ಕಲಬುರಗಿ: ಜಮೀನಿನಲ್ಲಿ ನೇಣುಬಿಗಿದು ಪೊಲೀಸ್ ಕಾನ್‌ಸ್ಟೇಬಲ್ ಆತ್ಮಹತ್ಯೆ!

By Ravi Janekal  |  First Published Jun 23, 2024, 8:48 AM IST

ಕೌಟುಂಬಿಕ ಕಲಹಕ್ಕೆ ಬೇಸತ್ತು ಪೊಲೀಸ್ ಪೇದೆಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ ನಗರದ ಉದನೂರು ರಸ್ತೆಯಲ್ಲಿರುವ ಜಮೀನಲ್ಲಿ ನಡೆದಿದೆ. ದೊಡ್ಡೇಶ್(40) ಮೃತ ದುರ್ದೈವಿ


ಕಲಬುರಗಿ (ಜೂ.23): ಕೌಟುಂಬಿಕ ಕಲಹಕ್ಕೆ ಬೇಸತ್ತು ಪೊಲೀಸ್ ಪೇದೆಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಲಬುರಗಿ ನಗರದ ಉದನೂರು ರಸ್ತೆಯಲ್ಲಿರುವ ಜಮೀನಲ್ಲಿ ನಡೆದಿದೆ.

ದೊಡ್ಡೇಶ್(40) ಮೃತ ದುರ್ದೈವಿ, ಮಾಡಬೂಳ ಠಾಣೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ದೊಡ್ಡೇಶ್. ನಗರದ ಹೈಕೋರ್ಟ್ ಬಳಿಯ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಕೌಟುಂಬಿಕ ಕಲಹಗಳಿಂದ ಮಾನಸಿಕವಾಗಿ ಹೈರಾಣಾಗಿದ್ದರು ಎನ್ನಲಾಗಿದೆ. ಘಟನೆ ಬಳಿಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆ ಪ್ರಕರಣ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Tap to resize

Latest Videos

ಸಿಎಂ ತವರು ಜಿಲ್ಲೆಯಲ್ಲೇ ಅಸ್ಪೃಶ್ಯತೆ ಆಚರಣೆ; ಗ್ರಾಮಕ್ಕೆ ಅಧಿಕಾರಿಗಳು ದೌಡು, ಜಿಲ್ಲಾಡಳಿತ ಮಾಡಿದ್ದೇನು?

click me!