* ಕೆಂಗೇರಿ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದ ಅರೋಪಿ
* ಆರೋಪಿಯಿಂದ 10.200 ಕೆ.ಜಿ. ಗಾಂಜಾ ಹಾಗೂ ಆಟೋ ವಶ
* ಮತ್ತೊಬ್ಬ ಆರೋಪಿ ಪತ್ತೆಗೆ ತನಿಖೆ ಮುಂದುವರೆಸಿದ ಪೊಲೀಸರು
ಬೆಂಗಳೂರು(ಫೆ.13): ಆಂಧ್ರಪ್ರದೇಶದ(Andhra Pradesh) ಅರಣ್ಯದಲ್ಲಿ ಗಾಂಜಾ(Marijuana) ಬೆಳೆದು ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ ವ್ಯಕ್ತಿ ಕೆಂಗೇರಿ ಠಾಣೆ ಪೊಲೀಸರಿಗೆ(Police) ಸಿಕ್ಕಿಬಿದ್ದಿದ್ದಾನೆ.
ಕೋಲಾರ(Kolar) ಜಿಲ್ಲೆ ಕೆಜಿಎಫ್(KGF) ನಿವಾಸಿ ಸುನಿಲ್ ಬಂಧಿತನಾಗಿದ್ದು(Arrest), ಆರೋಪಿಯಿಂದ(Accused) 10.200 ಕೆ.ಜಿ. ಗಾಂಜಾ ಹಾಗೂ ಆಟೋ ವಶಪಡಿಸಿಕೊಳ್ಳಲಾಗಿದೆ. ಎರಡು ದಿನಗಳ ಹಿಂದೆ ಕೆಂಗೇರಿಯಲ್ಲಿ ಪೆಡ್ಲರ್ ಆಟೋದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಲಭಿಸಿದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಸಿಕ್ಕಿಬಿದ್ದ. ಈತನ ಸಂಪರ್ಕದಲ್ಲಿದ್ದ ಆಂಧ್ರಪ್ರದೇಶ ಮೂಲದ ಮತ್ತೊಬ್ಬ ಆರೋಪಿ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.
Visakhapatnam: 500 ಕೋಟಿ ಮೌಲ್ಯದ 2 ಲಕ್ಷ ಕೇಜಿ ಗಾಂಜಾಕ್ಕೆ ಆಂಧ್ರ ಪೊಲೀಸರಿಂದ ಬೆಂಕಿ
ಕೆಜಿಎಫ್‌ನ ಸುನಿಲ್, ಆಂಧ್ರಪ್ರದೇಶದ ಗಡಿ ಭಾಗದ ಕಾಡಿನಲ್ಲಿ ತನ್ನ ಸಹಚರ ಜತೆ ಸೇರಿ ಕಾನೂನುಬಾಹಿರವಾಗಿ ಗಾಂಜಾ ಬೆಳೆಯುತ್ತಿದ್ದ. ಬಳಿಕ ಗಾಂಜಾವನ್ನು ಕತ್ತರಿಸಿ ಚೀಲದಲ್ಲಿ ತುಂಬಿಕೊಂಡು ಮನೆಗೆ ತಂದು ಅದನ್ನು ಒಣಗಿಸುತ್ತಿದ್ದ. ನಂತರ ಒಣಗಿದ ಗಾಂಜಾವನ್ನು ಬೆಂಗಳೂರು(Bengaluru) ಸೇರಿದಂತೆ ಇತರೆ ಜಿಲ್ಲೆಗಳ ಪೆಡ್ಲರ್‌ಗಳಿಗೆ(Peddlers) ಸಣ್ಣ ಸಣ್ಣ ಪೊಟ್ಟಣಗಳಲ್ಲಿ ತುಂಬಿ ಸುನಿಲ್ ಪೂರೈಸುತ್ತಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಪೆಡ್ಲರ್‌ಗಳಿಬ್ಬರ ಸೆರೆ: 4 ಕೇಜಿ ಗಾಂಜಾ ಜಪ್ತಿ
ಬೆಂಗಳೂರು: ನಗರದಲ್ಲಿ ಗಾಂಜಾ ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತುಂಗಾ ನಗರದ ಲೋಕೇಶ್ ಹಾಗೂ ಆಂಧ್ರಪ್ರದೇಶದ ಸೂರ್ಯನಾರಾಯಣ ಬಂಧಿತರಾಗಿದ್ದು, ಆರೋಪಿಗಳಿಂದ 4.422 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಮಾದಕ ವಸ್ತು ಸೇವಿಸಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತನಿಗೆ ಲೋಕೇಶ್ ಗಾಂಜಾ ಪೂರೈಸಿದ್ದು ಗೊತ್ತಾಗಿದೆ. ಈ ಮಾಹಿತಿ ಆಧರಿಸಿ ಮಾಲು ಸಮೇತ ಪೆಡ್ಲರ್‌ಗಳನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ತುಂಗಾ ನಗರದ ಲೋಕೇಶ್ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು, ಆತನ ಮೇಲೆ ಹಲವು ಪ್ರಕರಣಗಳಿವೆ. ಅಪರಾಧ ಕೃತ್ಯದ ಆರೋಪ ಹೊತ್ತು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾಗ ಆತನಿಗೆ ಸೂರ್ಯನಾರಾಯಣನ ಸಂಪರ್ಕವಾಗಿದೆ. ನಂತರ ಹಣದಾಸೆಗೆ ಲೋಕೇಶ್ ಗಾಂಜಾ ದಂಧೆ ಆರಂಭಿಸಿದ್ದಾನೆ. ಆಂಧ್ರಪ್ರದೇಶದ ಕದ್ರಿಯಿಂದ ಗಾಂಜಾ ತಂದು ಲೋಕೇಶ್‌ಗೆ ಸೂರ್ಯನಾರಾಯಣ ಪೂರೈಸುತ್ತಿದ್ದ. ನಂತರ ಆ ಗಾಂಜಾವನ್ನು ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ತುಂಬಿ ಗ್ರಾಹಕರಿಗೆ(Customers) ದುಬಾರಿ ಬೆಲೆಗೆ ಲೋಕೇಶ್ ಮಾರುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಡ್ರಗ್ಸ್ ದಂಧೆ: ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರ ಸೆರೆ
ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾದಕವಸ್ತು(Drugs) ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪಶ್ಚಿಮ ವಿಭಾಗದ ಪೊಲೀಸರು 11 ಕೆ.ಜಿ. ಗಾಂಜಾ ಹಾಗೂ 375 ಗ್ರಾಂ ಗಾಂಜಾ ಎಣ್ಣೆ ಜಪ್ತಿ ಮಾಡಿದ್ದಾರೆ.
ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯ ರಾಜಾಜಿನಗರ 5ನೇ ಬ್ಲಾಕ್‌ನ 10ನೇ ಮುಖ್ಯರಸ್ತೆಯ ದಂಡಪಾಣಿ ದೇವಸ್ಥಾನದ ಹಿಂಭಾಗ ಫೆ.10ರಂದು ಮಧ್ಯಾಹ್ನ 1.15ರ ಸುಮಾರಿಗೆ ವ್ಯಕ್ತಿಯೊಬ್ಬ ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಚಾಮುಂಡಿನಗರದ ಶರತ್‌ಕುಮಾರ್ ಅಲಿಯಾಸ್ ವಾಸ್ನೆ(30) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ 4 ಕೆ.ಜಿ. ಗಾಂಜಾ ಹಾಗೂ 375 ಗ್ರಾಂ ಗಾಂಜಾ ಎಣ್ಣೆ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Bengaluru Drug Bust: ಜೈಲು ಪಾಲಾದ ಲೀಡರ್‌ಗೆ ಬೇಲ್ ಕೊಡಿಸಲು ಶಿಷ್ಯರಿಂದ ಡ್ರಗ್ಸ್ ದಂಧೆ
ಆರೋಪಿಯು ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು(Students) ಹಾಗೂ ಟೆಕ್ಕಿಗಳು ಮತ್ತು ಮಾದಕವಸ್ತು ಸೇವನೆಯ ಚಟಕ್ಕೆ ಬಿದ್ದಿರುವ ವ್ಯಕ್ತಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ. ಆರೋಪಿಯು ಈ ಹಿಂದೆ ಗಾಂಜಾ ಮಾರಾಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ. ಜಾಮೀನು ಪಡೆದು ಹೊರಬಂದ ಬಳಿಕವೂ ಹಳೇ ಚಾಳಿ ಮಂದುವರಿಸಿದ್ದ ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ ಎಂ.ವಿಶ್ವೇಶ್ವರಯ್ಯ ಬಡಾವಣೆ 1ನೇ ಬ್ಲಾಕ್‌ನ ಡಾಬಾವೊಂದರ ಬಳಿ ಫೆ.10ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬ ಮಾದಕ ವಸ್ತು ಮಾರಾಟಕ್ಕೆ ಯತ್ನಿಸುರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಮರುಗೇಶ್ ಪಾಳ್ಯದ ಹರೀಶ್(31) ಎಂಬಾತನನ್ನು ಬಂಧಿಸಿದ್ದರು. ಆರೋಪಿಯಿಂದ 7 ಕೆ.ಜಿ. ತೂಕದ ಗಾಂಜಾ, 400 ರು. ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.