ಉಡುಪಿ: ನಿಷೇಧಿತ ಇ-ಸಿಗರೇಟ್ ಮಾರಾಟ, ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

Published : Apr 21, 2023, 03:41 PM IST
ಉಡುಪಿ: ನಿಷೇಧಿತ ಇ-ಸಿಗರೇಟ್ ಮಾರಾಟ, ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

ಸಾರಾಂಶ

ರ್ಕಾರವು ಇ-ಸಿಗರೇಟ್‌ನ್ನು ನಿಷೇಧ ಮಾಡಿದ್ದು, ಐ.ಟಿ.ಸಿ ಕಂಪೆನಿಯ ನಕಲಿ ಗೋಲ್ಡ್ ಫ್ಲೇಕ್ ಸಿಗರೇಟ್, ವಿದೇಶಿ ಕಂಪನಿಯ ಸಿಗರೇಟ್ ಹಾಗೂ ನಿಷೇಧಿತ ಇ- ಸಿಗರೇಟ್‌ ಗಳನ್ನು ಜಿಲ್ಲೆಯಲ್ಲಿ ಸಾಗಾಟ ಮತ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಬಗ್ಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಉಡುಪಿ (ಏ.21) : ಸರ್ಕಾರವು ಇ-ಸಿಗರೇಟ್‌ನ್ನು ನಿಷೇಧ ಮಾಡಿದ್ದು, ಐ.ಟಿ.ಸಿ ಕಂಪೆನಿಯ ನಕಲಿ ಗೋಲ್ಡ್ ಫ್ಲೇಕ್ ಸಿಗರೇಟ್, ವಿದೇಶಿ ಕಂಪನಿಯ ಸಿಗರೇಟ್ ಹಾಗೂ ನಿಷೇಧಿತ ಇ- ಸಿಗರೇಟ್‌ ಗಳನ್ನು ಜಿಲ್ಲೆಯಲ್ಲಿ ಸಾಗಾಟ ಮತ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಬಗ್ಗೆ ಕಾರ್ಯಾಚರಣೆ ನಡೆಸಿ ಮಣಿಪಾಲ ಠಾಣೆಯಲ್ಲಿ 2 ಹಾಗು ಪಡುಬಿದ್ರೆ ಠಾಣೆಯಲ್ಲಿ 1 ಪ್ರಕರಣವನ್ನು ದಾಖಲಿಸಿ, 6,34,970/- ರೂ ಬೆಲೆಯ ಇ-ಸಿಗರೇಟ್ ಗಳನ್ನು ಹಾಗು ನಾಲ್ವರನ್ನು ಪಡೆಯಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಕರಣ - 01

ಕರ್ನಾಟಕ ವಿಧಾನಸಭಾ ಚುನಾವಣೆ-2023(Karnataka assembly election 2023) ಕ್ಕೆ ಸಂಬಂಧಿಸಿದಂತೆ 121-ಕಾಪು ವಿಧಾನಸಭಾ ಕ್ಷೇತ್ರದ S.S.T-03 ನೇ ತಂಡದ ಅಧಿಕಾರಿಗಳು ಎ.17 ರಂದು ಸುಮಾರು 09.30 ಗಂಟೆಗೆ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಪು ತಾಲೂಕಿನ ಹೆಜಮಾಡಿ ಚೆಕ್ ಪೋಸ್ಟ್(Hejmadi checkpost) ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಯಾವುದೇ ದಾಖಲೆ ಇಲ್ಲದ ಒಟ್ಟು 4,79,970/- ರೂ ಮೌಲ್ಯದ ಸಿಗರೇಟ್‌ ಬಂಡಲ್‌ಗಳು ಮತ್ತು ನಿಷೇಧೀತ  E-Cigarette ಗಳನ್ನು, ಸಾಗಾಟಕ್ಕೆ ಉಪಯೋಗಿಸಿದ ಕಾರು ಮತ್ತು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

ಇ-ಸಿಗರೇಟ್ ಹೃದಯಕ್ಕೆ ಮಾರಕವಾಗಿದೆ! ಹುಷಾರ್

ಪ್ರಕರಣ 02 

ಎ.18 ರಂದು ಅಕ್ರಮವಾಗಿ ಇ- ಸಿಗರೇಟ್ (Electronic Cigarettes) ಸಂಗ್ರಹ ಹಾಗೂ ವಿದೇಶಿ ಕಂಪನಿಯ ಸಿಗರೇಟುಗಳನ್ನು ಎಂ.ಆರ್.ಪಿ ದರ ನಮೂದಿಸದೇ ಕೋಟ್ಪಾ ಕಾಯಿದೆ ಉಲ್ಲಂಘಿಸಿ ಮಾರಾಟ ಮಾಡುತ್ತಿರುವ ಮಣಿಪಾಲದಲ್ಲಿನ ಶೀಶಾ ಪ್ಯಾರಡೈಸ್ ಮತ್ತು ಸ್ಮೋಕ್ ಕೋ ಎಂಬ ಅಂಗಡಿಗಳ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಎರಡೂ ಅಂಗಡಿಗಳಿಂದ ಸುಮಾರು 1,50,000 /- ರೂ ಮೌಲ್ಯದ 113 ವಿವಿಧ ಕಂಪನಿಯ ನಿಷೇದಿತ  ಇ- ಸಿಗರೇಟ್ ಗಳು ಹಾಗೂ 5,000/- ರೂ ಮೌಲ್ಯದ ವಿದೇಶಿ ಕಂಪನಿಯ ಸಿಗರೇಟ್ ಗಳನ್ನು ವಶಪಡಿಸಿಕೊಳ್ಳಾಗಿದ್ದು, ಇದರ ಒಟ್ಟು 1,55,000/- ಆಗಿರುತ್ತದೆ.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳ ಗ್ರಾಮದ ಶೀಶಾ ಪ್ಯಾರಡೈಸ್‌ ಅಂಗಡಿ ಮಾಲೀಕರಾದ ಅನ್ಸಾರ್  ಹಾಗೂ ಸ್ಮೋಕ್ ಕೋ ಅಂಗಡಿಯ ಮಾಲೀಕರಾದ ಮುಫೀನ್ ವಿರುದ್ಧ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ Prohibition of Electronic Cigarettes (Production, Manufacture , Import, Export, Transport, Sale , Distribution, Storage and advertisement ) act 2019 ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು, ವಿಚಾರಣೆಯ ವೇಳೆ ಐ.ಟಿ.ಸಿ ಕಂಪನಿಯ ನಕಲಿ ಸಿಗರೇಟುಗಳನ್ನು  ತಯಾರಿಸಿ ಮಾರಾಟ ಮಾಡಿರುವ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ  ದಾಖಲಾದ ಪ್ರಕರಣದಲ್ಲಿ ಅನ್ಸಾರ್  ಭಾಗಿಯಾಗಿದ್ದು, ಅದೇ ರೀತಿ ಮುಫೀನ್ ಎಂಬುವವನು ಮುಂಬೈನ ಕ್ರಾಫ್ಟ್ ಮಾರುಕಟ್ಟೆಯಲ್ಲಿ ನಿಷೇದಿತ ಇ- ಸಿಗರೇಟುಗಳನ್ನು ಖರೀದಿಸಿರುವುದಾಗಿ ತಿಳಿದು ಬಂದಿರುತ್ತದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. 

ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚಿಂದ್ರ ಹಾಕೆ  ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ, ಉಡುಪಿ ಡಿವೈಎಸ್ಪಿ ದಿನಕರ ನಿರ್ದೇಶನದಂತೆ, ಮಣಿಪಾಲ ಪೊಲೀಸ್ ಠಾಣಾ ನಿರೀಕ್ಷಕ ದೇವರಾಜ ಟಿ.ವಿ ರವರ ನೇತೃತ್ವದಲ್ಲಿ ಮಣಿಪಾಲ ಪೊಲೀಸ್ ಠಾಣಾ ಪೊಲೀಸ್‌ ಉಪನಿರೀಕ್ಷಕ ರುಕ್ಮಾ ನಾಯ್ಕ, ಎ.ಎಸ್‌ಐ ಶೈಲೇಶ್‌ ಕುಮಾರ್‌, ಸಿಬ್ಬಂದಿ ಅರುಣ್ ಕುಮಾರ್‌,ರೇವಣಸಿದ್ಧ, ಉಮೇಶ್‌ ಯಾದವ್ ರವರು ದಾಳಿ ಸಮಯದಲ್ಲಿ ಭಾಗವಹಿಸಿರುತ್ತಾರೆ.

ಪ್ರಕರಣದ ಕುರಿತು ತನಿಖೆ ಮುಂದುವರೆದಿದ್ದು, ಸಾರ್ವಜನಿಕರಿಗೆ ನಿಷೇದಿತ ಇ- ಸಿಗರೇಟು ಹಾಗೂ ನಕಲಿ ಸಿಗರೇಟುಗಳ ಮಾರಾಟ ಮಾಡುವ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ಆರೋಪಿತರು :

1]ಅಬ್ದುಲ್‌ ಖಾದರ್‌ ಅನ್ಸಾರ್‌ ಪ್ರಾಯ:27 ವರ್ಷ, ತಂದೆ: ಮೊಹಮ್ಮದ್‌, ವಾಸ: ಪುರುಷನ್‌ಗೋಡಿ ಹೌಸ್‌,  ವರ್ಕಾಡಿ ಗ್ರಾಮ ಮತ್ತು ಅಂಚೆ, ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ. 

2] ಸುಫಿಯಾನ್‌ ಶೌರಿ (19ವರ್ಷ) ತಂದೆ:ಮೊಹಮ್ಮದ್‌, ವಾಸ: ಬಡಾಜೆ ಅಂಚೆ ಪೊಸೋಡು ಗ್ರಾಮ ಮಂಜೇಶ್ವರ  ತಾಲೂಕು, ಕಾಸರಗೋಡು ಜಿಲ್ಲೆ ಕೇರಳ ರಾಜ್ಯ. 

3]ಮೊಯ್ನು ಬಾಯಾರು, ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ ಕೇರಳ ರಾಜ್ಯ,. 

4] ಸೈಫು, ಮಣಿಪಾಲ.

ಇ- ಸಿಗರೆಟ್‌ ಮಾರಿದರೆ 1 ಲಕ್ಷ ದಂಡ, ಜೈಲು!

ಬಂಧಿತರು :

-1]ಅಬ್ದುಲ್‌ ಖಾದರ್‌ ಅನ್ಸಾರ್‌ (27), ತಂದೆ: ಮೊಹಮ್ಮದ್‌, ವಾಸ: ಪುರುಷನ್‌ಗೋಡಿ ಹೌಸ್‌,  ವರ್ಕಾಡಿ ಗ್ರಾಮ ಮತ್ತು ಅಂಚೆ, ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ.

2] ಸುಫಿಯಾನ್‌ ಶೌರಿ (19) ತಂದೆ:ಮೊಹಮ್ಮದ್‌, ವಾಸ: ಬಡಾಜೆ ಅಂಚೆ ಪೊಸೋಡು ಗ್ರಾಮ ಮಂಜೇಶ್ವರ  ತಾಲೂಕು, ಕಾಸರಗೋಡು ಜಿಲ್ಲೆ ಕೇರಳ ರಾಜ್ಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!