ದೊಡ್ಡ ಮಟ್ಟದ ದರೋಡೆ ನಡೆಸುವ ಸಾಧ್ಯತೆ ಹಿನ್ನೆಲೆ ಪೊಲೀ ಸರು ಹದ್ದಿನ ಕಣ್ಣು ಇರಿಸಿದ್ದರೆನ್ನಲಾಗಿದೆ. ಕೋಟೆಕಾರು ಬ್ಯಾಂಕ್ ದರೋಡೆ ದೊಡ್ಡ ಸುದ್ದಿಯಾದ ಬಳಿಕ ಮಂಗಳೂರು ಪೊಲೀಸರು ಮುಂಬೈ ಪೊಲೀಸರನ್ನು ಸಂಪರ್ಕಿಸಿದ್ದರು. ದರೋಡೆ ಹಿಂದಿನ ಕೈವಾಡ ಮುಂಬೈ ತಂಡ ದ್ದು ಎಂಬುದು ಖಚಿತವಾಗಿದೆ. ಮುಂಬೈ ಪೊಲೀಸರ ನೆರವಿನಲ್ಲಿ ಅಸಮಾಧಾನಿತರಿಂದ ಆರೋಪಿಗಳ ಸುಳಿವು ಪಡೆದು ತಮಿಳುನಾಡು ಪೊಲೀಸರ ಸಹಕಾರದೊಂದಿಗೆ ಮಧುರೈನಲ್ಲಿ ಬಂಧಿಸಲು ಸಾಧ್ಯವಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಭಾರೀ ಖತರ್ನಾಕ್‌ ದರೋಡೆ ಗ್ಯಾಂಗ್ 

ಕೋಟೆಕಾರು ಬ್ಯಾಂಕ್ ದರೋಡೆಗೆ ಸಂಬಂ ಧಿಸಿ ಮುಂಬೈ ಮೂಲದ ಮುರುಗಂಡಿ ತಿವಾರ್(34), ಯೋಶುವಾ ರಾಜೇಂದ್ರನ್ (35) ಮತ್ತು ಕಣ್ಣನ್ ಮಣಿ(36) ಆರೋಪಿ ಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಳಿದ ಆರೋಪಿಗಳ ಪತ್ತೆಗೆ ಜಾಲ ಬೀಸಲಾ ಗಿದೆ. ಮುಂಬೈ ಮತ್ತು ತಮಿಳುನಾಡಿನಲ್ಲಿ ಧಾರಾವಿಯ ಮೋಸ್ಟ್ ಡೇಂಜರಸ್ ದರೋಡೆ ಗ್ಯಾಂಗ್ ಸಕ್ರಿಯವಾಗಿದೆ. 

ಹೆಚ್ಚುತ್ತಿರುವ ದರೋಡೆ, ಸುಲಿಗೆ:ಕ್ಷಿಪ್ರ ಕಾರ್ಯಾಚರಣೆಯಲ್ಲೂ ಪೊಲೀಸ್‌ ವೈಫಲ್ಯ!

ಈ ಹಿಂದೆಯೂ ಹಲವಾರು ದರೋಡೆ ನಡೆಸಿ ಪಳಗಿರುವ ಗ್ಯಾಂಗ್ ಇದಾಗಿದೆ. ಕೋಟೆ ಕಾರ್ ದರೋಡೆ ಕೃತ್ಯದ ಮುಖ್ಯ ಕಿಂಗ್ ಪಿನ್ ಮುರುಗಂಡಿ ಆಗಿದ್ದು, ಈತನೇ ದರೋಡೆಯ ಪ್ಲಾನ್ ಸಿದ್ದಪಡಿಸಿದ್ದ. ತಿಂಗಳಿನಿಂದ ಮಾಹಿತಿ ಕಲೆ ಹಾಕಿ ಪಕ್ಕಾ ಯೋಜನೆ ರೂಪಿಸಿದ್ದ ಎಂದು ಗೊತ್ತಾಗಿದೆ. ದರೋಡೆಕೋರರು ಕದ್ದ ಗೋಣಿ ಚೀಲ ದಲ್ಲಿದ್ದ ಚಿನ್ನದ ಸಹಿತ 700 ಕಿ.ಮೀ. ಕಾರಿ ನಲ್ಲೇ ಪ್ರಯಾಣಿಸಿದ್ದರು. ಮಧುರೈ ನಂತರ ತಿರುನಲ್ವೇಲಿಗೆ ಫಿಯೇಟ್ ಕಾರಿ ನಲ್ಲಿ ಪ್ರಯಾಣ ಮಾಡಿದ್ದರು.ತಮಿಳು ನಾಡು ತಲುಪಿದ ಬಳಿಕ ಅಜ್ಞಾತ ಸ್ಥಳದಲ್ಲಿ ಕಾರು ಬಿಟ್ಟು ಚಿನ್ನ ಬಚ್ಚಿಟ್ಟು ಹೋಗಿದ್ದರು. 

ಈ ಬಗ್ಗೆ ರಾಜ್ಯ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಆರೋಪಿಗಳ ಜಾಡು ಹಿಡಿದು ಹೊರಟ ಮಂಗಳೂರು ಪೊಲೀ ಸರಿಗೆ ತಮಿಳುನಾಡಿನಲ್ಲಿ ಕಾರು ಪತ್ತೆ ಯಾಗಿದೆ. ಬಳಿಕ ತಮಿಳುನಾಡಿನಲ್ಲಿ ಜಾಲಾಡಿದ ಮಂಗಳೂರು ಪೊಲೀಸರಿಗೆ ಮೂವರು ಆಗಂತುಕರ ಜಾಡು ಪತ್ತೆ ಯಾಯಿತು. ಮಧುರೈ ಬಳಿ ಬಂಧಿಸ ಲಾಯಿತು ಎಂದು ಮೂಲಗಳು ತಿಳಿಸಿವೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ