
ಬೆಂಗಳೂರು (ಆ. 12): ನಕಲಿ ನೋಂದಣಿ ಫಲಕ ಅಳವಡಿಸಿಕೊಂಡು ಸಂಚಾರ ನಿಯಮ ಉಲ್ಲಂಘಿಸಿದ ಆರೋಪದಡಿ ದ್ವಿಚಕ್ರ ವಾಹನ ಮಾಲಿಕನನ್ನು ಪೊಲೀಸರು ಬಂಧಿಸಿದ್ದಾರೆ. ಮಾಗಡಿ ರಸ್ತೆ ಸಂಚಾರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಚೋಳರಪಾಳ್ಯ ನಿವಾಸಿ ರಾಮಗೋಪಾಲ್ ಬಂಧಿತ ಆರೋಪಿ. ಆರೋಪಿ ಕಳೆದ ಹತ್ತು ವರ್ಷಗಳಿಂದ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಗಾಡಿ ಚಲಾಯಿಸುತ್ತಿದ್ದ ಎನ್ನಲಾಗಿದೆ. ಆರೋಪಿ ಬದ್ರಿನಾಥ್ ಎಂಬುವರ ಬೈಕಿನ ನಂಬರ್ ಪ್ಲೇಟ್ ಬಳಸಿ ವಂಚಿಸಿದ್ದಾನೆ. ಆರೋಪಿ ಬದ್ರಿನಾಥ್‌ರ ಬೈಕ್ ಸೇಮ್ ಮಾಡೆಲ್, ಕಲರ್ ಬೈಕ್ ಬಳಸಿ ನಂಬರ್ ಪ್ಲೇಟ್ ಅಳವಡಿಸಿದ್ದ.
ನಂತರ ಆರೋಪಿ ಎಲ್ಲಂದರಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿದ್ದ. ರಾಮಗೋಪಾಲ್ ಮಾಡಿದ ಟ್ರಾಫಿಕ್ ವೈಲೆನ್ಸ್ ಫೈನ್ ಬದ್ರಿತನಾಥ್ ಅವರ ಗಾಡಿಗೆ ಹೋಗುತಿತ್ತು. ಈ ಸಂಬಂಧ ಸಂಚಾರಿ ಪೊಲೀಸರು ಬದ್ರಿನಾಥ್‌ಗೆ ನೊಟೀಸ್ ನೀಡಿದ್ದರು. ನೊಟೀಸ್ ಹಿನ್ನೆಲೆ ಬದ್ರಿನಾಥ್ 11 ಸಾವಿರ ದಂಡ ಕಟ್ಟಿದ್ದರು. ತಾವು ಮಾಡದ ತಪ್ಪಿಗೆ ಬದ್ರಿನಾಥ್ ದಂಡ ಕಟ್ಟಿದ್ದರು. ಮಾಗಡಿ ರಸ್ತೆ ಸಂಚಾರಿ ಪೊಲೀಸರ ತಪಾಸಣೆ ವೇಳೆ ಬದ್ರಿನಾಥ್ ಬೈಕ್ ರೀತಿಯ ಬೈಕನ್ನು ಇತ್ತೀಚೆಗೆ ಹಿಡಿದಿದ್ದರು.
ಈ ವೇಳೆ ತಪಾಸಣೆ ನಡೆಸಿದಾಗ ನಕಲಿ ನಂಬರ್ ಅಳವಡಿಕೆಯಾಗಿರೋದು ಪತ್ತೆಯಾಗಿದೆ. ಕೂಡಲೆ ಸವಾರನನ್ನು ತನಿಖೆ ನಡೆಸಿದಾಗ ವಂಚನೆ ಬೆಳಕಿಗೆ ಬಂದಿದೆ. 2016ರಲ್ಲೂ ತನ್ನ ಬೈಕ್ ಕಳೆದು ಹೋಗಿದೆ ಎಂದು ಆರೋಪಿ.. ಸ್ಥಳೀಯ ಠಾಣೆಗೆ ದೂರು ನೀಡಿದ್ದ. ಅಲ್ಲದೇ ಈ ಸಂಬಂಧ ಬೈಕ್ ಇನ್ಸುರೆನ್ಸ್ ಕ್ಲೈಮ್ ಮಾಡಿಕೊಂಡಿದ್ದ.
2018ರಲ್ಲಿ ಬೈಕ್ ಸಿಕ್ಕ ಬಳಿಕ ನಕಲಿ ನಂಬರ್ ಪ್ಲೇಟ್ ಬಳಸಿ ಸಂಚಾರಿ ನಿಯಮ ಉಲ್ಲಂಘನೆ.. ಸದ್ಯ ಆರೋಪಿಯನ್ನ ಬಂಧಿಸಿರುವ ಮಾಗಡಿ ರಸ್ತೆ ಸಂಚಾರಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಮಾಗಡಿ ರಸ್ತೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ಪಾಸ್ ಪೋರ್ಟ್ ಸೃಷ್ಟಿಸಿ ಮಾನವ ಕಳ್ಳ ಸಾಗಣೆ, ಉಗಾಂಡಾ ಪ್ರಜೆ ಗಡಿಪಾರಿಗೆ ಆದೇಶ
ನಕಲಿ ನಂಬರ್ ಪ್ಲೇಟ್ ಅಳವಡಿಸಿ 55 ಬಾರಿ ನಿಯಮ ಉಲ್ಲಂಘನೆ: ಇನ್ನು ಇದೇ ರೀತಿ ನಕಲಿ ನೋಂದಣಿ ಫಲಕ ಅಳವಡಿಸಿಕೊಂಡು ಟ್ರಾಫಿಕ್ ನಿಯಮ ಉಲ್ಲಂಘಿಸಿದ ಆರೋಪದಡಿ ದ್ವಿಚಕ್ರ ವಾಹನ ಮಾಲಿಕನ ಪೊಲೀಸರು ಕ್ರಮ ಕೈಗೊಂಡಿದ್ದರು. ಪಟ್ಟೇಗಾರಪಾಳ್ಯ ನಿವಾಸಿ ದ್ವಿಚಕ್ರ ವಾಹನದ ಮಾಲಿಕ ನಿಖಿಲ್ ವಿರುದ್ಧ ಜುಲೈನಲ್ಲಿ ಎಫ್‌ಐಆರ್ ದಾಖಲಾಗಿತ್ತು
ಆರೋಪಿ ನಂಬರ್ ಪ್ಲೇಟ್ ಪರಿಶೀಲಿಸಿದಾಗ ಕೆಎ-02 ಜೆ 938 ಎಂದು ನಮೂದಿಸಲಾಗಿತ್ತು. ಈ ಸಂಖ್ಯೆ ಬಗ್ಗೆ ಅನುಮಾನಗೊಂಡು ದ್ವಿಚಕ್ರ ವಾಹನದ ಎಂಜಿನ್ ಹಾಗೂ ಚಾಸಿ ಸಂಖ್ಯೆ ಪರಿಶೀಲಿಸಿದಾಗ ದ್ವಿಚಕ್ರ ವಾಹನದ ಅಸಲಿ ನೋಂದಣಿ ಸಂಖ್ಯೆ ಕೆಎ-02 ಜೆಜಿ 9381 ಎಂಬುದು ತಿಳಿದು ಬಂದಿದೆ. ಹೀಗಾಗಿ ವಾಹನದ ಮಾಲಿಕ ಹಾಗೂ ಸವಾರನ ವಿರುದ್ಧ ಕ್ರಮ ವಿಜಯನಗರ ಠಾಣೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ