Asianet Suvarna News Asianet Suvarna News

prostitution : ಈ ಕಾರಣಕ್ಕೆ ದೇಹ ವ್ಯಾಪಾರಕ್ಕೆ ಇಳಿತಿದ್ದಾರೆ ಕಾಲೇಜು ಹುಡುಗಿಯರು

ವೇಶ್ಯಾವಾಟಿಕೆ ಬ್ಯುಸಿನೆಸ್ ಆಗಿದೆ. ಇದ್ರಲ್ಲೂ ಹಳೆಯ ಪದ್ಧತಿ ಹಾಗೂ ಹೊಸ ಪದ್ಧತಿಯಲ್ಲಿ ವ್ಯವಹಾರ ನಡೆಸುವ ಜನರಿದ್ದಾರೆ. ಕಾಲೇಜು ಹುಡುಗಿಯರ ಗಮನ ಕೂಡ ಈ ಬ್ಯುಸಿನೆಸ್ ಮೇಲೆ ನೆಟ್ಟಿದೆ. 
 

why girls from big colleges engage in prostitution roo
Author
First Published Aug 17, 2024, 1:05 PM IST | Last Updated Aug 17, 2024, 6:27 PM IST

ವೇಶ್ಯಾವಾಟಿ (Prostitution) ಗೆ ಈಗ ಹೈಟೆಕ್ (hightech) ಆಗ್ತಿದೆ. ಎಲ್ಲ ವ್ಯವಹಾರದಲ್ಲಿ ಬದಲಾವಣೆಯಾದಂತೆ ವೇಶ್ಯಾವಾಟಿಕೆಯಲ್ಲೂ ಬದಲಾವಣೆ ಗಾಳಿ ವೇಗವಾಗಿ ಬೀಸುತ್ತಿದೆ. ಹಿಂದೆ ಬೀದಿ ಬದಿಯಲ್ಲಿ, ಫ್ಲೈಓವರ್ ಕೆಳಗೆ ನಿಲ್ಲುತ್ತಿದ್ದ ಹುಡುಗಿಯರ ಸಂಖ್ಯೆ ಈಗ ಕಡಿಮೆಯಾಗಿದೆಯಾದ್ರೂ ಅಲ್ಲೂ ಡೀಲ್ (deal) ನಡೆಯುತ್ತಿದೆ. ಇದ್ರ ಜೊತೆಗೆ ಕಾಲೇಜ್ ಹುಡುಗಿಯರು, ಹೈ ಪ್ರೊಫೈಲ್ ವ್ಯವಹಾರ ನಡೆಸುತ್ತಿದ್ದಾರೆ. ಒಳ್ಳೆ ಕನಸುಹೊತ್ತು ಕಾಲೇಜಿಗೆ ಬರುವ ಹುಡುಗಿಯರು, ತಮ್ಮ ನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಈ ವ್ಯವಹಾರಕ್ಕೆ ಇಳಿಯುತ್ತಿದ್ದಾರೆ. ಇತ್ತೀಚಿನ ವರದಿ ಪ್ರಕಾರ, ದೇಹ ವ್ಯಾಪಾರಕ್ಕೆ ಬರ್ತಿರುವ ಹುಡುಗಿಯರಲ್ಲಿ ದೊಡ್ಡ ಕಾಲೇಜಿನಲ್ಲಿ ಓದುತ್ತಿರುವ ಹುಡುಗಿಯರೂ ಸೇರಿದ್ದಾರೆ. 

ವೇಶ್ಯಾವಾಟಿಕೆ ಇಂದಿನದಲ್ಲ. ಆತಮಾನಗಳಿಂದಲೂ ಅದು ನಡೆಯುತ್ತಿದೆ. ಆದ್ರೆ ಈಗಿನ ಹುಡುಗಿಯರು ಬುದ್ಧಿವಂತಿಕೆಯಿಂದ ವ್ಯವಹಾರ ಕುದುರಿಸ್ತಿದ್ದಾರೆ. ಅವರಿಗೆ ಬರೀ ಹಣ ಮುಖ್ಯವಲ್ಲ. ಸ್ವಚ್ಛತೆ, ಹೈ ಗ್ರೇಡ್ ಕೂಡ ಮುಖ್ಯ. ಇದೇ ಕಾರಣಕ್ಕೆ ಹುಡುಗಿಯರ ಲುಕ್ ಕೂಡ ಬದಲಾಗಿದೆ. ಹೆಚ್ಚು ಮೇಕಪ್ ಮಾಡ್ಕೊಂಡು, ಪ್ಲೈಓವರ್ ಕೆಳಗೆ ಕೈ ಬೀಸ್ತಾ ನಿಲ್ಲುವ ಹುಡುಗಿರುವ 100 -200ಕ್ಕೆ ಡೀಲ್ ಮಾಡ್ತಾರೆ. ಆದ್ರೆ ಹೈಟೆಕ್ ವ್ಯವಹಾರದ ಹುಡುಗಿಯರು ಒಳ್ಳೆ ಬಟ್ಟೆ, ಸ್ಟೈಲ್ ಗೆ ಆದ್ಯತೆ ನೀಡ್ತಾರೆ. ಜೀನ್ಸ್, ಟೀ ಶರ್ಟ್ ಧರಿಸಿ, ವಾಟ್ಸ್ ಅಪ್, ಫೇಸ್ಬುಕ್ ಮೂಲಕ ವ್ಯವಹಾರ ನಡೆಸುವ ಇವರು, ಸ್ಮಾರ್ಟ್ಫೋನ್ ಕೈನಲ್ಲಿ ಹಿಡಿದಿರ್ತಾರೆ. ಇವರ ವ್ಯವಹಾರ ಆನ್ಲೈನ್ ನಲ್ಲಿ ನಡೆಯುತ್ತೆ. ದೊಡ್ಡ ಜನರೇ ಇವರ ಟಾರ್ಗೆಟ್. ಹಾಗಾಗಿ ಇವರ ರೇಟ್ ಕೂಡ ಕಡಿಮೆ ಏನಿಲ್ಲ. 15 -25 ಸಾವಿರ ರೂಪಾಯಿಗೆ ಇವರ ಡೀಲ್ ನಡೆಯುತ್ತೆ ಅಂದ್ರೆ ನೀವು ನಂಬ್ಲೇಬೇಕು.

ಜಗಮೆಚ್ಚಿದ ಸುಂದರಿ ಕೈಲಿ ಜೆನ್ನರ್ 7 ಸೌಂದರ್ಯ ರಹಸ್ಯಗಳು
 
ಬೇರೆ ಬೇರೆ ಊರುಗಳಿಂದ ಇಲ್ಲಿಗೆ ಈ ವ್ಯವಹಾರಕ್ಕೆ ಬರುವ ಹುಡುಗಿಯರು ಆರಂಭದಲ್ಲಿ ತಮ್ಮ ಗುಟ್ಟು ಬಿಟ್ಟುಕೊಡೋದಿಲ್ಲ. ಫೇಸ್ಬುಕ್ ನಲ್ಲಿ ಬೇರೆ ಖಾತೆ, ಬೇರೆ ಫೋಟೋ ಮೂಲಕವೇ ಅವರು ಗ್ರಾಹಕರ ಜೊತೆ ವ್ಯವಹಾರ ನಡೆಸ್ತಾರೆ. ಗ್ರಾಹಕರ ಮೇಲೆ ಭರವಸೆ ಬಂದ್ಮೇಲೆ ತಮ್ಮ ಮುಖ ತೋರಿಸ್ತಾರೆ. ಗ್ರಾಹಕರು ಹೇಳಿದ ಜಾಗ ಅಥವಾ ಇವರು ಫಿಕ್ಸ್ ಮಾಡಿದ ಜಾಗಕ್ಕೆ ಇವರು ಹೋಗ್ತಾರೆ. ಅಲ್ಲಿಗೆ ಹೋದ್ಮೇಲೆ ತಮ್ಮ ವಾಟ್ಸ್ ಅಪ್ ನಂಬರ್ ಡ್ರಾಪ್ ಮಾಡಿ ಬರ್ತಾರೆ. ಯಾವುದೇ ಹೊಸ ಸದಸ್ಯರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಬೇಕು ಅಂದ್ರೆ ಅವರು ಸಾಕಷ್ಟು ವಿಚಾರಣೆ ಕೂಡ ನಡೆಸ್ತಾರೆ.

ಹೈಟೆಕ್ ಆಗಿ ನಡೆಯುವ ಈ ವ್ಯವಹಾರಕ್ಕೆ ಅಪಾರ್ಟ್ಮೆಂಟ್ ಗಳೇ ಸೂಕ್ತ ಜಾಗ. ಅನೇಕ ಹುಡುಗಿಯರು ಅಪಾರ್ಟ್ಮೆಂಟನ್ನು ಬಾಡಿಗೆ ತೆಗೆದುಕೊಂಡು ಅಲ್ಲಿ ವ್ಯವಹಾರ ನಡೆಸ್ತಾರೆ. ಗ್ರಾಹಕರನ್ನು ಅಲ್ಲಿಗೇ ಕರೆಸಿಕೊಳ್ತಾರೆ. ಅಲ್ಲಿನ ಸೆಕ್ಯೂರಿಟಿಗೆ ಸಹೋದರ, ಸ್ನೇಹಿತ, ಸಂಬಂಧಿ ಅಂತ ಒಂದೊಂದು ಕಥೆ ಹೇಳಿ ನಂಬಿಸೋದ್ರಲ್ಲಿ ಇವರು ಎತ್ತಿದ ಕೈ. ಇವ್ರದ್ದೇ ದೊಡ್ಡ ಜಾಲ ಭಾರತದಲ್ಲಿದೆ. 

ಬೆಂಗಳೂರು: ಹೆಂಡ್ತಿ ಕಾಟ ತಾಳಲಾರದೆ ಓಡಿಹೋಗಿದ್ದ ಗಂಡ ಪತ್ತೆ..!

ಈ ಹಿಂದೆ ಹುಡುಗಿಯರನ್ನು ಕಿಡ್ನಾಪ್ ಮಾಡಿ ವೇಶ್ಯಾವಾಟಿಕೆಗೆ ತಳ್ಳಲಾಗ್ತಿತ್ತು. ಆದ್ರೀಗ ಅನೇಕ ಕಾಲೇಜು ವಿದ್ಯಾರ್ಥಿನಿಯರು ತಾವಾಗಿಯೇ ಇದಕ್ಕೆ ಧುಮುಕುತ್ತಿದ್ದಾರೆ. ಬ್ರೋಕರ್ ಮೂಲಕ ವ್ಯವಹಾರ ನಡೆಸುವವರ ಸಂಖ್ಯೆ ಕೂಡ ಕಡಿಮೆ ಆಗ್ತಾ ಬಂದಿದೆ. ಬ್ರೋಕರ್ ಕೂಡ ವಾಟ್ಸ್ ಅಪ್ ಗ್ರೂಪ್ ಮಾಡ್ಕೊಂಡು ಅದ್ರಲ್ಲಿ ಹುಡುಗಿಯರನ್ನು ಸೇರಿಸಿ ಡೀಲ್ ಮಾಡ್ತಾರೆ. ಅನೇಕ ಬಾರಿ ಒಂದು ಊರಿನಿಂದ ಇನ್ನೊಂದು ಊರಿಗೆ ಬರುವ ಹುಡುಗಿಯರು ತಮ್ಮ ಗುರುತು ಬದಲಿಸಿಕೊಳ್ತಾರೆ. ಒಂದೇ ಸ್ಥಳದಲ್ಲಿ ಅವರು ಅನೇಕ ದಿನ ಇರೋದಿಲ್ಲ. ಗ್ರಾಹಕರಿಗೆ ಫ್ರೆಶ್ ಬೇಕು ಹಾಗೂ ಗೌಪ್ಯತೆ ಇರ್ಬೇಕು ಎನ್ನುವ ಕಾರಣಕ್ಕೆ ಬ್ರೋಕರ್ ಈ ಕೆಲಸ ಮಾಡ್ತಾರೆ.  ಬ್ರೋಕರ್ ಹೆಚ್ಚಿನ ಹಣ ವಸೂಲಿ ಮಾಡಿ ತಮಗೆ ಮೋಸ ಮಾಡ್ತಾರೆ. ಹಾಗಾಗಿ ನಾವೇ ಖುದ್ದು ಈ ಬ್ಯುಸಿನೆಸ್ ಗೆ ಇಳಿದಿದ್ದೇವೆ ಎನ್ನುವ ಕೆಲ ಹುಡುಗಿಯರೂ ಇದ್ದಾರೆ.  ಗ್ರಾಹಕರ ಆಯ್ಕೆ, ಡೀಲ್ ಎಲ್ಲವನ್ನೂ ಹುಡುಗಿಯರೇ ಖುದ್ದು ಮಾಡ್ತಾರೆ.

Latest Videos
Follow Us:
Download App:
  • android
  • ios