Bengaluru: ಹೈ ಎಂಡ್ ಕಾರುಗಳನ್ನ ಅಡವಿಟ್ಟು ಸಾಲ ತೆಗೆದುಕೊಳ್ಳುವವರೇ ಎಚ್ಚರ!

Published : Oct 15, 2022, 08:51 PM IST
Bengaluru: ಹೈ ಎಂಡ್ ಕಾರುಗಳನ್ನ ಅಡವಿಟ್ಟು ಸಾಲ ತೆಗೆದುಕೊಳ್ಳುವವರೇ ಎಚ್ಚರ!

ಸಾರಾಂಶ

ಹೈ ಎಂಡ್ ಕಾರುಗಳನ್ನ ಅಡವಿಟ್ಟು ಸಾಲ ತೆಗೆದುಕೊಳ್ಳುವವರೇ ಎಚ್ಚರ. ಯಾಕಂದ್ರೆ ಎಮರ್ಜೆನ್ಸಿಗೆ ಹಣ ಬೇಕು ಅಂತಾ ಕಾರು ಅಡವಿಟ್ಟು ಹಣ ಪಡೆದ್ರೆ ನಿಮ್ಮ ಕಾರು ಯಾರಿಗೋ ಮಾರಾಟವಾಗಬಹುದು. 

ಬೆಂಗಳೂರು (ಅ.15): ಹೈ ಎಂಡ್ ಕಾರುಗಳನ್ನ ಅಡವಿಟ್ಟು ಸಾಲ ತೆಗೆದುಕೊಳ್ಳುವವರೇ ಎಚ್ಚರ. ಯಾಕಂದ್ರೆ ಎಮರ್ಜೆನ್ಸಿಗೆ ಹಣ ಬೇಕು ಅಂತಾ ಕಾರು ಅಡವಿಟ್ಟು ಹಣ ಪಡೆದ್ರೆ ನಿಮ್ಮ ಕಾರು ಯಾರಿಗೋ ಮಾರಾಟವಾಗಬಹುದು. ನಿಮ್ಮ ಕಾರನ್ನ ನಿಮಗೆ ಗೊತ್ತಿಲ್ಲದೇ ಹಾಗೇ ಮಾರಾಟ ಮಾಡ್ತಾರೆ ಈ ಖದೀಮರು. ಹೈ-ಎಂಡ್ ಕಾರುಗಳನ್ನ ಅಡವಿಟ್ಟುಕೊಂಡು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಮೂರು ಮಂದಿ ಆರೋಪಿಗಳನ್ನ ಬೆಂಗಳೂರಿನ ಪುಲಕೇಶಿ ನಗರ ಪೊಲೀಸರು ಬಂಧಿಸಿದ್ದಾರೆ. 

ಒಟ್ಟು 14 ಹೈ ಎಂಡ್ ಕಾರುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತುರ್ತಾಗಿ ಹಣ ಬೇಕಾದಾಗ ಕಾರನ್ನ ಅಡವಿಟ್ಟು ಕೆಲ ಶ್ರೀಮಂತರು ಹಣ ಪಡೆಯುತ್ತಿದ್ದರು. ಇದೀಗ ಆದಿ ಕೇಶವಲು ಮೊಮ್ಮಗ ಗೀತಾವಿಷ್ಣು ಕಾರನ್ನ ಕೂಡ ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಈ ಖದೀಮರು. ಇನ್ನು ಕಾರನ್ನ ಮಾರಾಟ ಮಾಡುವಾಗ ನಂಬರ್ ಪ್ಲೇಟ್ ಹಾಗೂ ಡಾಕ್ಯುಮೆಂಟ್ಸ್ ಚೇಂಜ್ ಮಾಡಿ ಮಾರಾಟ ಮಾಡುತ್ತಿದ್ದರು ಎಂದು ಗೊತ್ತಾಗಿದೆ. ಸದ್ಯ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'ಪತ್ನಿ ವಿನಿಮಯ' ಬೇಡಿಕೆ ನಿರಾಕರಿಸಿದ್ದಕ್ಕಾಗಿ ಪತಿಯಿಂದ ಲೈಂಗಿಕ ಕಿರಕುಳ: ಅತ್ತೆ ಮಾವಂದಿರ ಸಾಥ್‌

ಬೈಕ್‌ ಕಳ್ಳನ ಬಂಧನ: ಬೈಕ್‌ ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಸಮಿಪದ ಕುದರಗುಂಡ ಗ್ರಾಮದ ದ್ಯಾವಪ್ಪ ಹಣಮಂತ್ರಾಯ ಹರಿಜನ (ಪೂಜಾರಿ) ಎಂಬಾತನನ್ನು ಬಂಧಿಸಿರುವ ಪೊಲೀಸ್‌ರು ಆತನಿಂದ 4 ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿಂದೆ ತಾಳಿಕೋಟೆಯ ಖಾಸ್ಗತೇಶ್ವರ ಜಾತ್ರಾ ಉತ್ಸವ ಸಮಯದಲ್ಲಿ ತಾಲೂಕಿನ ನೀರಲಗಿ ಗ್ರಾಮದ ಮಲ್ಲಿಕಾರ್ಜುನ ಬಸನಗೌಡ ಬಗಲಿ ಎಂಬವರು ಮಠದ ಹತ್ತಿರ ತಮ್ಮ ಎಚ್‌.ಎಫ್‌.ಡಿಲಕ್ಸ್‌ ಬೈಕ್‌ ನಿಲ್ಲಿಸಿ ಭಜನೆಯಲ್ಲಿ ಪಾಲ್ಗೊಂಡಿದ್ದಾಗ ಬೈಕ್‌ ಕಳವಾಗಿದ್ದು ಬೆಳಕಿಗೆ ಬಂದಿತ್ತು. ಇದನ್ನು ಅರಿತ ಬೈಕ್‌ ಮಾಲೀಕ ಮಲ್ಲಿಕಾರ್ಜುನ ಬಗಲಿ ತಾಳಿಕೋಟೆ ಠಾಣೆಗೆ ದೂರು ಸಲ್ಲಿಸಿದ್ದರು.

ಅಪರಾಧಿ ಪತ್ತೆಗೆ ಪಿಎಸ್‌ಐ ಆರ್‌.ಎಸ್‌.ಭಂಗಿ, ಎಎಸ್‌ಐ ಅಶೋಕ ನಾಯ್ಕೋಡಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಸದರಿ ತಂಡ ಬೈಕ್‌ ಕಳ್ಳನನ್ನು ಬಂಧಿಸುವುದರೊಂದಿಗೆ ಆತನ ಬಳಿ ಇದ್ದ ಕಳವು ಮಾಡಿದ್ದ 4 ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತಿಂಥಿಣಿ ಮೌನೇಶ್ವರ ಜಾತ್ರೆಯಲ್ಲಿ ಪ್ಯಾಶನ್‌ ಪ್ರೋ, ಸಿಂದಗಿ ಸಂಗಮ ಬಾರ ಮುಂದೆ ನಿಲ್ಲಿಸಿದ್ದ ಹೊಂಡಾ ಶೈನ್‌ ಬೈಕ್‌, ವಿಜಯಪೂರ ಅಂಬೇಡ್ಕರ್‌ ಕ್ರೀಡಾಂಗಣ ಗೇಟ್‌ ಮುಂದೆ ನಿಲ್ಲಿಸಿದ ಎಚ್‌.ಎಫ್‌.ಡಿಲಕ್ಸ್‌ ಬೈಕ್‌ಗಳನ್ನು ನಿಲ್ಲಿಸಿದ್ದಾಗ ಕಳವು ಮಾಡಿರುವದಾಗಿ ಆರೋಪಿ ದ್ಯಾವಪ್ಪ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಿರುವ ಪೊಲೀಸ್‌ರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಶಹಾಪುರದಲ್ಲಿ ಸರಣಿ ಕಳ್ಳತನ: ಹಣ ದೋಚಿದ ಖದೀಮರು

ಕಾರ್ಯಾಚರಣೆಯಲ್ಲಿ ಪೊಲೀಸ್‌ ಸಿಬ್ಬಂದಿ ಎಂ.ಎಲ್‌.ಪಟ್ಟೇದ, ಶಿವು ಹಾಳಗೋಡಿ, ಇಮಾಂ ಕುರಿ, ಸಂಗು ಚಲವಾದಿ, ಗೀರಿಶ ಚಲವಾದಿ, ಆರ್‌.ಎಸ್‌.ವಡೆಯರ, ಎಸ್‌.ಬಿ.ಬಗಲಿ, ಎಸ್‌.ವಿ.ಮಠ, ವಿ.ಎಸ್‌.ಅಜ್ಜಣ್ಣವರ, ಪಾಲ್ಗೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!