Bengaluru: ಬಿಬಿಎಂಪಿಯ ಕನ್ನಡತಿ ವೈದ್ಯೆಯ ಮೇಲೆ ಮಲೆಯಾಳಿ ಯುವತಿಯ ಹಲ್ಲೆ: ಕನ್ನಡಕ್ಕೆ ಅಪಮಾನ

Published : Jan 12, 2023, 11:03 PM ISTUpdated : Jan 12, 2023, 11:13 PM IST
Bengaluru:  ಬಿಬಿಎಂಪಿಯ ಕನ್ನಡತಿ ವೈದ್ಯೆಯ ಮೇಲೆ ಮಲೆಯಾಳಿ ಯುವತಿಯ ಹಲ್ಲೆ: ಕನ್ನಡಕ್ಕೆ ಅಪಮಾನ

ಸಾರಾಂಶ

ಕೇರಳ ಮೂಲದ ಮಲೆಯಾಳಿ ಯುವತಿಯಿಂದ ಬಿಬಿಎಂಪಿ ವೈದ್ಯೆಯಾಗಿರುವ ಕನ್ನಡತಿ ಡಾ.ಸೃಷ್ಟಿಯ ಮೇಲೆ ರಾತ್ರೋ ರಾತ್ರಿ ಹಲ್ಲೆ ಮಾಡಿರುವ ಘಟನೆಯೊಂದು ಬಿಟಿಎಂ ಲೇಔಟ್‌ನ ಮಹಿಳಾ ಪೇಯಿಂಗ್‌ ಗೆಸ್ಟ್ (ಪಿಜಿ) ನಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿದೆ. 

ಬೆಂಗಳೂರು (ಜ.12): ಕೇರಳ ಮೂಲದ ಮಲೆಯಾಳಿ ಯುವತಿಯಿಂದ ಬಿಬಿಎಂಪಿ ವೈದ್ಯೆಯಾಗಿರುವ ಕನ್ನಡತಿ ಡಾ.ಸೃಷ್ಟಿಯ ಮೇಲೆ ರಾತ್ರೋ ರಾತ್ರಿ ಹಲ್ಲೆ ಮಾಡಿರುವ ಘಟನೆಯೊಂದು ಬಿಟಿಎಂ ಲೇಔಟ್‌ನ ಮಹಿಳಾ ಪೇಯಿಂಗ್‌ ಗೆಸ್ಟ್ (ಪಿಜಿ) ನಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿದೆ. ಹಲ್ಲೆಗೊಳಗಾದ ನಂತರ ವೈದ್ಯೆ ರಾತ್ರಿ ವೇಳೆ ಅಳುತ್ತಾ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದಾಳೆ.

ಬಿಟಿಎಂ ಲೇಔಟ್‌ನ ಪಿಜಿಯೊಂದರಲ್ಲಿ ಜನವರಿ 10ರ ತಡರಾತ್ರಿ ನಡೆದಿರುವ ಘಟನೆಯಾಗಿದೆ. ಮಧ್ಯರಾತ್ರಿಯ ವೇಲೆ ಕೇರಳ ಮೂಲದ ಯುವತಿಯು ಬಿಬಿಎಂಪಿಯಲ್ಲಿ ವೈದ್ಯೆಯಾಗಿ ಕೆಲಸ ಮಾಡುವ ಡಾ. ಸೃಷ್ಟಿ ಅವರಿಗೆ ಥಳಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆ ಮಾಡಿದ ಯುವತಿ ಹೆಸರು ಅಶೀಲ ಆಗಿದ್ದು, ಇಂದಿರಾ ನಗರ ಖಾಸಗಿ ಕಂಪೆನಿಯಲ್ಲಿ ಹೆಚ್.ಆರ್.ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಇನ್ನು ಹಲ್ಲೆಗೊಳಗಾದ ಕನ್ನಡದ ಯುವತಿ ಡಾ.ಸೃಷ್ಟಿ ಬಿಬಿಎಂಪಿ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ.

ಸಿದ್ದರಾಮಯ್ಯ ಲೀಡರ್‌ ಆಗುವ ಭ್ರಮೆ ಬಿಡಲಿ: ಕೆ.ಎಸ್‌.ಈಶ್ವರಪ್ಪ ಲೇವಡಿ

ಕನ್ನಡ ಭಾಷಿಕರ ನಿಂದನೆ ಎಂಬ ಆರೋಪ: ಇನ್ನು ರಾತ್ರಿ ಜಗಳವಾರ ನಂತರ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಡಾ. ಸೃಷ್ಟಿ ಕನ್ನಡ ಭಾಷಿಕರ ಬಗ್ಗೆ ನಿಂದಿಸಲಾಗಿದೆ ಎಂದು ಆರೋಪ ಮಾಡಿದ್ದಾಳೆ. ಇನ್ನು ಘಟನೆ ಕುರಿತು ನೊಂದ ಯುವತಿ ಡಾ.ಸೃಷ್ಟಿ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗೆ ಅಪ್ಲೋಡ್‌ ಮಾಡಿದ್ದಾಳೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕುರಿತು ಮೈಕೋಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ದೂರು ದಾಖಲು ಆಗಿದೆ.

ವೈದ್ಯೆಯ ದೂರಿನ ಪತ್ರದಲ್ಲಿದೆ ಸತ್ಯ: ಇನ್ನು ಮೈಕೋ ಲೇಔಟ್‌ಗೆ ದೂರು ದಾಖಲಿಸಿರುವ ಬಿಬಿಎಂಪಿ ವೈದ್ಯೆ ಡಾ. ಸೃಷ್ಟಿ ಅವರು, ನನ್ನ ರೂಮ್‌ಮೇಟ್‌ ಆಗಿರುವ ಕೇರಳ ಮೂಲದ ಯುವತಿ ತಡರಾತ್ರಿವರೆಗೂ ವೀಡಿಯೋ ಕಾಲ್‌ನಲ್ಲಿ ಜೋರಾಗಿ ಮಾತನಾಡುತ್ತಾಳೆ. ಅವಳು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಹೆಚ್ಚಿನ ಕೆಲಸದ ಹೊರೆ ಇರುವುದಿಲ್ಲ. ಆದರೆ, ನಾನು ಬಿಬಿಎಂಪಿಯಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದು, ಬೆಳಗ್ಗೆ 8 ಗಂಟೆಯಿಂದ ಸಂಜೆ 9.30ರವರೆಗೆ ಕೆಲಸ ಮಾಡಬೇಕಾಗುತ್ತದೆ. 

Mandya: ಇಬ್ರಾಹಿಂರಿಂದಲೇ ಜೆಡಿಎಸ್‌ ಅವನತಿ: ಸಿ.ಪಿ.ಯೋಗೇಶ್ವರ್‌

ನಾನು ಪ್ರತಿದಿನ 11 ಗಂಟೆಗೆ ಮಲಗುತ್ತೇನೆ. ಆದರೆ, ನನ್ನ ರೂಮೇಟ್‌ ತಡರಾತ್ರಿವರೆಗೂ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಾ ನಿದ್ದೆ ಹಾಳು ಮಾಡಿದ್ದಾಳೆ. ಮೊನ್ನೆ ರಾತ್ರಿ (ಜ.10) ಕೂಡ ತಡರಾತ್ರಿ 2 ರಿಂದ 3 ಗಂಟೆವರೆಗೆ ಜೋರಾಗಿ ಮಾತನಾಡುತ್ತಿದ್ದು, ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾಳೆ. ಈ ವೇಳೆ ಕನ್ನಡ ಭಾಷಿಕರ ಮೇಲೆಯೂ ಅವಹೇಳನ ಮಾಡಿದ್ದಾಳೆ ಎಂದು ಆರೋಪ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ