ಕೊಲೆ ಕೃತ್ಯದ ಸಾಕ್ಷ್ಯ ನಾಶಪಡಿಸಲು ರೇಣುಕಾಸ್ವಾಮಿ ಹಾಗೂ ಆರೋಪಿ ರಾಘವೇಂದ್ರನ ಮೊಬೈಲ್‌ಗಳನ್ನು ಮೋರಿಗೆ ಎಸೆಯಲಾಗಿತ್ತು. ಇನ್ನು ನಟ ದರ್ಶನ್ ಸೇರಿದಂತೆ ಇನ್ನುಳಿದ ಆರೋಪಿಗಳ ಮೊಬೈಲ್‌ಗಳಲ್ಲಿ ಉಪಯೋಗಿಸಿದ್ದ ವೆಬ್ ಆ್ಯಪ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.
ಬೆಂಗಳೂರು(ಜೂ.23): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಮೃತನ ಹಾಗೂ ಆರೋಪಿಗಳ ಹೆಸರಿನಲ್ಲಿ ಹೊಸ ಸಿಮ್ ಗಳನ್ನು ಪಡೆದು ಅಳಿಸಿಹೋಗಿರುವ ಡೇಟಾ ಸಂಗ್ರಹಕ್ಕೆ ಪೊಲೀಸರು ನಿರ್ಧರಿಸಿದ್ದಾರೆ.
ಕೊಲೆ ಕೃತ್ಯದ ಸಾಕ್ಷ್ಯ ನಾಶಪಡಿಸಲು ರೇಣುಕಾಸ್ವಾಮಿ ಹಾಗೂ ಆರೋಪಿ ರಾಘವೇಂದ್ರನ ಮೊಬೈಲ್‌ಗಳನ್ನು ಮೋರಿಗೆ ಎಸೆಯಲಾಗಿತ್ತು. ಇನ್ನು ನಟ ದರ್ಶನ್ ಸೇರಿದಂತೆ ಇನ್ನುಳಿದ ಆರೋಪಿಗಳ ಮೊಬೈಲ್‌ಗಳಲ್ಲಿ ಉಪಯೋಗಿಸಿದ್ದ ವೆಬ್ ಆ್ಯಪ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಳಿಸಿ ಹೋಗಿರುವ ಡಿಜಿಟಲ್ ಪುರಾವೆಗಳ ಸಂಗ್ರಹಕ್ಕೆ ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳು ಹಾಗೂ ಮೃತನ ಹೆಸರಿನಲ್ಲಿ ಸಿಮ್ ಪಡೆಯಲು ಮೊಬೈಲ್ ಸೇವಾ ಕಂಪನಿಗಳಿಗೆ ಪೊಲೀಸರು ಪತ್ರ ಬರೆದಿದ್ದಾರೆ.
ದರ್ಶನ್ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ: 12 ವರ್ಷದ ಬಳಿಕ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ನಟ
ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಹತ್ಯೆ ಬಳಿಕ ಸಾಕ್ಷ್ಯ ನಾಶಪಡಿಸಲು ಸುಮನಹಳ್ಳಿ ಸಮೀಪದ ಮೋರಿಗೆ ಮೃತದೇಹದ ಜತೆ ಆತನ ಮೊಬೈಲನ್ನು ಕೂಡ ಆರೋಪಿಗಳು ಬಿಸಾಡಿದ್ದರು. ಅಲ್ಲದೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಿಸಿ ಶೆಡ್‌ಗೆ ಕರೆತಂದಿದ್ದ ಚಿತ್ರದುರ್ಗ ಜಿಲ್ಲಾ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರನ ಮೊಬೈಲ್ ಸಹ ಮೋರಿಗೆ ಎಸೆಯಲಾಗಿತ್ತು. ಈ ಎರಡು ಮೊಬೈಲ್‌ಗಳ ಪತ್ತೆಗೆ ಮೋರಿಯಲ್ಲಿ ತೀವ್ರ ಹುಡುಕಾಟ ನಡೆಸಿ ಕೊನೆಗೆ ಸಿಗದೆ ಪೊಲೀಸರು ಕೈ ಚೆಲ್ಲಿದ್ದರು.
ಅದೇ ರೀತಿ ಈ ಹತ್ಯೆ ಬಳಿಕ ತಮ್ಮ ನಡುವೆ ಸಂವಹನಕ್ಕೆ ದರ್ಶನ್ ಗ್ಯಾಂಗ್ ವೆಬ್ ಆ್ಯಪ್‌ಗಳನ್ನು ಬಳಸಿದೆ. ನಂತರ ಆ ವೆಬ್ ಆ್ಯಪ್‌ಗಳು ಹಾಗೂ ಮತ್ತು ಡಾಟಾವನ್ನು ಆರೋಪಿಗಳು ನಾಶಗೊಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.