ಶಿರಸಿ ಜಾತ್ರೆ ಗದ್ದಲ: ಹಣಕ್ಕಾಗಿ ಮನೆಯನ್ನೇ ವೇಶ್ಯಾವಾಟಿಕೆ ಅಡ್ಡೆ ಮಾಡಿಕೊಂಡ್ರು

By Suvarna News  |  First Published Mar 10, 2020, 6:32 PM IST

ಹಣ ಗಳಿಸುವ ಉದ್ದೇಶದಿಂದ ಒತ್ತಾಯ ಪೂರ್ವಕವಾಗಿ ಇಬ್ಬರು ಮಹಿಳೆಯರನ್ನು ಇಟ್ಟುಕೊಂಡು ಮನೆಯನ್ನ ವೇಶ್ಯಾವಾಟಿಕೆ ಅಡ್ಡೆ ಮಾಡಿಕೊಂಡಿದ್ದವರನ್ನ ಪೊಲೀಸರು ಬಂಧಿಸಿದ್ದಾರೆ.


ಕಾರವಾರ, (ಮಾ.10):  ವೇಶ್ಯವಾಟಿಕೆ ದಂಧೆ ನಡೆಯುತ್ತಿದ್ದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿ, ಇಬ್ಬರು  ಮಹಿಳೆಯರನ್ನ ರಕ್ಷಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಮರಾಠಿಕೊಪ್ಪದಲ್ಲಿ ಘಟನೆ ನಡೆದಿದ್ದು, ಶಿರಸಿಯ ಮರಾಠಿಕೊಪ್ಪದ ಸಾವಿತ್ರಿ ಶಂಕರ ಭಟ್ (56), ಅಗಸೆಬಾಗಿಲಿನ ರಾಮಚಂದ್ರ ಗಜಾನನ ನಾಯ್ಕ (59), ಹೊನ್ನಾವರದ ಲಕ್ಷ್ಮೀಕಾಂತ ನಾಯ್ಕ(22) ಹಾಗೂ ಹುಬ್ಬಳ್ಳಿಯ ಆನಂದ ರೋಣಿಮಠ (57) ಬಂಧಿತ ಆರೋಪಿಗಳು. 

Tap to resize

Latest Videos

ಸ್ಪಾ ಹೆಸರಲ್ಲಿ ಬೆತ್ತಲಾಟ: ಸಿಸಿಬಿ ಪೊಲೀಸ್ರಿಂದ ಬಯಲಾಯ್ತು ಅಸಲಿ ಆಟ

ಆರೋಪಿಗಳಿಂದ 2,850 ರೂ. ನಗದು ಮತ್ತು 4 ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಾವಿತ್ರಿ ಭಟ್ ಹಾಗೂ ರಾಮಚಂದ್ರ ನಾಯ್ಕ ಹಣ ಗಳಿಸುವ ಉದ್ದೇಶದಿಂದ ಒತ್ತಾಯ ಪೂರ್ವಕವಾಗಿ ಇಬ್ಬರು ಮಹಿಳೆಯರನ್ನು ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. 

ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಸಂತ್ರಸ್ತೆಯರನ್ನು ರಕ್ಷಿಸಿದ್ದಾರೆ. ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ  ಐಪಿಸಿ ಸೆಕ್ಷನ್ 370, 109 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

click me!