ಹೊರಗೆ ಪಿಜಿ, ಒಳಗೆ ಮಾಂಸ ದಂಧೆ... ವಾಟ್ಸಪ್‌ನಲ್ಲಿ ಡೀಲ್, ಯುವತಿಯರು ಈ ಜಾಲದಲ್ಲಿ ಸಿಲುಕಿದ್ದೇಗೆ?

By Mahmad Rafik  |  First Published Aug 29, 2024, 4:19 PM IST

ಹೊರಗಿನಿಂದ  ಇದು  ಲೇಡಿಸ್ ಪಿಜಿ. ಆದ್ರೆ  ಒಳಗೆ ನಡೆಯೋದೆಲ್ಲಾ  ಅನೈತಿಕ ಕೆಲಸಗಳು. ಪ್ರತಿದಿನ ಇಲ್ಲಿಗೆ ಗ್ರಾಹಕರು ಬರೋರು. ಅದಕ್ಕೂ  ಮೊದಲೇ ಯಾವ ಹುಡುಗಿ, ರೇಟ್ ಎಷ್ಟು ಸೇರಿದಂತೆ ಎಲ್ಲವೂ ವಾಟ್ಸಪ್‌ನಲ್ಲಿಯೇ ಡೀಲ್ ಆಗುತ್ತಿತ್ತು.


ಗಾಜಿಯಾಬಾದ್: ರಾಜಧಾನಿ ದೆಹಲಿಯ ಪಕ್ಕದಲ್ಲಿಯೇ ಇರೋ ಗಾಜಿಯಾಬಾದ್‌ ಪಿಜಿ  ಹಾಸ್ಟೆಲ್‌ನಲ್ಲಿ ನಡೆಯುತ್ತಿದ್ದ ಸೆಕ್ಸ್‌ ರಾಕೆಟ್‌ನ್ನು ಪೊಲೀಸರು ಬೇಧಿಸಿದ್ದಾರೆ. ಪಿಜಿ ಹಾಸ್ಟೆಲ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ವಿಷಯ ತಿಳಿದ ಪೊಲೀಸರು ಗ್ರಾಹಕರ  ವೇಷದಲ್ಲಿ ಹೋಗಿ ರಹಸ್ಯವನ್ನು ಬಯಲಿಗೆಳೆದಿದ್ದಾರೆ. ದಾಳಿ ವೇಳೆ ನಾಲ್ವರು ಯುವತಿಯರನ್ನು ರಕ್ಷಿಸಿ, ಓರ್ವ ಗ್ರಾಹಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಣೆಯೊಂದಲ್ಲಿ ಯುವತಿ ಜೊತೆ ಸರಸ ಸಲ್ಲಾಪದಲ್ಲಿದ್ದಾಗಲೇ ಗ್ರಾಹಕನನ್ನು ಸೆರೆ ಹಿಡಿಯಲಾಗಿದೆ. ಇಡೀ ಪಿಜಿ ಹಾಸ್ಟೆಲ್ ಪರಿಶೀಲನೆ ನಡೆಸಿದಾಗ ರೂಮ್‌ಗಳಲ್ಲಿ ಆಕ್ಷೇಪಾರ್ಹ ವಸ್ತುಗಳು ಸಿಕ್ಕಿವೆ.

ಇದೇ ವೇಳೆ ಪಿಜಿ ಹಾಸ್ಟೆಲ್‌ ನಲ್ಲಿದ್ದ ನಾಲ್ವರು ಪುರುಷರು ಹಾಗೂ ಕೋಣೆಯೊಂದರಲ್ಲಿ ಅಡಗಿ ಕುಳಿತಿದ್ದ ವ್ಯವಹಾರ ನಡೆಸುತ್ತಿದ್ದ ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ . ರಕ್ಷಣೆಗೊಳಗಾಗಿರುವ ಯುವತಿಯರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಇನ್ನುಳಿದವರ ವಿರುದ್ಧ ದೇಹ ವ್ಯಾಪಾರ  ಸೇರಿದಂತೆ ಹಲವು ಆರೋಪಗಳಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಯುವತಿಯರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರ ಮಾಹಿತಿ ನೀಡಿದ್ದಾರೆ. ಯುವತಿಯರು ಈ ದಂಧೆಯಲ್ಲಿ ಹೇಗೆ ಸಿಲುಕಿದರು? ಇವರಿಂದ ಯಾವೆಲ್ಲಾ ಕೆಲಸಗಳನ್ನು ಮಾಡಿಸಲಾಗುತ್ತಿತ್ತು ಎಂಬುದರ ಬಗ್ಗೆ ಯುವತಿಯರಿಂದ ಮಾಹಿತಿ ಕಲೆ ಹಾಕಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

Tap to resize

Latest Videos

ಸ್ಪಾ ಗರ್ಲ್ ಅಂತೇಳಿ ಅದನ್ನೆಲ್ಲಾ ಮಾಡ್ತಿದ್ಳು… ರೈಡ್ ನಡೆಸಿದ ಪೊಲೀಸರಿಗೆ ಒದ್ದು, ಶೂ ಎಸೆದ ಲೇಡಿ

ಈ ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಸಹಾಯಕ ಪೊಲೀಸ್ ಆಯುಕ್ತ ರಾಜೇಶ್ ಉಪಾಧ್ಯಯ, ವಿಚಾರಣೆ ವೇಳೆ ಹಲವು  ಮಾಹಿತಿ  ಬಹಿರಂಗಗೊಂಡಿದೆ. ವೇಶ್ಯಾವಾಟಿಕೆ ದೊಡ್ಡಮಟ್ಟದಲ್ಲಿ ನಡೆಯುತ್ತಿತ್ತು. ಪ್ರತಿದಿನ ಹಾಸ್ಟೆಲ್‌ಗೆ ಗ್ರಾಹಕರು ಬರುತ್ತಿದ್ದರು. ರಕ್ಷಣೆಗೊಳಗಾಗಿರುವ ನಾಲ್ಕು ಯುವತಿಯರು ಮಾತ್ರ ಅಲ್ಲ, ಬೇರೆ ಕಡೆಯಿಂದ ಅನೇಕ ಯುವತಿತಯರು ಇಲ್ಲಿಗೆ ಬಂದು ವೇಶ್ಯಾವಾಟಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದರು. ಗ್ರಾಹಕರಿಗೆ ವಾಟ್ಸಪ್ ಮೂಲಕ ಯುವತಿಯರ ಫೋಟೋಗಳನ್ನು ಕಳುಹಿಸಿ ವ್ಯವಹಾರ ಮಾಡಲಾಗುತ್ತಿತ್ತು. ಒಂದು ರಾತ್ರಿಗೆ ಗ್ರಾಹಕರಿಂದ 5 ರಿಂದ 7 ಸಾವಿರ ರೂಪಾಯಿ ಹಣ ಪಡೆಯಲಾಗುತ್ತಿತ್ತು. 

ಯುವತಿಯರು ಪಿಜಿ ಹಾಸ್ಟೆಲ್‌ಗೆ ಕೆಲಸ ಕೇಳಿಕೊಂಡು ಬರುತ್ತಿದ್ರು. ಆರಂಭದಲ್ಲಿ ಅಡುಗೆಮನೆಯ ಕೆಲಸಗಳನ್ನು ನೀಡುತ್ತಿದ್ದರು. ನಂತರ ಹೆಚ್ಚಿನ ಹಣದಾಸೆ ತೋರಿಸಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ರು. ಕೆಲ ದಿನಗಳ ಬಳಿಕ ಯುವತಿಯರ ಅಶ್ಲೀಲ ಕ್ಲಿಪ್‌ಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡೋದಾಗಿ ಹೇಳಿ ಬಲವಂತವಾಗಿ ಗ್ರಾಹಕರ ಜೊತೆ ಸಹಕರಿಸುವಂತೆ ಒತ್ತಡ ಹಾಕಲಾಗುತ್ತಿತ್ತು ಎಂದು ರಾಜೇಶ್ ಉಪಾಧ್ಯಯ ಮಾಹಿತಿ ನೀಡಿದ್ದಾರೆ. 

prostitution : ಈ ಕಾರಣಕ್ಕೆ ದೇಹ ವ್ಯಾಪಾರಕ್ಕೆ ಇಳಿತಿದ್ದಾರೆ ಕಾಲೇಜು ಹುಡುಗಿಯರು

click me!