ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ವಶಪಡಿಸಿಕೊಂಡಿದ್ದ ಸುಮಾರು 500 ಕೋಟಿ ರು. ಮೌಲ್ಯದ 2 ಲಕ್ಷ ಕೆಜಿಯಷ್ಟು ಭಾರೀ ಪ್ರಮಾಣದ ಗಾಂಜಾಕ್ಕೆ ಸ್ಥಳೀಯ ಪೊಲೀಸರು ಶನಿವಾರ ಬೆಂಕಿ ಹಚ್ಚಿ ನಾಶ ಮಾಡಿದ್ದಾರೆ.
ವಿಶಾಖಪಟ್ಟಣ (ಫೆ.13): ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ವಶಪಡಿಸಿಕೊಂಡಿದ್ದ ಸುಮಾರು 500 ಕೋಟಿ ರು. ಮೌಲ್ಯದ 2 ಲಕ್ಷ ಕೆಜಿಯಷ್ಟು ಭಾರೀ ಪ್ರಮಾಣದ ಗಾಂಜಾಕ್ಕೆ (Marijuana) ಸ್ಥಳೀಯ ಪೊಲೀಸರು (Poilice) ಶನಿವಾರ ಬೆಂಕಿ ಹಚ್ಚಿ ನಾಶ ಮಾಡಿದ್ದಾರೆ. ದೇಶದಲ್ಲಿ, ಒಂದೇ ಸಮಯದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗಾಂಜಾವನ್ನು ನಾಶ ಮಾಡಿದ ಮೊದಲ ಘಟನೆ ಇದಾಗಿದೆ.
ಕಳೆದ ಎರಡು ವರ್ಷಗಳಲ್ಲಿ ವಿಶಾಖಪಟ್ಟಣ, ಶ್ರೀಕಾಕುಲಂ ಹಾಗೂ ಪೂರ್ವ ಗೋದಾವರಿ ಜಿಲ್ಲೆಗಳಿಂದ ಸುಮಾರು 2 ಲಕ್ಷ ಕೇಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು. ಕೇವಲ ವಿಶಾಖಪಟ್ಟಣ ಜಿಲ್ಲಾ ವ್ಯಾಪ್ತಿಯಲ್ಲೇ 1.5 ಲಕ್ಷ ಕೇಜಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಇವುಗಳನ್ನೆಲ್ಲಾ ಒಟ್ಟುಗೂಡಿಸಿ ಡಿಜಿಪಿ ಗೌತಮ್ ಸಾವಂಗ್ ಸಮ್ಮುಖದಲ್ಲಿ ‘ಆಪರೇಶನ್ ಪರಿವರ್ತನ್’ ಭಾಗವಾಗಿ 2 ಲಕ್ಷ ಕೇಜಿ ಗಾಂಜಾವನ್ನು ಬೆಂಕಿ ಹಚ್ಚಿ ನಾಶಪಡಿಸಲಾಯಿತು.
ವಿಶಾಖಪಟ್ಟಣಂ ಪೊಲೀಸರು ಕಳೆದ ವರ್ಷದಿಂದ ‘ಆಪರೇಶನ್ ಪರಿವರ್ತನ್’ ಎಂಬ ಯೋಜನೆಯನ್ನು ಆರಂಭಿಸಿದ್ದಾರೆ. ಈ ಯೋಜನೆಯಂತೆ ವಶಪಡಿಸಿಕೊಂಡ ಗಾಂಜಾವನ್ನು ನಾಶಗೊಳಿಸಲಾಗುತ್ತದೆ. ಜೊತೆಗೆ ವಿಶಾಖಪಟ್ಟಣದ ಗ್ರಾಮೀಣ ಬುಡಕಟ್ಟು ಸಮುದಾಯದ ರೈತರಿಗೆ ಗಾಂಜಾ ಬದಲಿಗೆ ಇನ್ನಿತರ ಬೆಳೆಗಳನ್ನು ಬೆಳಸಲು ಪ್ರೋತ್ಸಾಹಿಸಲಾಗುತ್ತದೆ.
Drugs Racket in Bengaluru: ಆಫ್ರಿಕನ್ ಪ್ರಜೆಗಳ ನಿವಾಸದ ಮೇಲೆ ಸಿಸಿಬಿ ಪೊಲೀಸರ ದಾಳಿ
ಗಾಂಜಾ ಮಾರಾಟಕ್ಕೆ ಯತ್ನ-ಇಬ್ಬರ ಸೆರೆ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಾದಕವಸ್ತು(Drugs) ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪಶ್ಚಿಮ ವಿಭಾಗದ ಪೊಲೀಸರು(Police) 11 ಕೆ.ಜಿ. ಗಾಂಜಾ(Marijuana) ಹಾಗೂ 375 ಗ್ರಾಂ ಗಾಂಜಾ ಎಣ್ಣೆ ಜಪ್ತಿ ಮಾಡಿದ್ದಾರೆ.
ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯ ರಾಜಾಜಿನಗರ 5ನೇ ಬ್ಲಾಕ್‌ನ 10ನೇ ಮುಖ್ಯರಸ್ತೆಯ ದಂಡಪಾಣಿ ದೇವಸ್ಥಾನದ ಹಿಂಭಾಗ ಫೆ.10ರಂದು ಮಧ್ಯಾಹ್ನ 1.15ರ ಸುಮಾರಿಗೆ ವ್ಯಕ್ತಿಯೊಬ್ಬ ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಚಾಮುಂಡಿನಗರದ ಶರತ್‌ಕುಮಾರ್ ಅಲಿಯಾಸ್ ವಾಸ್ನೆ(30) ಎಂಬಾತನನ್ನು ಬಂಧಿಸಲಾಗಿದೆ(Arrest). ಆರೋಪಿಯಿಂದ(Accused) 4 ಕೆ.ಜಿ. ಗಾಂಜಾ ಹಾಗೂ 375 ಗ್ರಾಂ ಗಾಂಜಾ ಎಣ್ಣೆ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು(Students) ಹಾಗೂ ಟೆಕ್ಕಿಗಳು ಮತ್ತು ಮಾದಕವಸ್ತು ಸೇವನೆಯ ಚಟಕ್ಕೆ ಬಿದ್ದಿರುವ ವ್ಯಕ್ತಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ. ಆರೋಪಿಯು ಈ ಹಿಂದೆ ಗಾಂಜಾ ಮಾರಾಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ. ಜಾಮೀನು(Bail) ಪಡೆದು ಹೊರಬಂದ ಬಳಿಕವೂ ಹಳೇ ಚಾಳಿ ಮಂದುವರಿಸಿದ್ದ ಪೊಲೀಸರು ತಿಳಿಸಿದ್ದಾರೆ.
Bengaluru Crime: ಪೆಡ್ಲರ್‌ಗಳಿಗೆ ಮಾದಕವಸ್ತು ಪೂರೈಸುತ್ತಿದ್ದ ಮೂವರ ಸೆರೆ: 40 ಕೆಜಿ ಗಾಂಜಾ ವಶ
ಮತ್ತೊಂದು ಪ್ರಕರಣದಲ್ಲಿ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ ಎಂ.ವಿಶ್ವೇಶ್ವರಯ್ಯ ಬಡಾವಣೆ 1ನೇ ಬ್ಲಾಕ್‌ನ ಡಾಬಾವೊಂದರ ಬಳಿ ಫೆ.10ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಮರುಗೇಶ್ ಪಾಳ್ಯದ ಹರೀಶ್(31) ಎಂಬಾತನನ್ನು ಬಂಧಿಸಿದ್ದರು. ಆರೋಪಿಯಿಂದ 7 ಕೆ.ಜಿ. ತೂಕದ ಗಾಂಜಾ, 400 ರು. ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.