ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಮೇಲೆ ಅದೇ ಠಾಣೆಯಲ್ಲಿ ಎಫ್ ಐ ಆರ್/ ವ್ಯಕ್ತಿಯೊಬ್ಬರನ್ನು ವಿಚಾರಣೆಗೆ ಕರೆಸಿ ಗಂಭೀರ ಹಲ್ಲೆ ಮಾಡಿದ ಆರೋಪ/ ಶಿವಾಜಿನಗರ ಇನ್ಸ್ ಪೆಕ್ಟರ್ ಮೇಲೆ ಎಫ್ ಐ ಆರ್
ಬೆಂಗಳೂರು(ಮಾ. 09) ಇದೊಂದು ವಿಚಿತ್ರ ರೀತಿಯ ಪ್ರಕರಣ. ಅದೇ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮೇಲೆ ಅದೇ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಶಿವಾಜಿನಗರ ಠಾಣೆಯ ಇನ್ಸ್ ಪೆಕ್ಟರ್ ವಿರುದ್ಧವೇ ಶಿವಾಜಿನಗರ ಠಾಣೆಯಲ್ಲೆ ಎಫ್ ಐ ಆರ್ ದಾಖಲಾಗಿದೆ.
ಶಿವಾಜಿನಗರ ಠಾಣೆ ಇನ್ಸ್ಪೆಕ್ಟರ್ ಜಿ. ಸಿದ್ದರಾಜು ಹಾಗೂ ಇತರೆ ನಾಲ್ಕು ಪೊಲೀಸರ ಮೇಲೆ ದೂರು ದಾಖಲಾಗಿದೆ. ಜನವರಿಯಲ್ಲಿ ಈ ದೂರು ದಾಖಲಾಗಿದೆ.
ಸ್ನೇಹಿತರಿಗೆ ಎಣ್ಣೆ ಪಾರ್ಟಿ ಕೊಟ್ಟು ಹೆಣವಾಗಿ ಹೋದ ಮೈಸೂರು ಆನಂದ
ಏನಿದು ಪ್ರಕರಣಳ: ವಸೀಂ ಪಾಷ ಎಂಬುವರು ನೀಡಿರುವ ದೂರಿನ ಆಧಾರದಲ್ಲಿ ಎಫ್ ಐಆರ್ ದಾಖಲಾಗಿದೆ ವಸೀಂ ಮೇಲೆ ಮಾರಾಣಂತಿಕ ಹಲ್ಲೆ ಮಾಡಿದ ಆರೋಪವನ್ನು ಠಾಣಾಧಿಕಾರಿ ಎದುರಿಸುತ್ತಿದ್ದಾರೆ
ವಿಚಾರಣೆಗೆ ಕರೆಸಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೆಲ ದಿನಗಳ ಹಿಂದೆ ಪ್ರಕರಣವೊಂದರ ಸಂಬಂಧ ವಸೀಂ ಪಾಷಾ ಅವರನ್ನು ಠಾಣೆಗೆ ಕರೆಸಿದ್ದ ಪೊಲೀಸರು ವಿಚಾರಣೆ ನಡೆಸಿದ್ದರು.ಈ ವೇಳೆ ವಸೀಂ ಪಾಷಾ ತಲೆಗೆ ಬಲವಾಗಿ ದೊಣ್ಣೆಯಿಂದ ಹೊಡೆದಿದ್ದಾರೆ. ಈ ಬಗ್ಗೆ ಕಮೀಷನರ್ ಹಾಗೂ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದ ವಸೀಂ ಪಾಷಾ ದೂರು ಸಲ್ಲಿಸಿದ್ದು ನ್ಯಾಯಾಲಯದ ನಿರ್ದೇಶನದಂತೆ ಇನ್ಸ್ ಪೆಕ್ಟರ್ ಸಿದ್ದರಾಜು ಹಾಗೂ ನಾಲ್ವರು ಪೊಲೀಸರ ಮೇಲೆ ಎಫ್ ಐ ಆರ್ ದಾಖಲಾಗಿದೆ.
News In 100 Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್