ಮದ್ವೆಯಾಗಿ ಮೂರೇ ದಿನಕ್ಕೆ ಮನೆ ದರೋಡೆ ಮಾಡಿ ಪರಾರಿ: ಕಿಲಾಡಿ ವಧು ಅಂದರ್

Published : Aug 01, 2022, 04:54 PM ISTUpdated : Aug 01, 2022, 04:59 PM IST
ಮದ್ವೆಯಾಗಿ ಮೂರೇ ದಿನಕ್ಕೆ ಮನೆ ದರೋಡೆ ಮಾಡಿ ಪರಾರಿ: ಕಿಲಾಡಿ ವಧು ಅಂದರ್

ಸಾರಾಂಶ

ಮದ್ವೆಯಾಗಿ ಕೇವಲ ಮೂರೇ ದಿನಕ್ಕೆ ಗಂಡ, ಗಂಡನ ಮನೆಯನ್ನು ದೋಚಿ ಹಣ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ವಧುವನ್ನು ಪೊಲೀಸರು ಬಂಧಿಸಿದ್ದಾರೆ.

ಪಿತಾಮಪುರ: ಮದ್ವೆಯಾಗಿ ಕೇವಲ ಮೂರೇ ದಿನಕ್ಕೆ ಗಂಡ, ಗಂಡನ ಮನೆಯನ್ನು ದೋಚಿ ಹಣ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ವಧುವನ್ನು ಪೊಲೀಸರು ಬಂಧಿಸಿದ್ದಾರೆ. ಮೇ ತಿಂಗಳಲ್ಲಿ ಈ ಕಳವು ಹಾಗೂ ದರೋಡೆ ಪ್ರಕರಣ ನಡೆದಿತ್ತು. ಇದಾಗಿ ಎರಡು ತಿಂಗಳ ಬಳಿಕ ಕಿಲಾಡಿ ವಧು ಹಾಗೂ ಆಕೆಯ ಇಬ್ಬರು ಸಹಚರರನ್ನು ಬಂಧಿಸುವಲ್ಲಿ ಮಧ್ಯಪ್ರದೇಶದ ಪೊಲೀಸರು ಯಶಸ್ವಿಯಾಗಿದ್ದಾರೆ.

ಲೋಧಿ ಮೊಹಲ್ಲಾ ಪಿತಾಂಪುರ್ ನಿವಾಸಿಯಾದ ದೂರುದಾರ ನರೇಶ್ ವರ್ಮಾ ಅವರು ಮದುವೆಯಾಗಿ ಮೂರೇ ದಿನಕ್ಕೆ ತನ್ನ ಪತ್ನಿ ತನ್ನ ಮನೆ ದೋಚಿ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಮೇ 28 ರಂದು ತಮ್ಮ ಮದುವೆಯಾಗಿ ಮೂರು ದಿನಗಳ ನಂತರ ಈ ಘಟನೆ ನಡೆದಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ಗಂಡನ ಸಾವಿನ ನೋವಿನಲ್ಲಿ ಬಿಕ್ಕುತ್ತಿದ್ದರೆ ತಂಗಿ - ತಾಯಿಗೆ ಆಕೆಯ ಗೌನ್‌ ಮೇಲೆ ಕಣ್ಣು

ತಮ್ಮ ಪತ್ನಿ ರತ್ನಖೇಡಿ ಉಜ್ಜಯಿನಿಯ 32 ವರ್ಷ ವಯಸ್ಸಿನ ಜ್ಯೋತಿ ಶಂಕರ್ ಲಾಲ್ ಸಂಕ್ಲಾ, ಮತ್ತು ಆಕೆಯ ಸಹಚರರಾದ ರಾಜು ಶಂಕರ್‌ಲಾಲ್, ಪ್ರಭುಲಾಲ್ ಸಂಕ್ಲಾ ಹಾಗೂ ಉಜ್ಜಿಯಿನಿಯ ಜೈಸಿಂಗ್ ಪುರ ನಿವಾಸಿ ಕೈಲಾಶ್ ಶರ್ಮಾ, ಅವರ ವಿರುದ್ಧ ಪತಿ ನರೇಶ್ ಶರ್ಮಾ ದೂರು ನೀಡಿದ್ದರು. ಮನೆಯಲ್ಲಿದ್ದ ಎರಡು ಲಕ್ಷ ನಗದಿನೊಂದಿಗೆ ವಧು ಪರಾರಿಯಾಗಿದ್ದಾಗಿ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ  ಸೆಕ್ಟರ್ 1 ಪಿತಾಂಪುರ ಠಾಣೆ ಪೊಲೀಸರು  ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ಲೋಕೇಶ್ ಸಿಂಗ್ ಬದೌರಿಯಾ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು. 

ಗಂಡ ಕಪ್ಪು ಎಂದು ಹಸಮಣೆಯಲ್ಲಿ ಮದ್ವೆ ಬೇಡ ಎಂದ ವಧು

ಹೀಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು ಸೆಕ್ಟರ್ 1 ಪಿತಾಂಪುರದಲ್ಲಿ ವಧು ಹಾಗೂ ಆಕೆಯ ಸಹಚರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಬಳಿಯಿಂದ ಲೂಟಿ ಮಾಡಿದ್ದ ಹಣವನ್ನು ಪೊಲೀಸರು ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ಅಬ್ಬಾ ನೋಡಿದ್ರಲ್ಲಾ ಎಂತೆಂಥಾ ಖತರ್ನಾಕ್ ಖದೀಮರು ಇರ್ತಾರೆ. ಯಾರನ್ನೂ ಕೂಡ ನಂಬುವಂತಿಲ್ಲ. ತಾನು ಮದುವೆಯಾಗುವ ಹೆಣ್ಣು ತಾಯಿಗೆ ಸಮಾನಳು, ಬದುಕಿಗೆ ದಾರಿ ತೋರಿ ಮಾರ್ಗದರ್ಶನ ಮಾಡುವವಳು, ಮನೆ ಬೆಳಗುವ ದೀಪ ಎಂದೆಲ್ಲಾ ಹೆಣ್ಣನ್ನು ಬಣ್ಣಿಸುತ್ತಾರೆ. ಆದರೆ  ಇಲ್ಲಿ ಮದುವೆಯಾಗಿ ಬಂದ ಹೆಣ್ಣೇ ಮನೆ ದೋಚಿ ಪರಾರಿಯಾಗಿದ್ದು, ಮದುವೆಯಾದ ಗಂಡು ಆಘಾತಗೊಂಡು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

ಹನಿಮೂನ್‌ ಹೋಗೋಕೆ ದುಡ್ಡು ಕಲೆಕ್ಟ್ ಮಾಡಿದ

ಇವತ್ತಿನ ಕಾಲದಲ್ಲಿ ಮದುವೆಗಳು ದುಬಾರಿ (Costly)ಯಾಗಿದೆ. ಹೀಗಾಗಿ ದಂಪತಿಗಳು ಯಾವಾಗಲೂ ಹಣವನ್ನು ಉಳಿಸುವ ಮಾರ್ಗಗಳನ್ನು ಹುಡುಕುತ್ತಾರೆ. ಆದರೆ ಎಲ್ಲದರಲ್ಲೂ ಹಿಡಿತ ಮಾಡುವ ಹಾಗಿಲ್ಲವಲ್ಲ. ಅದಕ್ಕೆ ಈ ವಧು ಸೂಪರ್ ಐಡಿಯಾ ಮಾಡಿದ್ದಾಳೆ. ಮದುವೆಯಲ್ಲಿ ಭರ್ಜರಿ ಊಟ, ತೆರೆದ ಬಾರ್‌ನ ವ್ಯವಸ್ಥೆ ಮಾಡಿಡಲಾಗಿತ್ತು. ಆದರೆ ಬೇಕಾಬಿಟ್ಟಿ ಕುಡಿಯುವುದೇನೋ ಸರಿ. ಆದ್ರೆ ಹೀಗೆ ಕುಡಿಯೋರು ಹನಿಮೂನ್‌ಗೆ ದುಡ್ಡು ಕೊಡ್ಬೇಕು ಅನ್ನೋ ಷರತ್ತು ವಿಧಿಸಿದ್ದಾಳೆ. ವಧು-ವರರು ತಮ್ಮ ಹನಿಮೂನ್ ಅಥವಾ ಹೊಸ ಮನೆ ನಿಧಿಗೆ ಕಡ್ಡಾಯವಾಗಿ ದೇಣಿಗೆ ನೀಡಿದರೆ, ಎಲ್ಲಾ ಅತಿಥಿಗಳಿಗೆ ಅನಿಯಮಿತ ಡ್ರಿಂಕ್ಸ್ ಸರಬರಾಜು ಮಾಡುವುದಾಗಿ ಯುವತಿ ಹೇಳಿಕೊಂಡಿದ್ದಾಳೆ. ಈ ಬಗ್ಗೆ ರೆಡ್ ಇಟ್‌ನಲ್ಲಿ ಬರೆದುಕೊಂಡಿದ್ದಾರೆ.

ಆರತಕ್ಷತೆಗಾಗಿ, ನಾವು ಸ್ನೇಹಿತ ಬಾರ್ಟೆಂಡಿಂಗ್‌ನೊಂದಿಗೆ ತೆರೆದ ಬಾರ್ ಅನ್ನು ಯೋಜನೆ ಮಾಡುತ್ತಿದ್ದೇವೆ. ಇಲ್ಲಿಗೆ ಆಗಮಿಸುವ ಅತಿಥಿಗಳು  ಎಷ್ಟು ಬೇಕಾದರೂ ಕುಡಿಯಬಹುದು. ಆದರೆ ನಮ್ಮ ಹನಿಮೂನ್ ಅಥವಾ ಹೊಸ ಮನೆ ನಿಧಿಗೆ ಕಡ್ಡಾಯವಾಗಿ ಹಣ ನೀಡುವಂತೆ ಕೇಳಿಕೊಂಡಿದ್ದಾರೆ. ನೀವು ನಿಮ್ಮ ಮೊದಲ ಪಾನೀಯವನ್ನು ಪಡೆಯಲು ಹೋದಾಗ  ಹಣವನ್ನು ಪಾವತಿಸಿದರೆ ಸಾಕು. ಉಳಿದ ಡ್ರಿಂಕ್ಸ್ ಉಚಿತವಾಗಿರುತ್ತದೆ ಎಂದು ದಂಪತಿ ಹೇಳಿಕೊಂಡಿದ್ದಾರೆ. ಈ ನಿರ್ಧಾರ ಸ್ವಾರ್ಥಿಯಂತೆ ನಿಮಗೆ ಅನಿಸಬಹುದು. ಆದರೆ ಮನೆಮಂದಿಗೆ ಆರ್ಥಿಕವಾಗಿ ತೊಂದರೆ ನೀಡದೆ ಹನಿಮೂನ್ ಮಾಡಲು ನಾವು ಈ ನಿರ್ಧಾರ ತೆಗೆದುಕೊಂಡೆವು ಎನ್ನುತ್ತಾರೆ ನೂತನ ದಂಪತಿ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ