ನಕಲಿ 'ಮಹಿಳೆ' ಮೊಬೈಲ್‌ ನಲ್ಲಿ ನೂರಾರು ಯುವತಿಯರ ನ್ಯೂಡ್ ಪೋಟೊಗಳು!

Published : Sep 22, 2020, 11:19 PM ISTUpdated : Sep 22, 2020, 11:31 PM IST
ನಕಲಿ 'ಮಹಿಳೆ' ಮೊಬೈಲ್‌ ನಲ್ಲಿ ನೂರಾರು ಯುವತಿಯರ ನ್ಯೂಡ್ ಪೋಟೊಗಳು!

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿ ಮಹಿಳೆ ಹೆಸರಲ್ಲಿ ಖಾತೆ ತೆಗೆದು ಯುವತಿಯರ ಬೆತ್ತಲೆ ಪೋಟೋ ಪಡೆಯುತ್ತಿದ್ದ/ ಆರೋಪಿಯನ್ನು ಬಂಧಿಸಿ ಕರೆತಂದ ದೆಹಲಿ ಪೊಲೀಸರು/ ನಟನೆ ಮಾಡಲು ಅವಕಾಶ ಕೊಡಿಸುತ್ತೇನೆ ಎಂದು ಗಾಳ ಹಾಕುತ್ತಿದ್ದ

ನವದೆಹಲಿ(ಸೆ. 22) ಈತ ಅಂತಿಂಥ ಚಾಲಾಕಿ ಆಸಾಮಿ ಅಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹೆಣ್ಣು ಮಕ್ಕಳ ಹೆಸರಿನಲ್ಲಿ ನಕಲಿ ಖಾತೆ ಮಾಡಿಕೊಂಡು ಹೆಣ್ಣು ಮಕ್ಕಳ ಬೆತ್ತಲೆ ಪೋಟೋ ಸಂಗ್ರಹ ಮಾಡುತ್ತಿದ್ದ!

ಹದಿನೇಳು ವರ್ಷದ ಯುವತಿ ಪೊಲೀಸರಿಗೆ ದೂರು ನೀಡಿದ ಮೇಲೆ ಆರೋಪಿಯ ಬಣ್ಣ ಬಯಲಾಗಿದೆ.  ರಾಶಿ ಗೋಯೆಲ್ ಎಂಬ ಹೆಸರಿನ ಮಹಿಳೆ (ಆರೋಪಿ) ಸೋಶಿಯಲ್ ಮೀಡಿಯಾ ಮುಖೇನ ನನ್ನ ಸಂಪರ್ಕ ಮಾಡಿ ನಿನ್ನ ಪೋಟೋ ಕಳಿಸು, ನಿನಗೆ ವೆಬ್ ಸೀರಿಸ್ ನಲ್ಲಿ ನಟನೆ ಮಾಡುವ ಅವಕಾಶ ಮಾಡಿಕೊಡುತ್ತೇನೆ ಎಂದು ನಂಬಿಸಿ ನನ್ನ ಬೆತ್ತಲೆ ಪೋಟೋ ಪಡೆದುಕೊಳ್ಳಲಾಗಿದೆ ಎಂದು ದೂರು ನೀಡಿದ್ದರು.

ಏನಿದು ಬೆತ್ತಲೆ ಭಯ; ಗಂಡನ ಮುಂದೆಯೂ ಆಗಲ್ಲ!

ಮಾತನ್ನು ನಂಬಿದ ಯುವತಿ ಬೆತ್ತಲೇ ಪೋಟೋ ಕಳುಹಿಸಿ ಕೊಟ್ಟಿದ್ದಾಳೆ. ಇನ್ನು ಹೆಚ್ಚಿನ ಪೋಟೋ ಕಳಿಸಿಕೊಡಲು ಬೇಡಿಕೆ ಬಂದಿದೆ. ಅನುಮಾನಗೊಂಡು ಯುವತಿ ಆ ಖಾತೆಯನ್ನು ಬ್ಲಾಕ್ ಮಾಡಿದ್ದಾಳೆ. ಇದಾದ ಮೇಲೆ ಇಬ್ಬರು ವ್ಯಕ್ತಿಗಳು ಯುವತಿಯನ್ನು ಸಂಪರ್ಕ ಮಾಡಿ ಕಿರುಕುಳ ನೀಡಲು ಆರಂಭಿಸಿದ್ದಾರೆ.  ನಮ್ಮ ಬೇಡಿಕೆಗೆ ಒಪ್ಪದಿದ್ದರೆ ನಿನ್ನ ನ್ಯೂಡ್ ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತೇವೆ ಎಂಧು ಬೆದರಿಕೆ ಹಾಕಿದ್ದಾರೆ. ಸ್ನೇಹತರಿಗೂ ಇದನ್ನು ಕಳಿಸಿ ವೈರಲ್ ಮಾಡುತ್ತೇವೆ ಎಂದಿದ್ದಾರೆ.

ಪೊಲೀಸರಿಗೆ ಯುವತಿ ದೂರು ನೀಡಿದ ನಂತರ ಐಪಿ ಅಡ್ರೆಸ್ ಆಧಾರದಲ್ಲಿ ಆರೋಪಿ ಮಾಮ್ ಚಂದ್(37) ಎಂಬಾತನ ಬಂಧಿಸಿ ಕರೆದುಕೊಂಡು ಬರಲಾಗಿದೆ.   ನಾನು ಯಾರನ್ನು ಇಲ್ಲಿಯವರೆಗೆ ಭೇಟಿ ಮಾಡಿಲ್ಲ ಎಂದು  ಆರೋಪಿ ಹೇಳಿದ್ದಾನೆ. ಆತನ ಮೊಬೈಲ್ ಮತ್ತು ಲ್ಯಾಪ್ ಟಾಪ್ ಪರಿಶೀಲನೆ ಮಾಡಿದಾಗ ಹಲವಾರು ಮಹಿಳೆ ಮತ್ತು ಯುವತಿಯರ ಬೆತ್ತಲೆ ಪೋಟೋಗಳು ಲಭ್ಯವಾಗಿವೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!
ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ