
ಧಾರವಾಡ(ಫೆ.15): ನಗರದ ಡಿಪೋ ವೃತ್ತದ ಮನೆಯೊಂದರಲ್ಲಿ ನಡೆದ ಜಗಳದಲ್ಲಿ ಯುವಕನೋರ್ವ ಕೊಲೆಯಾದ ಘಟನೆ ಭಾನುವಾರ ಸಂಭವಿಸಿದೆ.
ಆಕಾಶ ಕೋಟೂರ (26) ಕೊಲೆಯಾದ ಯುವಕ. ಯುವಕನ ಚಿಕ್ಕಪ್ಪ ಪ್ರಕಾಶ ಕೋಟೂರ ಎಂಬಾತ ಕೊಲೆ ಮಾಡಿದ್ದಾನೆ. ಆಕಾಶ ಆಗಾಗ ಮನೆಯಲ್ಲಿ ಮದ್ಯ ಸೇವನೆ ಮಾಡಿ ಬಂದು ಕಿರಿಕಿರಿ ಮಾಡುತ್ತಿದ್ದ. ಅದೇ ರೀತಿ ಭಾನುವಾರವೂ ಮದ್ಯ ಸೇವನೆ ಮಾಡಿ ಬಂದು ಮನೆಯಲ್ಲಿ ಜಗಳ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಪ್ರಕಾಶ, ಆಕಾಶ ತಲೆಗೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ತೀವ್ರ ಗಾಯಗೊಂಡ ಆಕಾಶ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬೈಕ್ ಹಿಂಬದಿ ಸೀಟಿನಲ್ಲೇ ಯಮರಾಜ... ಕೊಲೆ ಮಾಡಿಸಿದ ಗ್ರಾಪಂ ಜಿದ್ದು
ಘಟನೆ ಮಾಹಿತಿ ತಿಳಿದ ಡಿಸಿಪಿ ಕೆ. ರಾಮರಾಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಸುದ್ದಿಗಾರೊಂದಿಗೆ ಮಾತನಾಡಿ, ಕುಟುಂಬದ ಜಗಳಕ್ಕಾಗಿ ಚಿಕ್ಕಪ್ಪ ಪ್ರಕಾಶ ಕೊಲೆ ಮಾಡಿ ನಾಪತ್ತೆಯಾಗಿದ್ದಾನೆ. ಪ್ರಕಾಶ ಅವರ ಶೋಧ ಕಾರ್ಯ ನಡೆದಿದೆ. ಕೊಲೆ ಹಿಂದೆ ಏನಾದರೂ ಬೇರೆ ಕಾರಣವಿದೆಯೇ ಎಂಬುದು ತನಿಖೆ ನಡೆಸಿದ ಬಳಿಕ ಪತ್ತೆ ಮಾಡಲಾಗುವುದು’ ಎಂದು ಹೇಳಿದರು. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ