
ಬನ್ನೇರುಘಟ್ಟ (ಆ.1): ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವುದು ಆತಂಕ ಹುಟ್ಟಿಸುತ್ತಿದೆ. ದಿನಾ ಬೆಳಗಾದರೆ ಆತ್ಮಹತ್ಯೆ ಸುದ್ದಿ. ಮೊಬೈಲ್ ಕೊಡ್ಸಿಲ್ಲ ಅಂತಾ ವಿದ್ಯಾರ್ಥಿ ಆತ್ಮಹತ್ಯೆ, ಗಂಡ ತಂದ ಸೀರೆ ಕಲರ್ ಚೆನ್ನಾಗಿಲ್ಲ ಅಂತಾ ಆತ್ಮಹತ್ಯೆ, ತವರಿಗೆ ಹೋದ ಪತ್ನಿ ವಾಪಸ್ ಬರಲು ಒಂದೆರಡು ದಿನ ತಡವಾಗಿದ್ದಕ್ಕೆ ಮನನೊಂದು ಗಂಡ ಆತ್ಮಹತ್ಯೆ.. ಇಂಥ ಆತ್ಮಹತ್ಯೆ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿವೆ. ಇದೀಗ ಇಂಥದ್ದೇ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬನ್ನೇರುಘಟ್ಟದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಏನಿದು ಘಟನೆ:
ಪತ್ನಿ ಮಾಡಿದ ಕಬಾಬ್ ಟೇಸ್ಟ್ ಇಲ್ಲ ಅಂತಾ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಪತಿರಾಯ! 42 ವರ್ಷದ ಸುರೇಶ್ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿದ್ದ. ಕಬಾಬ್ ತಿನ್ನೋ ಆಸೆಯಾಗಿದೆ. ಹೆಂಡತಿ ಶಾಲಿನಿಗೆ ಕಬಾಬ್ ಮಾಡಲು ಹೇಳಿದ್ದಾನೆ. ಅವಳೋ ತನಗೆ ತಿಳಿದಹಾಗೆ ಕಬಾಬ್ ಮಾಡಿಕೊಟ್ಟಿದ್ದಾಳೆ. ಕಬಾಬ್ ಟೇಸ್ಟೇ ಇಲ್ಲ ಅಂತಾ ಹೆಂಡತಿಗೆ ರೋಲ್‌ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇದರಿಂದ ಅಸ್ವಸ್ಥಗೊಂಡ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಗಂಡನ ಹಲ್ಲೆ ವಿರುದ್ಧ ಪೊಲೀಸ್ ದೂರು ಕೊಟ್ಟಿದ್ದಾಳೆ. ದೂರು ದಾಖಲಿಸಿಕೊಂಡ ಬನ್ನೇರುಘಟ್ಟ ಪೊಲೀಸರು ಸುರೇಶ್‌ನಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಸುರೇಶನ ಮೃತದೇಹ ಪತ್ತೆಯಾಗಿದೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಹೊಲಕ್ಕೆ ಹೋಗುವ ವಿಚಾರದಲ್ಲಿ ಜಗಳ: ಯುವತಿ ಆತ್ಮಹತ್ಯೆ
ಇದು ವಿಚಿತ್ರ ಅನಿಸಬಹುದು, ಕಬಾಬ್ ಟೇಸ್ಟ್ ಇಲ್ಲಂದ್ರೆ ಇನ್ನೊಮ್ಮೆ ಮಾಡಿಸಿಕೊಂಡು ತಿಂದ್ರಾಯ್ತಲ್ಲ, ಹೋಟೆಲ್‌ಗೆ ಹೋಗಿ ತಿಂದು ಬಂದ್ರೆ ಆಯ್ತಲ್ಲ ಅಂತಾ ಅಷ್ಟಕ್ಕೆ ಸಾಯುವಂಥದ್ದು ಏನು ಬಂದಿದೆ? ಅಂತಾ ಬೈಯ್ದುಕೊಳ್ಳಬಹುದು. ಆದರೆ ಇಂದಿನ ಯುವ ಜನಾಂಗದಲ್ಲಿ ಒತ್ತಡದ ಜೀವನದಿಂದ ಸಣ್ಣಪುಟ್ಟ ಕಾರಣಗಳಿಗೂ ಆತ್ಮಹತ್ಯೆ ಮಾಡಿಕೊಳ್ಳುವ ಮಾನಸಿಕತೆ ಹೆಚ್ಚುತ್ತಿರುವುದು ಅಪಾಯಕಾರಿಯಾಗಿದೆ.
ಮಾಗಡಿಯಲ್ಲಿ ಇಂಥದ್ದೇ ಇನ್ನೊಂದು ಘಟನೆ ನಡೆದಿತ್ತು:
ಅಡುಗೆ ಚೆನ್ನಾಗಿಲ್ಲವೆಂಬ ವಿಚಾರಕ್ಕೆ ಜಗಳವಾಡಿ ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ರಾಮನಗರ(Ramanagara) ಜಿಲ್ಲೆಯ ದಮ್ಮನಕಟ್ಟೆ ಗ್ರಾಮದಲ್ಲಿ ನಡೆದಿತ್ತು.. ಸಿದ್ದಮ್ಮ (55) ಈಕೆಯ ಪುತ್ರಿ ಸುಮಿತ್ರಾ (30), ಸುಮೀತಾಳ ಪತಿ ಹನುಮಂತರಾಜು (35) ಆತ್ಮಹತ್ಯೆ ಮಾಡಿಕೊಂಡವರು.. ಅಕ್ಕ ಸಿದ್ದಮ್ಮನ ಮಗಳಾದ ಸುಮಿತ್ರಾಳನ್ನು ವಿವಾಹವಾಗಿ ಅಕ್ಕನ ಮನೆಯಲ್ಲೇ ತಂಗಿದ್ದ ಹನುಮಂತರಾಜು ರಾತ್ರಿ ಕುಡಿದು ಬಂದು ಅಡುಗೆ ಚೆನ್ನಾಗಿಲ್ಲ ಎಂದು ಜಗಳ ತೆಗೆದಿದ್ದಾನೆ. ಈ ವೇಳೆ ಮನನೊಂದು ಸಿದ್ದಮ್ಮ ಕೆರೆಗೆ(Lake) ಹಾರಿದ್ದಳು..!
ತಾಯಿಯಾಗೋ ಕನಸು ಕಂಡಿದ್ದ ಮಹಿಳೆ ಜೀವನದಲ್ಲಿ ವಿಧಿಯಾಟ: ಒಂದೇ ದಿನ ತಾಯಿ-ಮಗು ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ