Murugha Seer Police Custody ಮುರುಘಾ ಶ್ರೀ ರಕ್ಷಿಸುವ ಪ್ಲಾನ್ ಉಲ್ಟಾ, ಚಿತ್ರದುರ್ಗ ಕೋರ್ಟ್‌ನಲ್ಲಿ ನಡೆದಿದ್ದೇನು?

By Suvarna NewsFirst Published Sep 2, 2022, 9:31 PM IST
Highlights

ಮರುಘಾ ಮಠದ ಶ್ರೀಗಳನ್ನು ಬಂಧನದಿಂದ ರಕ್ಷಿಸಲು ಆಸ್ಪತ್ರೆ ಪ್ಲಾನ್ ಮಾಡಲಾಗಿತ್ತಾ?  ಸ್ವತಃ ಶ್ರೀಗಳನ್ನು ಹಾಗೂ ವೈದ್ಯರು ಕೋರ್ಟ್‌ಗೆ ಹಾಜರಾಗಲು ಹೇಳಿದ ನ್ಯಾಯಾಧೀಶರು ಯಾವುದೇ ಹೈಡ್ರಾಮಕ್ಕೆ ಅವಕಾಶ ನೀಡದೆ ಶ್ರೀಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಈ ಕುರಿತು ಚಿತ್ರುದುರ್ಗದ ಕೋರ್ಟ್‌ನಲ್ಲಿ  ನಡೆದೆ ಇಂಚಿಂಚು ವಾದ ವಿವಾದ ಇಲ್ಲಿದೆ.

ಚಿತ್ರದುರ್ಗ(ಸೆ.02): ಹಾಸ್ಟೆಲ್ ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿಯನ್ನು ಇಂದು ಚಿತ್ರದುರ್ಗ ಕೋರ್ಟ್ ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ. ನಿನ್ನೆ(ಸೆ.01) ಮುರುಘಾ ಶ್ರೀಗಳನ್ನು ಪೊಲೀಸರು ಬಂಧಿಸಿದ್ದರು. ಬಳಿಕ ತಡರಾತ್ರಿ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದರು. ಇಂದು ಬೆಳಗ್ಗೆ ತೀವ್ರ ಅನಾರೋಗ್ಯ ಎಂಬ ಕಾರಣಕ್ಕೆ ಆಸ್ಪತ್ರೆ ದಾಖಲಿಸಲಾಗಿತ್ತು. ಬಳಿಕ ಅಲ್ಲಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸುವ ಪ್ಲಾನ್ ಕೂಡ ಸಜ್ಜಾಗಿತ್ತು. ಆದರೆ ಚಿತ್ರದುರ್ಗ ಕೋರ್ಟ್‌ನ ನ್ಯಾಯಾಧೀಶೆ ಕೋಮಲ ಈ ಎಲ್ಲಾ ಪ್ಲಾನ್‌ಗೆ ಬ್ರೇಕ್ ಹಾಕಿ, ಶ್ರೀಗಳನ್ನು ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ಈ ಕುರಿತು ಚಿತ್ರದುರ್ಗ ಕೋರ್ಟ್‌ನಲ್ಲಿ ನಡೆದ ಇಂಚಿಂಚು ಮಾಹಿತಿ ಇಲ್ಲಿದೆ

ಚಿತ್ರದುರ್ಗದ ಪೊಲೀಸರಿಂದ 5 ದಿನ ಕಸ್ಟಡಿಗೆ ಕೋರಿ ಅರ್ಜಿ

ನ್ಯಾ. ಕೋಮಲಾ : ಈ ಕೇಸ್​ನ ಆರೋಪಿ ಎಲ್ಲಿ..?
 
ತನಿಖಾಧಿಕಾರಿ : ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

ನ್ಯಾ. ಕೋಮಲಾ : ಆಸ್ಪತ್ರೆಗೆ ಹೇಗೆ ಹೋದರು..? ನಾನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದೆ

ತನಿಖಾಧಿಕಾರಿ : ಎದೆನೋವಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದೆ ಆರೋಪಿಗೆ ಗಂಭೀರ ಆರೋಗ್ಯ ಸಮಸ್ಯೆ ಇದೆ ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನ್ಯಾ. ಕೋಮಲಾ : ಕೋರ್ಟ್ ಅನುಮತಿಯಿಲ್ಲದೇ ಹೇಗೆ ಜೈಲಿಂದ ಹೊರ ಕರೆತಂದಿರಿ..? ಕರೆತಂದ ನಂತರವಾದರೂ ಕೋರ್ಟ್ ಗಮನಕ್ಕೆ ತಂದಿಲ್ಲ ಯಾಕೆ..? 

ನ್ಯಾ. ಕೋಮಲಾ : ವೈದ್ಯಕೀಯ ವರದಿಯೊಂದಿಗೆ ವೈದ್ಯರನ್ನ ಕೋರ್ಟ್​ಗೆ ಕರೆತನ್ನಿ

ಶ್ರೀಗಳ ರಕ್ಷಣೆಗೆ ಪೊಲೀಸರಿಂದಲೇ ನಡೆದಿತ್ತಾ ಹೈಡ್ರಾಮಾ? ತನಿಖೆಯಲ್ಲಿ ವೈಫಲ್ಯದ ವಾಸನೆ!
 
ಕೋರ್ಟ್​ಗೆ ವೈದ್ಯಕೀಯ ವರದಿಯೊಂದಿಗೆ ಹಾಜರಾದ ಜಿಲ್ಲಾಸ್ಪತ್ರೆ ವೈದ್ಯ ವೈದ್ಯಕೀಯ ವರದಿ ನೋಡಿ ತೃಪ್ತರಾಗದ ನ್ಯಾಯಾಧೀಶೆ ಕೋಮಲ
 
ನ್ಯಾ. ಕೋಮಲಾ : ಆರೋಪಿಯನ್ನ ಕೋರ್ಟ್ ಮುಂದೆ ಹಾಜರುಪಡಿಸಿ

ತನಿಖಾಧಿಕಾರಿ : ಆರೋಪಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗುವುದು 

ನ್ಯಾ. ಕೋಮಲಾ : ಆರೋಪಿಯನ್ನು ಖುದ್ದು ಕೋರ್ಟ್​ ಮುಂದೆ ಹಾಜರುಪಡಿಸಿ ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ಕರೆತನ್ನಿ 
 
ನ್ಯಾಯಾಧೀಶರ ಮುಂದೆ ಕಟಕಟೆಯಲ್ಲಿ ನಿಂತು ಮುರುಘಾ ಕಣ್ಣೀರು 
ಶ್ರೀಗಳ ಪರವಾಗಿ ಕೋರ್ಟ್​ಗೆ ಹಾಜರಾಗಿದ್ದ ವಕೀಲರ ತಂಡ, ಶ್ರೀಗಳ ಅನಾರೋಗ್ಯದ ಬಗ್ಗೆ ನ್ಯಾಯಾಧೀಶರ ಮುಂದೆ ಬಾಯ್ಬಿಡದ ವಕೀಲರು
 
ತನಿಖಾಧಿಕಾರಿ : ಆರೋಪಿಯನ್ನು 5 ದಿನ ನಮ್ಮ ವಶಕ್ಕೆ ನೀಡಿ

ನ್ಯಾ. ಕೋಮಲಾ : ಸೆ.5ರವರೆಗೆ ಆರೋಪಿ ಪೊಲೀಸ್ ಕಸ್ಟಡಿಗೆ ಚಿಕಿತ್ಸೆ ಅಗತ್ಯವಿದ್ದರೆ ಕೊಡಿಸಿ ಎಂದ ಕೋರ್ಟ್

ಮರುಘಾ ಶ್ರೀಗಳಿಗೆ ಮತ್ತೊಂದು ಶಾಕ್, ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್!

ಮುರುಘಾ ಶ್ರೀ ಪ್ರಕರಣದ 2 ನೇ ಆರೋಪಿ ಶಿವಮೊಗ್ಗ ಜೈಲಿಗೆ ಶಿಫ್ಟ್..!
ಪೋಕ್ಸೋ ಕಾಯ್ದೆಯಡಿ ಅರೆಸ್ಟ್ ಆಗಿರುವ 2ನೇ ಆರೋಪಿ ಹಾಸ್ಟೆಲ್ ವಾರ್ಡನ್ ರಶ್ಮಿ ಶಿವಮೊಗ್ಗ ಜೈಲಿಗೆ ಕರೆತರುವ ಸಾಧ್ಯತೆ ಇದೆ. ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಎಸಗಿರುವ ಮುರುಘಾ ಶ್ರೀ ಶಿವಮೂರ್ತಿ ಸ್ವಾಮೀಜಿಗಳ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಈ ಪ್ರಕರಣದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಹಕಾರ ನೀಡಿದ ಆರೋಪದಡಿ ಬಂಧಿತರಾಗಿರುವ  ವಾರ್ಡನ್ ರಶ್ಮಗೆ 14 ನ್ಯಾಯಾಂಗ ಬಂಧನ ವಿಧಿಸಲಾಗಿದೆ.  ಚಿತ್ರದುರ್ಗದಲ್ಲಿ ಮಹಿಳಾ ಬಂಧಿಕಾನೆ ಇಲ್ಲದಿರುವುದರಿಂದ ಶಿವಮೊಗ್ಗದ ಮಹಿಳಾ ಬಂಧಿಖಾನೆಗೆ ಶಿಫ್ಟ್ ಮಾಡಲು ಸಿದ್ದತೆ ನಡೆದಿದೆ. ಚಿತ್ರದುರ್ಗದಿಂದ ಮಧ್ಯರಾತ್ರಿಯ ವೇಳೆಗೆ ಶಿವಮೊಗ್ಗದ ಸೋಗಾನೆ ಕೇಂದ್ರ ಕಾರಾಗೃಹಕ್ಕೆ  ವಿಚಾರಾಣಾಧೀನ ಖೈದಿ ರಶ್ಮಿಯನ್ನು ಕರೆ ತರಲು ತಯಾರಿ ಮಾಡಲಾಗಿದೆ.

click me!