Bengaluru; ತರಗತಿಯಲ್ಲಿ ಬಾಲಕಿಯ ಪ್ಯಾಂಟ್‌ ಎಳೆದ ಶಿಕ್ಷಕಿ ವಿರುದ್ಧ ಕ್ರಿಮಿನಲ್‌ ಕೇಸ್‌

By Suvarna News  |  First Published Aug 12, 2022, 5:33 PM IST

ಬೆಂಗಳೂರಿನ ಖಾಸಗಿ ಶಾಲೆಯೊಂದರ ನರ್ಸರಿ ತರಗತಿಯ ಐದು ವರ್ಷದ ಬಾಲಕಿಯ ಪ್ಯಾಂಟ್‌ ಎಳೆದು ಇತರೆ ಮಕ್ಕಳ ಮುಂದೆ ಮುಜುಗರ ಉಂಟು ಮಾಡಿದ ಶಿಕ್ಷಕಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಚ್‌ ನಿರಾಕರಿಸಿದೆ. 


ಬೆಂಗಳೂರು (ಅ.12): ನಗರದ ಖಾಸಗಿ ಶಾಲೆಯೊಂದರ ನರ್ಸರಿ ತರಗತಿಯ ಐದು ವರ್ಷದ ಬಾಲಕಿಯ ಪ್ಯಾಂಟ್‌ ಎಳೆದು ಇತರೆ ಮಕ್ಕಳ ಮುಂದೆ ಮುಜುಗರ ಉಂಟು ಮಾಡಿದ ಶಿಕ್ಷಕಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಚ್‌ ನಿರಾಕರಿಸಿದೆ. ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ 41 ವರ್ಷದ ಶಿಕ್ಷಕಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕ ಸದಸ್ಯ ಪೀಠ ಆದೇಶಿಸಿದೆ. ಆರೋಪಿ ಶಿಕ್ಷಕಿ ಆರಂಭದಲ್ಲಿ ಮಗುವಿಗೆ ಥಳಿಸುತ್ತಿದ್ದರು. ನಂತರ ಮಗುವಿನ ಪ್ಯಾಂಟನ್ನು ಕೆಳಕ್ಕೆ ಎಳೆಯಲು ಇತರೆ ಮಕ್ಕಳ ಮುಂದೆ ನಿಲ್ಲಿಸಿದ್ದರು. ನಾಯಿಯನ್ನು ಸಾಕಿರುವ ಕತ್ತಲ ಕೋಣೆಯಲ್ಲಿ ಕೂಡಿ ಹಾಕುವುದಾಗಿ ಹೇಳಿ ಮಕ್ಕಳನ್ನು ಬೆದರಿಸಿದ್ದರು. ಈ ಕುರಿತು ಬಾಲಕಿ ತನ್ನ ಪೋಷಕರ ಗಮನಕ್ಕೆ ತಂದಿದ್ದರು. ಸಂತ್ರಸ್ತ ಮಗುವಿನ ತಾಯಿ 2017ರಲ್ಲಿ ಹಲಸೂರು ಠಾಣೆಯಲ್ಲಿ ಶಿಕ್ಷಕಿ ವಿರುದ್ಧ ದೂರು ನೀಡಿದ್ದರು. ಅದನ್ನು ಆಧರಿಸಿ ಪೊಲೀಸರು, ಲೈಂಗಿಕ ಅಪರಾಧಗಳಿಂದ ಮಕ್ಕಳ ತಡೆ ಕಾಯ್ದೆ (ಪೋಕ್ಸೋ)-2012  ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆ ನಂತರ ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿಯನ್ನೂ ಸಹ ಸಲ್ಲಿಸಿದ್ದರು. ಹಾಗಾಗಿ, ತನ್ನ ವಿರುದ್ಧದ ಪ್ರಕರಣ ರದ್ದು ಕೋರಿ ಶಿಕ್ಷಕಿ ಹೈಕೋರ್ಚ್‌ ಮೆಟ್ಟಿಲೇರಿದ್ದರು.

ಇತರರ ಮುಂದೆ ದೇಹ ಅಂಗ, ಪ್ರದರ್ಶನಕ್ಕೆ ಹೇಳಿದರೆ ದೌರ್ಜನ್ಯ: ಪ್ರಕರಣ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಚ್‌, ಒಬ್ಬ ವ್ಯಕ್ತಿ ತನ್ನ ದೇಹವನ್ನು ಅಥವಾ ಅವನ/ಅವಳ ದೇಹದ ಯಾವುದೇ ಭಾಗವನ್ನು ಇತರರಿಗೆ ಪ್ರದರ್ಶಿಸುವಂತೆ ಹೇಳಿದರೆ ಅದು ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯವಾಗುತ್ತದೆ ಮತ್ತು ಅಪರಾಧವಾಗುತ್ತದೆ. ಪ್ರಕರಣದಲ್ಲಿ ಶಿಕ್ಷಕಿ ಬಾಲಕಿಯ ಪ್ಯಾಂಟನ್ನು ಇತರೆ ಮಕ್ಕಳ ಮುಂದೆ ಎಳೆದು ಆ ಮಗು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದ್ದಾರೆ.

Tap to resize

Latest Videos

Job Alert: ಮದ್ರಾಸ್ ಐಐಟಿ ವಿದ್ಯಾರ್ಥಿಗಳಿಗೆ ಬಂಪರ್ ಜಾಬ್ ಆಫರ್ಸ್!

ಎಳೆಯ ವಯಸ್ಸಿನಲ್ಲಿಯೇ ಮಕ್ಕಳನ್ನು ಈ ರೀತಿ ನಡೆಸಿಕೊಳ್ಳುವ ಆಘಾತ ಉಂಟು ಮಾಡಿದೆ. ಜತೆಗೆ, ಮಗುವಿನ ಮನಸ್ಥಿತಿ ಮೇಲೆ ದೀರ್ಘಕಾಲಿನ ಹಾಗೂ ಗಂಭೀರ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಶಿಕ್ಷಕರು ಮಕ್ಕಳಿಗೆ ಹಿಂಸೆ ನೀಡಿದರೆ ಅದು ಅವರ ಶೈಕ್ಷಣಿಕದ ಮೇಲೆ ಋುಣಾತ್ಮಕ ಪರಿಣಾಮ ಬೀರುತ್ತವೆ. ಮಗುವಿನ ಮೇಲೆ ಯಾವುದೇ ಶಿಕ್ಷಕರ ದಾಳಿ ಕ್ಷಮಿಸಲಾಗದು.

ವಾಟ್ಸಾಪ್‌ಗೆ ಬರಲಿದೆ ಕರ್ನಾಟಕ ಮುಕ್ತ ವಿವಿ ಪರೀಕ್ಷಾ ಫಲಿತಾಂಶ

ಐದು ವರ್ಷ ವಯಸ್ಸಿನ ಹೆಣ್ಣು ಮಗುವಿನೊಂದಿಗೆ ವ್ಯವಹರಿಸುವಾಗ ಶಿಕ್ಷಕರು ಜಾಗರೂಕರಾಗಿರಬೇಕಾಗುತ್ತದೆ. ಶಿಕ್ಷಕರು ಕೋಲನ್ನು ಬಿಟ್ಟು ಮಗುವಿಗೆ ಕಲಿಸಲು ಮುಂದಾಗಬೇಕು. ಇದನ್ನು ಪ್ರತಿಯೊಬ್ಬ ಶಿಕ್ಷಕರು ಸಹ ನೆನಪಿನಲ್ಲಿಡಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

click me!