ನೀರಿನ ಸಂಪಿನಲ್ಲಿ ಪೊಲೀಸ್ ಕಾನ್ಸ್​ಟೇಬಲ್ ಮೃತ ದೇಹ ಪತ್ತೆ

By Suvarna News  |  First Published Aug 8, 2020, 7:02 PM IST

ಪೊಲೀಸ್ ಪೇದೆಯೊಬ್ಬರು ವಸತಿ ಗೃಹದ ನೀರಿನ ಸಂಪ್ ನಲ್ಲಿ ಬಿದ್ದು  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.


ರಾಮನಗರ, (ಆಗಸ್ಟ್‌ 08): ನೀರಿನ ಸಂಪ್ ಗೆ ಬಿದ್ದು ಪೊಲೀಸ್ ಕಾನ್‌ ಸ್ಟೆಬಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು (ಶನಿವಾರ)  ರಾಮನಗರದ ಚನ್ನಪಟ್ಟಣದಲ್ಲಿ ನಡೆದಿದೆ. 

ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್ ಸ್ಟೆಬಲ್ ಆಗಿದ್ದ ವಿಜಯಪುರ ಮೂಲದ ರವಿ ಬಿರಾದಾರ್ (30) ಆತ್ಮಹತ್ಯೆ ಮಾಡಿಕೊಂಡವರು.

Tap to resize

Latest Videos

ತುಂಬಿ ಹರಿಯುತ್ತಿರೋ ಕಾವೇರಿ ನದಿಗೆ ಹಾರಿ ಆತ್ಮಹತ್ಯಗೆ ಯತ್ನ: ಮಗು ನಾಪತ್ತೆ, ತಾಯಿ ಬಚಾವ್..!

ಬಿಜಾಪುರ ಸಿಂದಗಿ ಮೂಲದ ರವಿ ಬಿರಾದಾರ್ ಗ್ರಾಮಾಂತರ ಪೊಲೀಸ್ ಠಾಣೆ ಪಕ್ಕದಲ್ಲಿರುವ ಪೊಲೀಸ್ ವಸತಿ ಗೃಹದಲ್ಲಿ ವಾಸವಿದ್ದರು. ವಸತಿ ಗೃಹದಲ್ಲೇ ಇದ್ದ ನೀರಿನ ಸಂಪ್ ನಲ್ಲಿ ಬಿದ್ದು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಎರಡು ವರ್ಷಗಳ ಹಿಂದೆ ಕಾನ್ ಸ್ಟೆಬಲ್ ಆಗಿ ಸೇವೆಗೆ ಸೇರಿದ್ದರು. ಇವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.

click me!