
ಜಸ್ಟ್ ಮ್ಯಾರೀಡ್ ಎನ್ನುವ ಕಾರೊಂದು ಹೋಗುತ್ತಿತ್ತು. ಅದನ್ನು ಹೊಸದಾಗಿ ಮದುವೆಯಾದ ಜೋಡಿ ಇರುವ ಕಾರಿನಂತೆ ಶೃಂಗಾರ ಮಾಡಲಾಗಿತ್ತು. ಒಳಗಡೆ ಹೊಸದಾಗಿ ಮದುವೆಯಾಗಿರುವಂತೆ ವಧು-ವರರೂ ಕುಳಿತಿದಿದ್ದರು. Just Married ಕಾರನ್ನು ಯಾರೂ ಹಿಡಿಯಲು ಸಾಧ್ಯವೇ ಇಲ್ಲ ಎಂದು ನಿರಾತಂಕವಾಗಿ ಇವರು ಹೊರಟಿದ್ದರು. ಆದರೆ ರಸ್ತೆ ಮಧ್ಯೆಯೇ ಪೊಲೀಸರು ಹಿಡಿದುಬಿಟ್ಟರು. ಹಾಗೆಂದು ಪೊಲೀಸರು ಸುಖಾಸುಮ್ಮನೇ ಈ ಕಾರನ್ನು ಹಿಡಿಯಲಿಲ್ಲ. ಅದರಲ್ಲಿ ಏನಿದೆ ಎನ್ನುವುದನ್ನು ಮೊದಲೇ ಅರಿತಿದ್ದ ಪೊಲೀಸರು ಚೆಕಿಂಗ್ ನೆಪದಲ್ಲಿ ಅದನ್ನು ಹಿಡಿದಾಗ ಕಾರಿನಿಂದ ವರ ಮಹಾಶಯ ಹೊರಕ್ಕೆ ಬಂದು, ಜಗಳ ಮಾಡಲು ಆರಂಭಿಸಿದ. ನಾವು ಹೊಸದಾಗಿ ಮದುವೆಯಾಗಿರುವ ಜೋಡಿ. ಇದು ನಮ್ಮ ಕಾರು. ಈ ಶುಭ ಗಳಿಗೆಯಲ್ಲಿ ಇದೇನಿದು ಚೆಕಿಂಗ್ ಎಂದ.
ಆದರೆ ಪೊಲೀಸ್ರು ಬಿಟ್ಟಾರೆಯೇ? ಚೆಕ್ ಮಾಡಿಯೇ ಬಿಟ್ಟರು. ಅಲ್ಲಿಗೆ ಪೊಲೀಸರು ಅಂದುಕೊಂಡಿದ್ದು ನಿಜವಾಗಿತ್ತು. ಅದು ಮದುವೆಯ ಕಾರೂ ಆಗಿರಲಿಲ್ಲ. ಅಲ್ಲಿ ಇರುವವರು ನೂತನ ದಂಪತಿಯೂ ಆಗಿರಲಿಲ್ಲ. ಬದಲಿಗೆ ಆಗಿದ್ದೇ ಬೇರೆ. ಅಲ್ಲಿ ಸಿಕಿದ್ದು ಅಪಾರ ಪ್ರಮಾಣದ ಡ್ರಗ್ಸ್!
ಬಿಹಾರದ ಸೀತಾಮರ್ಹಿಯಲ್ಲಿ ನಕಲಿ ವಿವಾಹ ಮೆರವಣಿಗೆಯಲ್ಲಿ ತೊಡಗಿದ್ದ ಮಾದಕವಸ್ತು ಕಳ್ಳಸಾಗಣೆ ಕಾರ್ಯಾಚರಣೆಯನ್ನು ಪೊಲೀಸರು ಭೇದಿಸಿ, ಅಲಂಕರಿಸಿದ ವರನ ಕಾರಿನಿಂದ ಅಪಾರ ಪ್ರಮಾಣದ ಗುಂಜಾ ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಇವುಗಳನ್ನು ಸಾಗಿಸುವಾಗ ಅನುಮಾನ ಬರದಂತೆ ಆರೋಪಿಗಳು ವಾಹನವನ್ನು ನಿಜವಾದ ಮದುವೆಯ ಕಾರಿನ ರೀತಿಯಲ್ಲಿ ಸಿಂಗರಿಸಿದ್ದರು.
ತಪಾಸಣಾ ಕಾರ್ಯಾಚರಣೆಯ ಸಮಯದಲ್ಲಿ, ಪೊಲೀಸರು ಅನುಮಾನಾಸ್ಪದ ವಾಹನವನ್ನು ತಡೆದು ಶೋಧ ನಡೆಸಿದರು, ಇದರಿಂದಾಗಿ ಕಾರಿನೊಳಗೆ ಅಡಗಿಸಿಟ್ಟಿದ್ದ ದೊಡ್ಡ ಪ್ರಮಾಣದ ಗಾಂಜಾ ಪತ್ತೆಯಾಗಿದೆ. ಮದುವೆ ಆಚರಣೆಗಳ ನೆಪದಲ್ಲಿ ಕಳ್ಳಸಾಗಣೆದಾರರು ಸರಕನ್ನು ಸಾಗಿಸಲು ಪ್ರಯತ್ನಿಸುತ್ತಿದ್ದರು ಎಂದು ಆರಂಭಿಕ ವರದಿಗಳು ಸೂಚಿಸುತ್ತವೆ. ವಶಪಡಿಸಿಕೊಂಡ ನಂತರ ಹಲವಾರು ಶಂಕಿತರನ್ನು ಬಂಧಿಸಲಾಯಿತು, ಆದರೆ ಅಧಿಕಾರಿಗಳು ಜಾಲಕ್ಕೆ ಸಂಬಂಧಿಸಿದ ಇತರರನ್ನು ಗುರುತಿಸಲು ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ