ಕನ್ನಡ ಕಲಿಯದ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿಸಿದ ಶಿಕ್ಷಕಿ

By Suvarna News  |  First Published Jan 22, 2020, 9:31 PM IST

ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿತ/ ಶಿವಮೊಗ್ಗದಲ್ಲಿ ಪ್ರಕರಣ/ ಶಿಕ್ಷಕಿಯ ವಿರುದ್ಧ ಪೋಷಕರ ದೂರು/ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲು


ಶಿವಮೊಗ್ಗ[ಜ.22]  ಶಿಕ್ಷಕಿಯೊಬ್ಬರು ವಿದ್ಯಾರ್ಥಿಯೊಬ್ಬನಿಗೆ ಬಾಸುಂಡೆ ಬರುವ ಹಾಗೆ ದಂಡಿಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ಪೋಷಕರು ಪೊಲೀಸ್ ಠಾಣೆ  ಮೆಟ್ಟಿಲೇರಿದ್ದಾರೆ.

ಶಿವಮೊಗ್ಗ ಮಿಷನ್ ಕಾಂಪೌಂಡ್ ನಲ್ಲಿರುವ ಸಂತ ಥಾಮಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಗ್ರೇಸಿ ಎಂಬುವವರ ಮೇಲೆ ವಿದ್ಯಾರ್ಥಿಯನ್ನು ದಂಡಿಸಿರುವ ಆರೋಪ ಕೇಳಿಬಂದಿದೆ.

Tap to resize

Latest Videos

ಘಟನೆ ವಿವರ : ಶಾಲೆಯಲ್ಲಿ 6 ನೇ ತರಗತಿಯಲ್ಲಿ ಕನ್ನಡ ವಿಷಯದ ಕುರಿತು ಪಾಠ ತೆಗೆದುಕೊಂಡಿದ್ದ ವೇಳೆ ವಿದ್ಯಾರ್ಥಿಗೆ  ಪಠ್ಯ ಪುಸ್ತಕದ ವಿಷಯ ಕುರಿತಂತೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸದ ಬಾಲಕನಿಗೆ ಕೋಲಿನಲ್ಲಿ ಹೊಡೆದಿದ್ದಾರೆ ಎನ್ನಲಾಗಿದೆ. 

ಉಚಿತ ಲ್ಯಾಪ್ ಟಾಪ್ ಗೆ ಮುಗಿಬಿದ್ದ ವಿದ್ಯಾರ್ಥಿಗಳು

ಹೊಡೆತ ತಿಂದ  ಪರಿಣಾಮ ಕೈ ಮತ್ತು ಬೆನ್ನಿನ ಮೇಲೆ ಬಾಸುಂಡೆ ಬಂದಿದೆ. ಮನೆಗೆ ಬಂದಾಗ  ಬಾಸುಂಡೆ ಬಂದಿರುವುದನ್ನು ಗಮನಿಸಿದ ವಿದ್ಯಾರ್ಥಿಯ ತಾಯಿ ಏನಾಗಿದೆ ಎಂದು ಪ್ರಶ್ನಿಸಿದ್ದಾರೆ.  ಆಗ ನಡೆದ ಘಟನೆಯನ್ನು ವಿದ್ಯಾರ್ಥಿ ತನ್ನ ತಾಯಿಯ ಬಳಿ  ವಿವರಿಸಿದೆ. 

ತಕ್ಷಣವೇ ಪೋಷಕರು ಶಿಕ್ಷಕಿಯ ಮನೆಗೆ ತೆರಳಿ  ಪ್ರಶ್ನಿಸಿದ್ದಾರೆ. ಪ್ರಶ್ನೆ ಕೇಳಿದರೆ ಮಗು ಉತ್ತರಿಸಲಿಲ್ಲ. ಅನೇಕ ದಿನಗಳಿಂದ ಮಗು ಯಾವ ವಿಷಯ ಕುರಿತು ಉತ್ತರಿಸುತ್ತಿರಲಿಲ್ಲ. ಕೇಳಿದ ಪ್ರಶ್ನೆಗೆ ಉತ್ತರಿಸದಿದ್ದರೆ ಶಿಕ್ಷಿಸದಿದ್ದರೆ ಬಾಲಕ   ಶಿಕ್ಷಣದಿಂದ ದೂರ ಉಳಿಯುವ ಸಾಧ್ಯತೆಗಳಿವೆ. ಹೀಗಾಗಿ ಮಗುವಿಗೆ ಹೊಡೆದಿರುವುದಾಗಿ ತಿಳಿದ್ದಾರೆ.

ಕಲಿಕೆಯಲ್ಲಿ ತಮ್ಮ  ಮಗು  ಹಿಂದೆ ಉಳಿದಿದ್ದರೆ ತಿಳಿಸಿ ಹೇಳಬಹುದಿತ್ತು. ಆದರೆ ಬಾಸುಂಡೆ ಬರುವ ಹಾಗೆ ಒಡೆದಿರುವುದು ತಪ್ಪು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪ್ರಕರಣ ಸಂಬಂಧ ಪೋಷಕರು ಇದೀಗ ದೊಡ್ಡಪೇಟೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

 

click me!