4 ಕೋಟಿ ಚಿನ್ನಾಭರಣ ಕದ್ದ ಕಳ್ಳರು, 40 ರೂಪಾಯಿ ಪೇಟಿಎಂ ಮಾಡಿ ಸಿಕ್ಕಿಬಿದ್ರು!

By Santosh Naik  |  First Published Sep 2, 2022, 12:36 PM IST

ದೆಹಲಿಯಲ್ಲಿ ನಾಲ್ಕು ಕೋಟಿ ಮೌಲ್ಯದ ಚಿನ್ನಾಭರಣ ದೋಚಿದವರ ಬಳಿ 40 ರೂಪಾಯಿಯೂ ಇರಲಿಲ್ಲ. ಅದಕ್ಕಾಗಿ ಆರೋಪಿಗಳು ಪೇಟಿಎಂ ಮಾಡಿ ಕ್ಯಾಬ್ ಚಾಲಕನಿಂದ 40 ರೂಪಾಯಿ ನಗದು ತೆಗೆದುಕೊಂಡಿದ್ದರು. ಈ ಆನ್‌ಲೈನ್‌ ವಹಿವಾಟಿನ ಜಾಡು ಹಿಡಿದ ಪೊಲೀಸರು, ರಾಜಸ್ಥಾನ ಮೂವರು ಆರೋಪಿಗಳನ್ನು ಬಂಧನ ಮಾಡಿದ್ದು, ಇವರಿಂದ ಈಗಾಗಲೇ 2 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
 


ನವದೆಹಲಿ (ಸೆ. 2): ಕಳ್ಳ ಎಷ್ಟೇ ಜಾಣ, ಚಾಣಾಕ್ಷನಾಗಿರಲಿ. ಆತನನ್ನು ಜೈಲಿಗೆ ಸೇರಿಸಲು ಅವನು ಮಾಡುವ ಒಂದೇ ಒಂದು ಸಣ್ಣ ತಪ್ಪು ಸಾಕು.. ಎನ್ನುವ ಮಾತಿದೆ. ಅಂಥದ್ದೇ ರೀತಿಯ ಪ್ರಕರಣ ಇದು. ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದ ಕಳ್ಳರ ಬಳಿ ಖರ್ಚು ಮಾಡಲು 40 ರೂಪಾಯಿ ಕೂಡ ಇರಲಿಲ್ಲ. ನಗದು ಹಣಕ್ಕಾಗಿ ಆನ್‌ಲೈನ್‌ ವ್ಯವಹಾರ ಮಾಡಿದ್ದೇ ಕಳ್ಳರ ಜಾಡು ಹಿಡಿದು ಕೊಟ್ಟ ಘಟನೆ ನವದೆಹಲಿಯಲ್ಲಿ ನಡೆಯಲಿದೆ. ದೆಹಲಿಯ ಪತ್ಪರ್‌ಗಂಜ್‌ನಲ್ಲಿ  ಆಭರಣ ಮಳಿಗೆಯನ್ನು ದರೋಡೆ ಕಳ್ಳರು ಕೂಡ ಚಾಣಾಕ್ಷರಾಗಿದ್ದರೂ ಅವರು ಮಾಡಿದ ಒಂದೇ ಒಂದು ತಪ್ಪಿಗೆ ಇಂದು ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ. ಆಭರಣ ಮಳಿಗೆಯಲ್ಲಿ ಅಂದಾಜು 4 ಕೋಟಿ ಮೌಲ್ಯದ ಚಿನ್ನಾಭರಣವನ್ನು ಇವರು ದೋಚಿದ್ದರು. ಆದರೆ, ಆ ಬಳಿಕ ಅವರ ಕಿಸೆಯಲ್ಲಿ 40 ರೂಪಾಯಿ ಕೂಡ ಇರಲಿಲ್ಲ. ಇದ್ದಿದ್ದು, ಕೋಟಿಗಟ್ಟಲೆ ಮೌಲ್ಯದ ಚಿನ್ನ ಮಾತ್ರ. ಈ ವೇಳೆ ಕ್ಯಾಬ್‌ ಚಾಲಕನೊಬ್ಬನಿಗೆ ಪೇಟಿಎಂ ಮೂಲಕ 40 ರೂಪಾಯಿ ಕಳಿಸಿ, 40 ರೂಪಾಯಿ ನಗದು ಹಣವನ್ನು ಪಡೆದುಕೊಂಡಿದ್ದರು. ಈ ಆನ್‌ಲೈನ್ ವಹಿವಾಟಿನ ಮೂಲಕ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಜಸ್ಥಾನದ ಮೂವರು ಆರೋಪಿಗಳನ್ನು ಕಳ್ಳತನದ ಆರೋಪದಲ್ಲಿ ಬಂಧಿಸಲಾಗಿದ್ದು, ಸದ್ಯ ಆರೋಪಿಗಳಿಂದ ಪೊಲೀಸರು ಎರಡು ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಏನಿದು ಪ್ರಕರಣ: ಆಗಸ್ಟ್‌ 31ರ ಬುಧವಾರದಂದು ಬೆಳಗ್ಗೆ 4.30ರ ಸುಮಾರಿಗೆ ಕೊರಿಯರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಹುಡುಗರು, ಚಿನ್ನಾಭರಣ ಮಳಿಗೆಯನ್ನು ಕಳ್ಳತನ ಮಾಡಿದ್ದಲ್ಲದೆ, 4 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಕದ್ದು ಪರಾರಿಯಾಗಿದ್ದರು. ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದ ಪೊಲೀಸರು ವಿಚಾರಣೆ ಆರಂಭ ಮಾಡಿದ್ದರು. ತನಿಖೆಯ ವೇಳೆ ಪೊಲೀಸರು ಕಳ್ಳತನವಾದ ಮಳಿಗೆಯ ಸಮೀಪದ ಅಂದಾಜು 200 ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದರು.

ಪೊಲೀಸರು  (Police) 1 ವಾರದ ಹಿಂದಿನ ದೃಶ್ಯಾವಳಿಗಳನ್ನು ತನಿಖೆ ಮಾಡಲು ಪ್ರಾರಂಭಿಸಿದಾಗ, ಆರೋಪಿಗಳು ಒಂದು ವಾರದಿಂದ ಈ ಪ್ರದೇಶದಲ್ಲಿ ವಿಹಾರ ನಡೆಸುತ್ತಿರುವುದು ಕಂಡುಬಂದಿದೆ. ಅದೇ ದೃಶ್ಯಗಳ ತನಿಖೆಯ ಸಮಯದಲ್ಲಿ, ಆರೋಪಿಗಳು ಪತ್ಪರ್‌ಗಂಜ್‌ (Patparganj) ಪ್ರದೇಶದಲ್ಲಿ ಕ್ಯಾಬ್ ಚಾಲಕನೊಂದಿಗೆ ಮಾತನಾಡುತ್ತಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಇದಾದ ಬಳಿಕ ಕ್ಯಾಬ್ ನಂಬರ್ (Cab Number) ಮೂಲಕ ಪೊಲೀಸರು ಚಾಲಕನ ಬಗ್ಗೆ ತಿಳಿದುಕೊಂಡಿದ್ದಾರೆ.

ತುಮಕೂರು: ಪದೇ ಪದೇ ಮೂತ್ರ ಮಾಡಿದ ಬಾಲಕನ ಗುಪ್ತಾಂಗ ಸುಟ್ಟ ಶಿಕ್ಷಕಿ

ಕ್ಯಾಬ್‌ ಚಾಲಕನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದ್ದಾರೆ. ಈ ವೇಳೆ ಆತ, ಅವರಿಬ್ಬರು ಅಲ್ಲಿಯೇ ಇದ್ದ ಚಹಾ ಅಂಗಡಿಯನ್ನು ಟೀ ಕುಡಿಯುತ್ತಿದ್ದರು. ಅವರ ಬಳಿ ನೀಡಲು ನಗದು ಹಣವಿರಲಿಲ್ಲ. ಇನ್ನು ಅಂಗಡಿ ಮಾಲೀಕನ ಬಳಿ ಆನ್‌ಲೈನ್‌ ವಹಿವಾಟು (Online Transaction) ಮಾಡುವ ಯಾವುದೇ ವ್ಯವಸ್ಥೆ ಇರಲಿಲ್ಲ. ಅದಕ್ಕಾಗಿ ನನ್ನ ಬಳಿಕ ಬಂದು 40 ರೂಪಾಯಿಯನ್ನು ಪೇಟಿಎಂ ಮಾಡಿದ್ದರು. ನಾನು ಅವರಿಗೆ 40 ರೂಪಾಯಿ ನಗದು ಹಣವನ್ನು ನೀಡಿದ್ದೆ ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ.

Bengaluru Crime News: ಯುವತಿ ಮೇಲೆ ಸ್ನೇಹಿತರಿಂದಲೇ ಗ್ಯಾಂಗ್ ರೇಪ್

ಇದರ ನಂತರ, ಪೊಲೀಸರು ಆ ಆನ್‌ಲೈನ್ ವಹಿವಾಟಿನ ವಿವರಗಳನ್ನು ತೆಗೆದುಕೊಂಡಾಗ, ಈ ವ್ಯಕ್ತಿಯು ದೆಹಲಿಯ ನಜಾಫ್‌ಗಢ ನಿವಾಸಿ ಎಂದು ಕಂಡುಬಂದಿದೆ ಆದರೆ ಅವನ ಮೂಲಸ್ಥಳ ಜೈಪುರ ಎಂದು ತಿಳಿದುಬಂದಿದೆ. ಇದಾದ ನಂತರ ಪೊಲೀಸರ ತಂಡ ತಕ್ಷಣವೇ ಜೈಪುರಕ್ಕೆ ತೆರಳಿ ಅಲ್ಲಿಂದ ಮೂವರನ್ನು ವಶಕ್ಕೆ ತೆಗೆದುಕೊಂಡಿತು. ಆರೋಪಿಗಳಿಂದ ಕೋಟ್ಯಂತರ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Tap to resize

Latest Videos

click me!