ಮದುವೆಗೆ ನಿರಾಕರಣೆ: ಯುವತಿಯ ಮೇಲೆ ಪಾಗಲ್‌ ಪ್ರೇಮಿಯಿಂದ ಮಚ್ಚಿನಿಂದ ಹಲ್ಲೆ

By Suvarna News  |  First Published May 27, 2020, 3:27 PM IST

ಯುವತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾದ ಆರೋಪಿ| ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದ ಘಟನೆ| ಕಳೆದ ಕೆಲವು ತಿಂಗಳಿಂದ ಭಿನ್ನಾಭಿಪ್ರಾಯ| ಇಬ್ಬರ ನಡುವೆ ಜಗಳ ಆರಂಭವಾಗಿ ದೂರಾಗಿದ್ದರು| ಮದುವೆ ನಿರಾಕರಿಸಿದ ಕಾರಣಕ್ಕೆ ಮಂಡ್ಯದಿಂದ ಬಂದು ಹಲ್ಲೆ ಮಾಡಿ ಪರಾರಿ| ಮಚ್ಚಿನಿಂದ ಐದಕ್ಕೂ ಹೆಚ್ಚು ಬಾರಿ ಯುವತಿಗೆ ಮಚ್ಚಿನಿಂದ ಹಲ್ಲೆ|


ಬೆಂಗಳೂರು(ಮೇ.27): ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಕ್ಕೆ ಪಾಗಲ್‌ ಪ್ರೇಮಿಯೊಬ್ಬ ಯುವತಿ ಮೇಲೆ ಮಚ್ಚಿನಿಂದ ಮನಬಂದಂತೆ ಹಲ್ಲೆ ನಡೆಸಿದ ಘಟನೆ ಅನ್ನಪೂರ್ಣೇಶ್ವರಿ ನಗರದ ವಿಶಾಲ್ ಮಾರ್ಟ್ ಬಳಿ ಇಂದು(ಬುಧವಾರ) ನಡೆದಿದೆ. ಗಿರೀಶ್‌ ಎಂಬಾತನೇ ಯುವತಿಗೆ ಮೇಲೆ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ. 

ಸದ್ಯ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡ ಯುವತಿಯನ್ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯುವತಿ ಮೇಲೆ ಹಲ್ಲೆ ನಡೆಸಿ ಆರೋಪಿ ಗಿರೀಶ್‌ ಪರಾರಿಯಾಗಿದ್ದಾನೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Tap to resize

Latest Videos

ಏನಿದು ಪ್ರಕರಣ..?

ಮಂಡ್ಯದಲ್ಲಿ ಕಾಲೇಜು ವ್ಯಾಸಂಗ ಮಾಡುವ ವೇಳೆ ಆರೋಪಿ ಗಿರೀಶ್ ಹಾಗೂ ಹಲ್ಲೆಗೊಳಗಾದ 27 ವರ್ಷದ ಯುವತಿ ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇಬ್ಬರ ನಡುವೆ ಜಗಳ ಆರಂಭವಾಗಿ ದೂರಾಗಿದ್ದರು. ಬಳಿಕ ಯುವತಿಗೆ ಮಂಡ್ಯದಿಂದ ಬಂದು ಬೆಂಗಳೂರಿನ ಪಾಪರೆಡ್ಡಿ ಪಾಳ್ಯದಲ್ಲಿ ನೆಲೆಸಿದ್ದಳು. ಆರೋಪಿ ಗಿರೀಶ್ ಖಾಸಗಿ ಆಸ್ಪತ್ರೆಯ ಸೆಕ್ಯೂರಿಟಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈ ನಡುವೆ ಆರೋಪಿ ಗಿರೀಶ್ ಆಕೆಯ ಹಿಂದೆ ಬಿದ್ದು ಮದುವೆಯಾಗು ಅಂತ ಪೀಡಿಸುತಿದ್ದನು. 

ವಿವಾಹಿತ ಮಹಿಳೆ ಜೊತೆ ಲವ್: ಬಾವಿಯಲ್ಲಿ 9 ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್!

ಈ ಹಿಂದೆ ಇಬ್ಬರ ಪ್ರೀತಿಯ ಗಲಾಟೆ ಠಾಣೆ ಮೆಟ್ಟಿಲೇರಿತ್ತು. ಬಳಿಕ ರಾಜಿ ಮಾಡಿಕೊಂಡು ಸುಮ್ಮನಿರುವುದಾಗಿ ಆರೋಪಿ ಗಿರೀಶ್‌ ಹೇಳಿದ್ದ.ಯುವತಿಗೆ ಬೇರೊಬ್ಬನ ಜೊತೆ ಮದುವೆ ನಿಶ್ಚಯವಾಗಿತ್ತು. ಜೂನ್‌ನಲ್ಲಿ ಮದುವೆಗೆ ಡೆಟ್ ಫಿಕ್ಸ್ ಕೂಡ ಆಗಿತ್ತು. ಈ ಹಿನ್ನೆಲೆಯಲ್ಲಿ ಬಟ್ಟೆ ಶಾಪಿಂಗ್‌ಗೆಂದು ಯುವತಿ ಹೊರ ಬಂದಿದ್ದಳು. ಈ ವೇಳೆ ಮಂಡ್ಯದಿಂದ ಆಗಮಿಸಿದ್ದ ಆರೋಪಿ ಗಿರೀಶ್‌ ಯುವತಿ  ಮೇಲೆ ಮಚ್ಚಿನಿಂದ ಐದಕ್ಕೂ ಹೆಚ್ಚು ಬಾರಿ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಯುವತಿಯ ಕುತ್ತಿಗೆ, ತಲೆ, ಕಾಲು, ಹೊಟ್ಟೆ ಭಾಗಕ್ಕೆ ತೀವ್ರತರವಾದ ಗಾಯಗಳಾಗಿವೆ. 

click me!