ಪಾಕಿಸ್ತಾನದ ಮಹಿಳೆ ಭಟ್ಕಳದಲ್ಲಿ ಬಂಧನಕ್ಕೊಳಗಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಹಿಳೆಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪಾಸ್‌ಪೋರ್ಟ್ ಹಾಗೂ ಇತರ ಯಾವುದೇ ದಾಖಲೆಗಳನ್ನು ಹೊಂದದೆ ಭಾರತಕ್ಕೆ ನುಸುಳಿದ್ದ ಮಹಿಳೆಯನ್ನು ಬಂಧಿಸಿ ಜೈಲಿಗಟ್ಟಿದ್ದರು.
ಕಾರವಾರ (ನ.6) : ಪಾಕಿಸ್ತಾನದ ಮಹಿಳೆ ಭಟ್ಕಳದಲ್ಲಿ ಬಂಧನಕ್ಕೊಳಗಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮಹಿಳೆಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪಾಕಿಸ್ತಾನ ಮೂಲದ ಮಹಿಳೆ ಖತೀಜಾ ಮೆಹರೀನ್ ಪಾಸ್‌ಪೋರ್ಟ್ ಹಾಗೂ ಇತರ ಯಾವುದೇ ದಾಖಲೆಗಳನ್ನು ಹೊಂದದೆ ಭಾರತಕ್ಕೆ ನುಸುಳಿದ್ದಳು. ಗುಪ್ತಚರ ಅಧಿಕಾರಿಗಳು ಮಹಿಳೆಯನ್ನು ಬಂಧಿಸಿ ಜೈಲಿಗಟ್ಟಿದ್ದರು.
ದಾಖಲೆಗಳಿಲ್ಲದೆ ಭಾರತದ ಗಡಿ ನುಸುಳಿದ್ದ ಖತೀಜಾ ಟ್ಕಳದ ದಿ.ಜಾವೇದ್ ರುಕ್ಕುದ್ಧೀನ್ ಎಂಬಾತನನ್ನು ಮದುವೆಯಾಗಿದ್ದಳು. ಹಲವು ವರ್ಷಗಳ ಕಾಲ ಯಾರ ಗಮನಕ್ಕೂ ಬಾರದಂತೆ ವಾಸವಾಗಿದ್ದಳು. ಪಾಕಿಸ್ತಾನ ಮೂಲದ ಖತೀಜಾ ಎಂಬ ಮಹಿಳೆ. ಪಾಸ್‌ಪೋರ್ಟ್ ಹಾಗೂ ಇತರೆ ಯಾವುದೇ ದಾಖಲೆಗಳಿಲ್ಲದೆ ಭಾರತಕ್ಕೆ ನುಸುಳಿದ್ದಾಳೆ ವಿಚಾರ ತಿಳಿಯುತ್ತಿದ್ದಂತೆ ಗುಪ್ತಚರ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದರು. ರಾಜ್ಯ ಪೊಲೀಸರು ಕೂಡ ಈ ಕಾರ್ಯಾಚರಣೆಯಲ್ಲಿದ್ದರು. ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ಪಾಕಿಸ್ತಾನ ಮೂಲದ ಮಹಿಳೆಯನ್ನು ಪತ್ತೆ ಹಚ್ಚಿದ್ದ ಅಧಿಕಾರಿಗಳು.. ಮಹಿಳೆಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಗುಪ್ತಚರ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಮೂವರು ಮಕ್ಕಳನ್ನು ಹೊಂದಿದ್ದ ಖತೀಜಾ ಹಾಗೂ ದಿ.ಜಾವೇದ್ ದಂಪತಿ. ಖತೀಜಾ ಬಂಧನದ ಬಳಿಕ ಒಂಟಿಯಾಗಿದ್ದ ಜಾವೇದ್ ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಯಾವುದೇ ದಾಖಲೆಗಳಿಲ್ಲದೆ ಗಡಿ ನುಸುಳಿದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ನಡೆಸಿದ್ದ ಹೈಕೋರ್ಟ್ ಧಾರವಾಡ ಪೀಠ. ಮಹಿಳೆ 1 ಲಕ್ಷ ರೂ. ಮೌಲ್ಯದ ಬಾಂಡ್ ಸಲ್ಲಿಸಬೇಕು, ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಬಾರದು, ಪೂರ್ವನುಮತಿ ಇಲ್ಲದೇ ತಾನಿರುವ ಸ್ಥಳದಿಂದ ಬೇರೆಲ್ಲೂ ಹೋಗಬಾರದು ಮುಂತಾದ ಷರತ್ತಿನೊಂದಿಗೆ ಜಾಮೀನು ಮಂಜೂರು ಮಾಡಿದೆ.
6 ವರ್ಷಗಳಿಂದ ಅಕ್ರಮ ವಾಸ ಮಾಡ್ತಿದ್ದಳು ಪಾಕ್ ಲೇಡಿ, ತನಿಖೆ ತೀವ್ರಗೊಳಿಸಲು ಸೂಚನ